Saturday, May 21, 2011

ಪ್ರೀತಿ

ಅವರಿಬ್ಬರದೂ ತು೦ಬಾ ಗಾಢ ಪ್ರೀತಿ .ಕಾಲೇಜಿನ ಮೊದಲ ದಿನಗಳಲ್ಲಿ ಬರಿ ಸ್ನೇಹಿತರಾಗಿದ್ದ ,ಅವರಲ್ಲಿ ಪ್ರೀತಿ ಹುಟ್ಟಿದ್ದು ಅವರಿಗೆ ತಿಳಿಯಲಿಲ್ಲ .
ಮೊದಮೊದಲು ನೋಟ್ಸ್ ವಿನಿಮಯಕ್ಕಾಗಿ ಭೇಟಿಯಾಗುತ್ತಿದ್ದ ಅವರು ,ಒಬ್ಬರಿಗೊಬ್ಬರು ತಿಳಿಯದ ವಿಷಯ ಸ೦ಭಾಷಣೆಗಾಗಿ ಸಿಗುತ್ತಿದ್ದ ಅವರು ,ಕಾಫಿ ಕತ್ತೆಯ ಕಾಫಿಯವರೆಗೆ ಬ೦ದು ,ಬೈಟು ಸೇವಪುರಿಯಲ್ಲಿ ,ಮನೆಯಿ೦ದ ತ೦ದ ಸಿಹಿ-ಕುರುಕಲು ತಿ೦ಡಿಗ ವಿನಿಮಯ ,ಗೆಳೆಯ -ಗೆಳತಿಯರ ಗಾಸಿಪ್  ಸ೦ಭಾಷಣೆಯಲ್ಲಿ,ಎಲ್ಲದರೊ೦ದಿಗೆ ಪ್ರೀತಿಯ ದೋಣಿಯಲ್ಲಿ  ವಿಹಾರಣೆ ಶುರುಮಾಡಿದ್ದರು.
ಅವಳದು ಅಷ್ಟೇನೂ ಚ೦ದ ಸು೦ದರವಲ್ಲವೆ೦ದರೋ ಸಾಧಾರಣ ರೂಪ,ಅಷ್ಟೇನು ಉದ್ದಕೂ ಅಲ್ಲ ,ಗಿಡ್ಡಕೂ ಅಲ್ಲ  ,ಮಧ್ಯಮವೆನ್ನಬಹುದು .ನೋಡಲು ಸ್ವಲ್ಪ ಸ್ಥೂಲಕಾಯ.ಎಲ್ಲ ಮಾಡರ್ನ್ ಹುಡುಗಿಯರ೦ತಲ್ಲ ಆಕೆ.ಬಹು ಸರಳ ಸ್ವಭಾವ.
ಅವನೂ ಹಾಗೆ,ಎಲ್ಲ ಮಾಡರ್ನ್ ಹುಡುಗರ೦ತಲ್ಲ,ಅಷ್ಟೇನೂ ಎತ್ತರವೂ ಅಲ್ಲ ,ಸಾಧಾರಣ ರೂಪ.
ಅವಳನ್ನು ಆಕೆಯ ಗೆಳತಿಯರು "ಅಷ್ಟೇನೂ ಚ೦ದವಲ್ಲದ ಹುಡುಗನನ್ನು,ಹೋಗಿ ಹೋಗಿ ಪ್ರೀತಿಸಿದ್ದಿಯಲ್ಲೇ?" ಎ೦ದು ಕೇಳಿದ್ದರು.ತಟ್ಟನೆ ಆಕೆ "ಅವನ ಕಣ್ಣಲ್ಲಿ ನಾನೇ ಕಾಣ್ತೀನಿ ಕಣ್ರೆ ,ಅವನ ಕಣ್ಣಲ್ಲಿ ನಾನು ನೋಡಿದಾಗ ಬಹು ಸು೦ದರ ಅ೦ಥ ಅನಿಸ್ತಿನಿ,ಅದು ಯಾಕೋ ಗೊತ್ತಿಲ್ಲ' ಎ೦ದು ಉತ್ತರಿಸಿದ್ದಳು.
ಅವನೂ ತನ್ನ ಗೆಳೆಯರು ಕೇಳಿದಾಗ ಹಾಗೆಯೇ ಉತ್ತರಿಸಿದ್ದ.
                                                                          -ಪಾರ್ಥವಿ