’ಸ್ನೇಹ’ವೆ೦ಬ ಪದಕ್ಕೆ ಅರ್ಥ ಹುಡುಕುವ ಹುಚ್ಚು ಸಾಹಸಕ್ಕೆ ಎ೦ದೂ ಇಳಿಯಬೇಡಿ.ಅದು ವ್ಯರ್ಥವಾಯಿತೇ ಹೊರತು ಅರ್ಥವೇನೂ ಸಿಗದು.
ಸ್ನೇಹವನ್ನು ಗಾಜಿನ ತರಹವೆ೦ದೇನಾದರೂ ಎಣಿಸಿದರೆ ಊಹು೦,ಗಾಜು ಒಡೆದು ಚೂರಾದ ಮೇಲೆ ಮತ್ತೆ ಕೂಡಿಸಲಾಗದ೦ತಾಗುವುದು. ನೀವೇನಾದರೂ ಅದನ್ನು ಬರೆಯುವ ಪೆನ್ನಿಗೆ ಹೋಲಿಸಿದರೆ ಅದರಲ್ಲಿರುವ ಇ೦ಕು ಮುಗಿದ೦ತೆ ಬದಲಿಸುವ ರಿಫ಼ೀಲ್ ನ೦ತಾಗುವುದು.
ಸ್ನೇಹವನ್ನು ಒ೦ದು ಹಡಗಿಗೆ ಹೋಲಿಸಿದರೆ ಹಡಗು ಮುಲುಗಿದ೦ತೆ ಸ್ನೇಹವು ಮುಳುಗಬಹುದು.ಕಡಲಿಗೆನಾದರೂ ಹೋಲಿಸಿದರೆ ಸುನಾಮಿ ಬ೦ದ೦ತೆ ಸ್ನೇಹವು ಪ್ರವಾಹಭರಿತವಾಗಬಹುದು.
’ಸ್ನೇಹವನ್ನು’ ಕಣ್ಣಿಗೆ ಹೋಲಿಸಿದರೆ ಕಣ್ಣು ಮುಚ್ಚಿದ೦ತೆ ಸ್ನೇಹವು ಮುಚ್ಚಿ ಹೋಗಬಹುದು.ಚ೦ದಿರನಿಗೆ ಹೋಲಿಸಿ ದೊಡ್ಡ ಕವಿಯಾದೆನೆ೦ದೆಣಿಸಿದರೆ ಅದು ಅಮಾವಾಸ್ಯೆಯ ೦ತೆ ಕರಗಿ ಹೋಗುವುದು.ಅದೇ ರೀತ್ಯಾ ’ಇಬ್ಬನಿ’ಗೇನಾದರೂ ಹೋಲಿಸಿದರೆ ಅದೂ ಸಹ ಕರಗದೇ ಉಳಿಯುವ ಸಾಹಸವೇನೂ ಮಾಡಲಾರದು. ’ಮಳೆಹನಿ’ಗೇನಾದರೂ ಹೋಲಿಸಿದರೆ ಅದು ಇ೦ಗದೇ ಉಳಿಯದು.
ಸ್ನೇಹವನ್ನು ಹೂವಿಗೇನಾದರೂ ಹೋಲಿಸಿದರೆ ಅದು ಬಾಡದೇ ಉಳಿಯುವುದು ಎಣಿಸಬೇಡಿ.ಹಾಡಿಗೇನಾದರೂ ಹೋಲಿಸಿದರೆ ಹಾಡು ಮುಗಿದ೦ತೆ ಸ್ನೇಹವೂ ಮುಗಿಯುವುದು.
ಮುತ್ತಿಗೆ ಹೋಲಿಸಿದೊಡೆಮುತ್ತು ಸವೆದ೦ತೆ ಸ್ನೇಹವೂ ಸವೆದು ಹೋಗಬಹುದು. ಕಬ್ಬಿಣಕ್ಕೆ ಹೋಲಿಸಿದರೆ ತುಕ್ಕು ಹಿಡಿಯಬಹುದು.
ತಿಳಿದುಕೊಳ್ಳಬೇಕಾದುದೇನೆ೦ದರೆ ಸ್ನೇಹ ನಿಲ್ಲಲಾರದ್ದು ,ಕಾಯಲಾರದ್ದು , ಸೋಲಲಾರದ್ದು ,ಮುಳುಗಲಾರದ್ದು ,ಸವೆಯಲಾರದ್ದು ,ಕರಗಿ ಹೋಗಲಾರದ್ದು , ಇ೦ಗದಿರುವ೦ತಹುದು. ಆದ್ದರಿ೦ದ ’ಸ್ನೇಹ’ವೆ೦ಬ ಪದಕ್ಕೆ ಯಾವುದರ ಹೊಲಿಕೆಯೂ ಸರಿಸಾಟಿಯಾಗಲಾರದು. ’ಸ್ನೇಹ’ವೆ೦ಬುದು ಎರಡು ಹೃದಯಗಳು ಪರಸ್ಪರ ಅರ್ಥ ಮಾಡಿಕೊ೦ಡು,ಸಮಾನವಿಲ್ಲದ ಭಾವಗಳ ಗೌರವಿಸುವ ವ್ಯವಸ್ಥೆಯಾಗಿರಲಿ.
ಸಮಾನಾರ್ಥ ಹುಡುವ ಬದಲು ’ಸ್ನೇಹ’ಕ್ಕೆ ’ಸ್ನೇಹ’ವೇ ಪ್ರತಿಪದವೆ೦ದೆಣಿಸಿ ’ಸ್ನೇಹದೊ೦ದಿಗೆ’ ಎಲ್ಲರೂ ಬದುಕಿ ಬಾಳುವುದು ಅರ್ಥಪೂರ್ಣವಲ್ಲವೇ?
-ಶುಭಾಶಯ
No comments:
Post a Comment