Sunday, October 16, 2011

ಯಾವ ಮೋಹನ ...


ಯಾವ  ಮೋಹನ ಮುರಳಿ ಕರೆಯಿತೋ 
ದೂರ ತೀರಕೆ ನಿನ್ನನು....
ಯಾವ ಬೃ೦ದಾವನವು ಸೆಳೆಯಿತೋ
ನಿನ್ನ ಆ ಪುಟ್ಟ ಕಣ್ಣನು .....
             ಯಾವ ಮೋಹನ ಯಾವ ರಾಧೆಗೋ
             ನನ್ನ ಜೀವನ ನನ್ನ ಶ್ಯಾಮಗೆ...
            ಯಾವ ತೀರದ ದೂರ ಪ್ರಯಾಣವೋ
            ನನ್ನ ಮನ ನನ್ನ ಪ್ರಾಣಕೆ....
ಪ್ರೀತಿರಾಗದ ಕರ್ತೃ ನೀನು 
ಪ್ರೇಮರೋಗವ ನನಗಚ್ಚಿದವನು 
ಮದ್ದು  ತರಲು ಹೋದ ನನ್ನ ಮುದ್ದು ನೀನು,
ದಾರಿ ತಪ್ಪಿರುವೆಯಾ ನೀನು?!
               ತ೦ಗಾಳಿಯ ಬಳಿ ಕಳಿಸಿಹೆನು ನೂರು ಸ೦ದೇಶ
               ಉತ್ತರಕ್ಕಾಗಿ ಹಾತೊರೆಯುತಿದೆ ನನ್ನ ಅಕ್ಷಿ...
               ಕಲಿಸುತಿಹೆನು ಈ ಕವನ ನಿನಗೋಸ್ಕರ 
               ಪತ್ರ ಬರೆ ಆ ಸೂರ್ಯ ಸಾಕ್ಷಿ.....
                                                   -ಪಾರ್ಥವಿ