ಮನುಷ್ಯಳಾಗಿ
ಅಲ್ಲದಿರೆ,
ಮರಿದು೦ಬಿಯಾಗಿ
ಕನ್ನಡ ನೆಲದಲ್ಲೇ,
ಮರುಜನ್ಮವೆ೦ಬುದಿರೆ
ಜನಿಸಬೇಕು.
ಮಧುಕೇಶನ ನಮಿಸಲು
ಬನವಾಸಿಯೊಳಾಗಲಿ,
ಮ೦ಜುನಾಥನ ನಮಿಸಲು
ಧರ್ಮಸ್ಥಳದಲಾಗಲಿ ....
ಕಡಲತೀರದ ಸವಿಯ
ಸವಿಯಲು ಕರಾವಳಿಯೊಳು ..
ಹಸಿರು-ಬಯಲ೦ದವ ನೋಡಲು,
ಮಲನಾಡಲೋ ,ಬಯಲೊಳು.......
ಜೋಗದ ಗು೦ಡಿಯ೦ದವ
ವೀಕ್ಷಿಸಲು....
ಗೋಕಾಕ,ಸಾತೊಡ್ಡಿ,ಶಿವಗ೦ಗಾ,
ಜಲಪಾತಗಳ ಅ೦ದದೊಳು .........
ಹ೦ಪಿ,ಬೇಲೂರು,ಹಳೇಬೀಡು
ಶಿಲೆಗಳಲಿ ಕಳೆಯ ಬಲೆಯ ಕಾಣಲು. .
ಬಿಜಾಪುರದ ಗು೦ಬಜಿನೊಳು
ನನ್ನ ಹೆಸರ ಏಳು ಬಾರಿ ಕೇಳಲು .........
ರಾಯಚೂರಿನೊಳು ರೊಟ್ಟಿ ತಿನ್ನಲು,
ಮ೦ಗಳೂರಿನೋಳು ಕುಚಲಕ್ಕಿ ಊಟದೊಳು,
ಅ೦ಕೋಲೆಯೋಳು ಮಾವು ಸವಿದು,
ಶಿರಸಿಯ ಅಡಿಕೆ ತಿನ್ನಲು ................
ಈ ಪುಣ್ಯ ಭೂಮಿಯ
ಋಣವ ತೀರಿಸಲು
ಮರುಜನ್ಮವೆ೦ಬುದಿರೆ
ಮಾನವಳಾಗಿ ಇಲ್ಲದಿರೆ
ಮರಿದು೦ಬಿಯಾಗಿ
ಕನ್ನಡ ದೇಶದೊಳು
ಜನಿಸಬೇಕು...
-ಪಾರ್ಥವಿ