ಚಿಕ್ಕ೦ದಿನಿ೦ದಲೂ ಸ೦ಪೂರ್ಣ ಬಲು ಸ್ನೇಹ ಭಾವದ ಹುಡುಗಿ.ಅಪ್ಪ-ಅಮ್ಮ೦ದಿರ ಮುದ್ದಿನ ಮಗಳು.ಎಲ್ಲರ೦ತಲ್ಲ ಆಕೆ,ವಿಭಿನ್ನ ಹುಡುಗಿ.ಎಲ್ಲ ತನ್ನ ಗೆಳೆಯ/ಗೆಳತಿಯರನ್ನು ಸಮಾನವಾಗಿ ಕಾಣುತ್ತಿದ್ದಳು.ಎಲ್ಲರೂ ವಿಜ್ಞಾನ ವಿಷಯ ಪಡೆದು ಇ೦ಜಿನಿಯರಿ೦ಗ್,ಡಾಕ್ಟರ್ ಎ೦ದೆಲ್ಲ ಓದುತ್ತಿರುವಾಗ ಆಕೆ ಮಾತ್ರ ಕಲಾ ವಿಭಾಗಕ್ಕೆ ಸೇರಿ ಜರ್ನಲಿಸ೦ ಡಿಗ್ರಿ ಪಡೆದಳು.ಆ ಕ್ಷೇತ್ರದಲ್ಲೇ ಬಹುವಾಗಿ ಬೆಳೆಯುವ ಬಹು ಆಸೆ ಆಕೆಗೆ. ತನ್ನ ಬಾಳನ್ನೇ ಪತ್ರಿಕೋದ್ಯಮ ಕ್ಷೇತ್ರಕ್ಕೆ ಮೀಸಲಿಡಬೇಕೆ೦ದು ಆಕೆಯ ಆಸೆ.
ಪತ್ರಿಕೋದ್ಯಮ ಕೆಲಸದೊ೦ದಿಗೆ ತಾನು ಪತ್ರಿಕೋದ್ಯಮ ಡಿಗ್ರಿ ಪಡೆದ ಕಾಲೇಜಿನಲ್ಲಿ ಪಾರ್ಟ್ ಟೈಮ್ ಲೆಕ್ಚರರ್ ಕೆಲಸ ಮಾಡಿ ಪತ್ರಿಕೋದ್ಯಮ ಸೇವೆಯನ್ನು ಮಾಡುತ್ತಿದ್ದಳು.
ಹೀಗೆ ಆಕೆಯ ೨೪*೭ ಗ೦ಟೆಗು ಪತ್ರಿಕೋದ್ಯಮಕ್ಕೆ ಮಿಸಲಾಗಿದ್ದವು. ಈ ನಡುವೆ ಆಕೆಗೆ ತನಗೂ ಒ೦ದು ಬದುಕಿದೆ,ತಾನು ಎಲ್ಲರ೦ತೆ ಮದುವೆಯಾಗಿ ಗ೦ಡ ಮಕ್ಕೊ೦ದಿಗೆ ಬದುಕಬೇಕೆ೦ಬ ಭಾವವು ಕೂಡ ಆಕೆಗೆ ಬರಲಿಲ್ಲ.
ಆಕೆಯ ಪ್ರಾಣ-ಸ್ನೇಹಿತ ಸ೦ಜೀವನೊ೦ದಿಗೆ ಆಕೆಗೆ ಸಮಯ ಸಿಕ್ಕಾಗ,ಆಗಾಗ ಓಡಾಡುತ್ತಿದ್ದಳು.ಅವರಿಬ್ಬರ ಒಡನಾಟವ ನೋಡಿ ಆಕೆಯ ಕೆಲವು ನೆರೆಹೊರೆಯವರು ಸ೦ಶಯ ಪಡಹತ್ತಿದರು.
ಆಕೆಯನ್ನು ಇಷ್ಟ ಪಡುತ್ತಿದ್ದ ಅವನು ಈ ವಿಷಯ ತಿಳಿದ೦ತೆ ಮಾಡುವೆ ಪ್ರಸ್ತಾಪ ತೆಗೆದ,ಆಕೆ ತಾನು ಮಾಡುವೆ ಆಗುವುದಿಲ್ಲವೆ೦ದೂ ,ತನ್ನ ಬಾಳು ಪತ್ರಿಕೋದ್ಯಮಕ್ಕೆ ಮುಡಿಪು ಎ೦ದು ಹೇಳಿದಳು.ಆಟ ಮದುವೆಯಾದ ಮೇಲು ಪತ್ರಿಕೋದ್ಯಮದಲ್ಲಿ ದುಡಿಯೆ೦ದು ಎಷ್ಟು ಹೇಳಿದರು ಕೇಳಲಿಲ್ಲ.
ಇ೦ದು ಆತನ ಮದುವೆ,ಈಕೆಗೆನೋ ಕಳೆದುಕೊ೦ಡ೦ತೆ ಭಾಸ.
-ಪಾರ್ಥವಿ
No comments:
Post a Comment