ಪ್ರೀತಿಯ ಪುಟ್ಟು ,
ನನ್ನ ತ೦ದೆ-ತಾಯಿಯನ್ನು ಒಪ್ಪಿಸುವ ಜವಾಬ್ದಾರಿ ಹೊತ್ತುಕೊ೦ಡು,ಎಲ್ಲರನ್ನೂ ಒಪ್ಪಿಸಿ ಅವರ ಕೈಯ್ಯಿ೦ದ ಕನ್ಯಾದಾನ ಮಾಡಿಸಿಕೊಳ್ಳುತ್ತಿದ್ದಿಯಾ ..!!! ಋಷಿಕಾಳ೦ತೂ ಬಹಳೇ ಖುಷಿಯಾಗಿದ್ದಾಳೆ.ನಮ್ಮ ಮನೆ ಪುಟ್ಟಿ ಪಾಯಸದೂಟ ಸಿಗುತ್ತೆ ಎನ್ನುವ ಖುಷಿ!!!
ಪ್ರೀತಿಯನ್ನು ಪ್ರೀತಿಸುವ ಪ್ರೀತಿ,ಪ್ರೀತಿಗಾಗಿ ಪ್ರೀತಿಸುವ ಪ್ರೀತಿಯನ್ನು ಪ್ರೀತಿಸುತ್ತದೆ, ಎನ್ನುವ೦ತೆ ನಮ್ಮ ಪ್ರೀತಿಯನ್ನು ಪ್ರೀತಿಸಿ ಎಲ್ಲರೂ ಮದುವೆಗೊಪ್ಪಿಕೊ೦ಡು ಪ್ರೀತಿಗಾಗಿ ಪ್ರೀತಿಸುವ ನಮ್ಮನ್ನು ಪ್ರೀತಿಲೋಕಕ್ಕೆ ಕಳುಹಿಸುತ್ತಿದ್ದಾರೆ.
ಇಷ್ಟು ದಿನ ನಾವಿಬ್ಬರೂ ಕಟ್ಟಿದ ಕನಸಿನ ಸಾಮ್ರಾಜ್ಯಕ್ಕೆ ನಾವಿಬ್ಬರೂ ಪಾದಾರ್ಪಣೆ ಮಾಡುತ್ತಿದ್ದೇವೆ.ವಿಭಿನ್ನ ಪ್ರೀತಿವಾಕ್ಯದ ಪರಿಪಾಲಕರಾದ ನಾವು ಪ್ರೀತಿಯಿ೦ದ ,ನಾವಿಷ್ಟು ದಿನಾ ಹಾಕಿಕೊ೦ಡ ಪ್ಲಾನು,ಪ್ರಮಾಣಗಳನ್ನು ಪಾಲಿಸಿ ಬದುಕೋಣ.
ಒಬ್ಬರಿಗೊಬ್ಬರು ಅರಿತು, ನಿನ್ನ ಕಷ್ಟ ನನಗಿರಲಿ, ನನ್ನ ಕಷ್ಟದಲಿ ಪಾಲು ನಿನಗಿರಲಿ. ನನ್ನ ಸುಖವು, ನಿನ್ನ ಸುಖವು ಒಂದೇ
ಎಂಬಂತೆ ಇರೋಣ.
ಕನಸಿನ ಲೋಕಕ್ಕೆ ಮದುವೆಯ ದಿಬ್ಬಣದೊಂದಿಗೆ ಹೋಗುತ್ತಿದ್ದೇವೆ. ನಿನಗಿದೋ ಶುಭಾಶಯ.
ಪ್ರೀತಿ ಇಷ್ಟು ದಿನ ಮೆಸೇಜು, ಕಾಲ್, ಪಾತ್ರಗಳಲ್ಲಿ ಪ್ರೀತಿ ಸಂದೇಶ ಕಳುಹಿಸುತ್ತಿದ್ದವರು, ಇನ್ನು ನನ್ನ ಕಣ್ಣಲ್ಲಿ ನಿನ್ನ ಕಣ್ಣಿಟ್ಟು ಮಾತನಾಡಿಕೊಳ್ಳೋಣ.
ಪ್ರೀತಿಯಾತ್ರೆಯ ಪ್ರಾರಂಭಿಸುತ್ತಿದ್ದೇವೆ, ಆರಂಭ ಕಾರ್ಯಕ್ರಮದಲ್ಲಿ ಬಂಧು ಸಮೇತ ಬಂದು ಭಾಗವಹಿಸಲು ಮರೆಯದಿರು. ನಿನಗಾಗಿ ಕಾದಿರುವ ......!!!:P
ನಿನ್ನವಳೇ,
ಅರ್ಪಿತಾ (ಚಿನ್ನು)
1 comment:
Very Nice, Happy Married Life.
Post a Comment