ಪ್ರಿಯತಮ ಕರುಣೆಯ ತೋರೆಯ!
ಹಸಿರು ಜರತಾರಿ ಸೀರೆ,ರವಿಕೆ,ಹಸಿರು ಗಾಜಿನ ಬಳೆಗಳನ್ನು ಧರಿಸಿ ಪಚ್ಚೆ ಹಾರ,ಕಿವಿಯೋಲೆಯ ಹಾಕಿಕೊಂಡು ಗೆಳತಿ ಗಾನಕೋಗಿಲೆಯ ಬಳಿ ಸಂದೇಶ ಕಳಿಸಿಹಳು 'ಪ್ರಿಯತಮ ಕರುಣೆಯ ತೋರೆಯ..'.
ಚೈತ್ರಳ ಪಾರ್ಲರಿನಲ್ಲಿ ಸಕಲ ಸೌಂದರ್ಯವರ್ಧಕ ಧಾರಣೆ ನಡೆದಿದೆ.ಹುಬ್ಬು ತೀಡಿದಷ್ಟು ಸಮಾಧಾನವಿಲ್ಲ ಅವಳಿಗೆ. ವಿಶೇಷ ಪಪ್ಪಾಯ,ಅರಿಸಿಣ,ಲೋಳೆಸರ,ಮುಲ್ತಾನಿ ಮಿಟ್ಟಿ ಪ್ಯಾಕಗಳನ್ನು ಹಾಕಿ ಮಾಲಿಷ್ ಮಾಡಿ ಮುಖವೆಲ್ಲ ಪಳಪಳ ಹೊಳೆಯುತ್ತಿದೆ.ಅವಳಿಗೇನು ಕಡಿಮೆ ಅವಳದೇ ಎಕರೆಗಟ್ಟಲೆ ತೋಟ.ಇನ್ನೂ ಬಿಡದೇ ಎಳನೀರು, ಜೇನು,ಕೆನೆ,ಎಣ್ಣೆಯ ಮಾಲಿಷ್ ಮಾಡಿ ಮೈಯೆಲ್ಲ ಚೈತನ್ಯಯುತವಾಯಿತು.ಮೆನಿಕ್ಯೂರ್,ಪೆಡಿಕ್ಯೂರ್ ಮಾಡಿ ಕೈಕಾಲುಗಳು ಲಕಲಕನೆ ಹೊಳೆಯುತ್ತಿವೆ. ಬಿಟರೂಟ್,ತಾಜಾ ಚಹಾದ ಎಲೆಗಳು,ಮೆಹೆಂದಿಗಳನ್ನು ಕಲಸಿ ಕೂದಲಿಗೆ ಹಚ್ಚಿ, ಇನ್ನೂ ಆಕೆಯ ಸ್ನಾನಕ್ಕೋ ಹಾಲಿನ ಹೊಳೆಯೇ ಹರಿದಿದೆ.

ಲೋಳೆಸರದ ಶಾಂಪೂವಿನಿಂದ ಕೂದಲನ್ನು ತೊಳೆದು,ಗುಲಾಬಿ ಸಾಬೂನಿನಿಂದ ಮೈತೊಳೆದು,ಬಿಸಿನೀರ ಶಾಖ,ಲೋಬಾನದ ಹೊಗೆಯನ್ನು ನೀಡಿ ಅವಳ ನೆಚ್ಚಿನ ಹಸಿರು ರೇಷ್ಮೆ ಸೀರೆಯ ಉಟ್ಟು,ಬೆಂಡೋಲೆ,ನೆಕ್ಲೇಸು,ಮೂಗುತಿ,ಬಳೆ,ಸೊಂಟಕ್ಕೆ ಡಾಬು,ಕೈಗೆ ವಂಕಿಯನ್ನು ಧರಿಸಿ ಮದುಮಗಳಂತೆ ಕಂಗೊಳಿಸುತ್ತ,ನಿಂತಿಹಳು ಮಹಾರಾಣಿ ಭೂಮಿಕಾದೇವಿ.
ಇಷ್ಟು ದಿನಗಳ ವಿರಹವನ್ನು ತಾಳಲಾರದೇ ಕೋಗಿಲೆಯ ಬಳಿ ಆತನಿಗೆ ಕಳುಹಿಸಿದ ಸಂದೇಶ ಆತನಿಗೆ ತಲುಪಿತೇ ಎನ್ನುವ ಅನುಮಾನ.ಕೋಗಿಲೆಯ ಬಳಿ ಕೇಳಲು,ಕುಹೂ ಕುಹೂ ಎಂದು ಹುಂಕಾರ ಸೂಚಿಸಿದರೂ,ಆಕೆಗೆ ಸಮಾಧಾನವಿಲ್ಲ.ತನ್ನ ಕೆಲಸ ಕಾರ್ಯದ ನಡುವೆ ನನ್ನ ಸಂದೇಶ ಮರೆತನೇನೋ,ಅವನ ಸ್ವಾಗತಕ್ಕಾಗಿ ತಾನುನಡೆಸಿದ ತಯಾರಿ ಕಡಿಮೆಯಾಯಿತೇ ಎನ್ನುವ ಅನುಮಾನ ಬೇರೆ.
ಅವನ ಸ್ವಾಗತಕ್ಕಾಗಿ ಪನ್ನೀರು ಸಿದ್ಧವಿದೆಯೇ ಎಂದು ಇನ್ನೊಮ್ಮೆ ಖಚಿತಪಡಿಸಿಕೊಂಡಳು.ಅವನಿಗಾಗಿ ಮಾಡಿಟ್ಟ ಅವನಿಷ್ಟದ ಖಾದ್ಯಗಳ ಬೆಂಡೆ ಹುಳಿ,ಬದನೆ ಎಣ್ಣೆಗಾಯಿ,ಮೆಣಸಿನಕಾಯಿ ಬಜೆ,ಪಲ್ಯಗಳು,ಬೇಳೆಸಾರು,ಪ್ಯಾರಿಷ್ ಚಿತ್ರಾನ್ನ ,ಗೋಧಿ ಹುಗ್ಗಿ ಯಂತೂ ಆತನಿಗೆ ಪಂಚಪ್ರಾಣ,ಕೇಸರಿಬಾತು ಅಬ್ಬಾ ಎಷ್ಟು ಘಮಘಮ ಪರಿಮಳ ಸೋಕಿ ಅವನು ಏಳು ಸಮುದ್ರದ ದೂರದಲ್ಲಿದ್ದರೂ ಓಡಿ ಬರುವುದು ಖಚಿತ! ಮತ್ತೊಮ್ಮೆ ಬಿಸಿಯಾಗಿವೆಯೇ ಎಂದು ಖಚಿತ ಪಡಿಸಿಕೊಂಡಳು. ಅನ್ನವನ್ನಂತೂ ಬಿಸಿಯಾಗಿಯೇ ಬಡಿಸಬೇಕೆಂದು ಹಾಲಲ್ಲಿ ಬೇಯಿಸಲಿಟ್ಟಿದ್ದಳು.
ಅಷ್ಟು ಪ್ರೀತಿಸುವವಳು ಅವನ ಎಲ್ಲ ಸೀಕ್ರೆಟುಗಳನ್ನು ಬಲ್ಲವಳು,ಅವನ ಗೆಳೆಯ ಚಾತಕನನ್ನೇ ಕರೆದಳು.ಚಾತಕನು ಕರೆದರೆ ಅವನು ಎಲ್ಲಿದ್ದರೂ ಓಡಿ ಬರುವನೆಂದು ಅರಿತವಳು. ಚಾತಕನು ಕರೆದನು. ವರುಣನು ಬಂದನು.ಪ್ರಿಯಕರನ ಭವ್ಯ ಸ್ವಾಗತವ ಕಣ್ಣು ತುಂಬಿಕೊಳ್ಳಲು ಜೀವ ರಾಶಿಗಳೆಲ್ಲ ನೆರೆದು ,ಪ್ರೀತಿಯ ವಾಲಗ ಊದಿ ಅವರ ಏಕಾಂತಕ್ಕೆ ಭಂಗಬಂದಿತೆಂದು ತಮ್ಮ ತಮ್ಮ ಗೂಡನ್ನು ಸೇರಿದವು.
(ಜುಲೈ ೧೪,೨೦೧೭ ರಂದು ಉದಯವಾಣಿಯ ಮಹಿಳಾ ಸಂಪದದಲ್ಲಿ ಪ್ರಕಟಿತ )
No comments:
Post a Comment