ಬಾಗಿಲು ತುಂಬಾ,
ನಾವು ಬರೆದ ಸ್ಸಾರಿ,ಥ್ಯಾಂಕ್ಯು ನೋಟ್ ಗಳು!
ಗೋಡೆಯ ತುಂಬಾ,
ನಮ್ಮ ೧೪೩ ಬರಹಗಳು.......!!!!
ಅಡುಗೆ ಮನೆಯಲ್ಲಿ ,
ನಾ ನಿನಗಾಗಿ ಮಾಡಿಟ್ಟ ಸಿಹಿ ತಿನಿಸುಗಳು!
ಫ್ರಿಜ್ ತುಂಬೆಲ್ಲ,
ನೀ ಸರ್ಪ್ರೈಸಾಗಿ ತಂದಿಟ್ಟ ಚಾಕಲೇಟುಗಳು..!!
ಟೇಬಲ್ ತುಂಬಾ ,
ನಾ ನಿನಗಾಗಿ ಬರೆದಿಟ್ಟ ಪ್ರೇಮಕಾವ್ಯಗಳು!
ಕಪಾಟು ತುಂಬಾ,
ನೀ ನನಗಾಗಿ ಬರೆದ ಲವ್-ಲೆಟ್ಟರಗಳು...!!
ನಮ್ಮ ಪುಟ್ಟ ಲೈಬ್ರರಿಯೊಳು,
ಪುಸ್ತಕದ ತುಂಬೆಲ್ಲ,
ನೀ ಗೀಚಿದ ನನ್ನ ಹೆಸರುಗಳು!
ಮುತ್ತಿಟ್ಟ ನನ್ನ ತುಟಿಯಚ್ಚುಗಳು..!!
ದೇವರ ಮನೆಯಲ್ಲಿ,
ನಿನ್ನ ಮುದ್ದು ಅಕ್ಷರದಿ ಬರೆದ
ಭಜನೆಯ ಪುಟಗಳು!
ಗುಲಾಬಿ! ಮುಡಿದ ದೇವರ ಫೋಟೋಗಳು..!!
ಅಂಗಳದ ತುಂಬೆಲ್ಲ,
ಪ್ರೀತಿಯ ರಂಗೋಲೆ ಮೂಡಿಹುದು!
ಪ್ರೀತಿ ದಿನದಿ ಪ್ರೀತಿ-ಮನೆಗೆ
ಸುಸ್ವಾಗತ ಬರೆದಿಹುದು..!!
-ನಿಮ್ಮ ಪ್ರೀತಿಯ,
ಸಾವಿತ್ರಿ