ಮಲೆನಾಡು,ಕರಾವಳಿ,ಬಯಲು
ಪಯಣ ಮುಗಿಸಿ
ರಾಜಧಾನಿ ನಗರಿಗೆ
ಬ೦ದಿಳಿದಿಹೆನು....
ಜ೦ಟಿ ವಾಹನಗಳ
ಗ೦ಟೆ ಪ್ರಯಾಣದಲಿ
ನೂರು ಕನಸುಗಳ
ಹೊತ್ತ ಯಾತ್ರೆಯಲಿ....
ನೂರು ಪ್ರಶ್ನೆ,ನೂರು ದಾರಿಗಳ
ನಡುವೆ ಒ೦ದು ದಾರಿಯ ಹಿಡಿದು
ಆ ದಾರಿಯಲಿ ಬೆಳಕಿನ
ಜಾಡು ಹಿಡಿದು....
ಹಳೆ ಗೆಳೆಯರ ಬಳಗಕ್ಕೆ
ಹೊಸ ತ೦ತ್ರಜ್ಞಾನ ಗೆಳೆಯರು
ಸೇರಿರಲು..
ಸಾಗರವೇ ಹರಿದಿದೆ .....
ಇನ್ನೂ ನೂರಾರು ಪ್ರಶ್ನೆ,
ಉತ್ಸಾಹ,ಕುತೂಹಲ,
ಅ೦ಜಿಕೆ,ಸ೦ತೋಷ
ಮತ್ತಿನ್ನೇನು???!!!!!!!
-ಪಾರ್ಥವಿ