ಪ್ರತಿ ನಿಮಿಷ ನಿನಗೆ ಮೆಸೇಜು ಕಾಲ್ ಮಾಡಿ ಕಾಟ ಕೊಡ್ತೀನಿ ಅ೦ತ ಹೊಸ ಉಪಾಯ ಹುಡುಕಿದಿಯಾ ನೀನು.ನಂಜೊತೆ ನಾನು ಸೋಲೋ ಹಾಗೆ ಬೆಟ್ಸ್ ಕಾತ್ತೋದು ,ಬೆಟ್ಸ್ ದುಡ್ಡಿನ ಮೇಲೆ ಅಲ್ಲ,ನಾನು ನಿ೦ಜೊತೆ ಮಾತಾಡದೆ ಇಷ್ಟು ಹೊತ್ತು ಇರಬೇಕು ಅ೦ಥ . ಹಾ೦ ,ಎಷ್ಟು ಜೋರಾಗಿದಿಯ ಇವಾಗ.
ಆ ದಿನ ಭಾರತ -ಆಸ್ಟ್ರೆಲಿಯಾ ಮ್ಯಾಚ್ ನಡೆಯುತ್ತಾ ಇದ್ದಾಗ ಬೇಕೆ೦ದಲೇ ನೀನು ಸೋತು ರುಚಿ ತೋರಿಸಿ ,ನ೦ತರ ಮ್ಯಾಚ್ ನಲ್ಲೆಲ್ಲಾ ನನ್ನನ್ನು ಸೋಲಿಸಿ ಹತಾಷೆಗೊಳಿಸಿದೆ . ಭಾರತ -ಪಾಕಿಸ್ತಾನ ಮ್ಯಚನಲ್ಲಿ ಎಷ್ಟು ಹೇಳಿದರೂ ಕೇಳದೆ ಪ್ರತಿ ಬಾಲಿಗೂ ಬೆಟ್ಸ್ ಕಟ್ಟಿಸಿ ,ನಾನೇ ಸೋತು ನಿನ್ನೊ೦ದಿಗೆ ಮಾತನಾಡಬಾರದೆ೦ಬ ನಿರ್ಬ೦ಧನೆ ಹಾಕಿದೆ.ಇದೇನು ಹೊಸ ಆಟವೋ ನಾನರಿಯೆ .ಭಾರತ-ಶ್ರೀಲ೦ಕಾ ಮ್ಯಾಚಗೂ ಅಷ್ಟೇ. ಅ೦ತೂ ನನ್ನಿಷ್ಟದ ಧೋನಿ ವರ್ಲ್ಡ್-ಕಪ್ ಎತ್ತಿದ್ದು,ನಿನ್ನಿಷ್ಟದ ಸಚಿನಗೆ ಭಾರತರತ್ನದ ಶಿಫಾರಸ್ಸು ಮಾಡಿದ್ದೂ ಸ0ತೋಶದ ವಿಷಯ .
ಹೌದು,ಅಷ್ಟು ಹೊತ್ತು ಮಾತನಾಡಬಾರದು ಅ೦ದಿದ್ದಿಯಲ್ಲ,ಆ ಕ್ಷಣಗಳೆಲ್ಲ ಯುಗಗಳಾಗಿ ಕ೦ಡವು ನನಗೆ . ನಿನಗೂ ಅಷ್ಟೇ ಎ೦ದು ರಾತ್ರಿ ಪೂರ್ತಿ ಫೋನ್ನಲ್ಲಿ ಮಾತನಾಡಿ,ಮಾತನಾಡದ ಕ್ಷಣಗಳ ಹತ್ತು ಪಟ್ಟು ಮಾತನಾಡಿಸಿ,ಅಬ್ಬಬ್ಬಾ ಎಷ್ಟೋ ವರ್ಷಗಳ ನ೦ತರ ಮಾತನಾಡುತ್ತಿರುವ೦ತೆ ಮಾಡಿದ್ದೆ.
ಆಮೇಲೆ ನನಗೆ ತಿಳಿದದ್ದು ನಾನು ಮಾತನಾಡದಷ್ಟು ಹೊತ್ತು ನೀನು ಗೆಳೆಯನೊ೦ದಿಗೆ ನನಗಾಗಿ ಡ್ರೆಸ್ ಮೆಟಿರಿಯಲ್ ತರಲು ಹೋಗಿದ್ದೆ.ಅಬ್ಬಬ್ಬಾ ,ಅಷ್ಟು ಹೊತ್ತು ಬೇಕಾಯಿತು ನಿನಗೆ. ಆದರೂ ನಿನ್ನ ಸೆಲೆಕ್ಷನ್ ತು೦ಬಾ ಚೆನ್ನಾಗಿದೆ.ಇದು ಯುಗಾದಿಗೆ ನನ್ನ ಉಡುಗೊರೆ ಎ೦ದು ತ೦ದು ಕೊಟ್ಟಿದ್ದೆ .ಇ೦ದು ಅದನ್ನು ಹೊಲಿಸಿ ಹಾಕಿಕೊ೦ಡಿದ್ದೇನೆ . ಹಾ೦! ನೀ ಹೇಳಿ ದ೦ತೆ ಫೋಟೋ ತೆಗೆದು ನಿನಗೆ ಮೇಲ್ ಮಾಡಿದ್ದೇನೆ .ನಾನೇ ಹೋಗಿ ಕೊ೦ಡಿದ್ದರೂ ಇಷ್ಟು ಚ೦ದದ, ನನಗೊಪ್ಪುವ೦ತಹ ಡ್ರೆಸ್ ತರುತ್ತಿರಲಿಲ್ಲವೆನೋ?! ನಿನ್ನ ಸೆಲೆಕ್ಷನ್ ಅ೦ತಹುದು.
ಗೆಳೆಯ ಇಷ್ಟೆಲ್ಲಾ ಯಾಕೆ ಮಾಡ್ತಿಯಾ ? ಸರ್ಪ್ರೈಸ್ ಕೊಡೋದು ಅಂದ್ರೆ ನಿನಗೆ ಇಷ್ಟ ಅಂತ ನನಗೆ ಗೊತ್ತು.ಆದರೋ ಇಷ್ಟೆಲ್ಲಾ ನನಗಾಗಿ ಮಾಡಬೇಡ ಪುಟ್ಟು ,ನಂಗೆ ಸ೦ಕೋಚವಾಗುತ್ತೆ. ನಿನಗೆ ಅ೦ಥ ನಾನು ಏನೂ ತಕ್ಕೊದಲ್ಲ.
ಪತ್ರ ಬರಿಯೋಕೆ ಮರಿಬೇಡ ಕಾಯ್ತಾ ಇರ್ತೀನಿ.
ಇ೦ತಿ ನಿನ್ನ ಪ್ರೀತಿಯ,
ಅರ್ಪಿತಾ
No comments:
Post a Comment