Monday, June 6, 2011

ಪ್ರೀತಿಯ ಋಷಿಕಾಳಿಗೆ

ಪ್ರೀತಿಯ  ಋಷಿಕಾ ,
     ನಿನ್ನೆ ನಿಮ್ಮಣ್ಣ ಬ೦ದಿದ್ದರು ಕಣೆ.ಎ೦ದಿನ೦ತೆ ಈ ಸಲವೂ ನನಗೆ  ಸರ್ಪ್ರೈಸ್  ಕೊಡಲು  ಬರುವ  ವಿಷಯವೇ  ಹೇಳಿರಲಿಲ್ಲ .ನನ್ನ ಗೆಳೆಯ ಬ೦ದಿದ್ದಾನೇ ಅವನ ಬಳಿ ಋಷಿಕಾಳಿಗೆ ಉಡುಗೊರೆ ಕಳಿಸಿದ್ದೇನೆ,ಹೋಗಿ ತೆಗೆದುಕೊ೦ಡು ಬಾ ಎ೦ದು ಫೋನ್ ಮಾಡಿ ಹೇಳಿದ್ದರು.ಹೋಗಿ ನೋಡಿದ್ದರೆ,ಪುಟ್ಟುವೇ ಬ೦ದಿದ್ದರು.
   ಗೆಳೆಯ ಮನುಗೆ ಹೇಳಿ ಬೈಕ್ ಬೇರೆ ತ೦ದಿದ್ದರು.  ಇವತ್ತು  ಕ್ಲಾಸ್ ಇದೆ ಕಣೋ ಎ೦ದು ಎಷ್ಟು ಹೇಳಿದರೂ ಕೇಳದೆ,ಇವತ್ತು ಕ್ಲಾಸಿಗೆ ಹೋಗುವುದು ಬೇಡ ಎ೦ದು ಹೇಳಿ ತಿರುಗಾಡಲು ಕರೆದುಕೊ೦ಡು ಹೋಗಿದ್ದರು.
  ನಿನ್ನೆ ಊರೆಲ್ಲ ಸುತ್ತಿ ನಿನಗೆ,ನಂಗೆಲ್ಲ ಚೂಡಿ ತೆಗೆದುಕೊ೦ಡು ,ತಿರುಗಿಸಿದ್ದೆ,ತಿರುಗಿಸಿದ್ದು ನನ್ನ.ಕಾಲೆಲ್ಲ ಸೋತು  ಬರುವವರೆಗೂ ಇಬ್ಬರೂ ಸುತ್ತಿದ್ದೆವು.ಇಬ್ಬರೂ ಸೇರಿ ಮಿಸ್ಟರ್ ಪರ್ಫೆಕ್ಟ್ ಸಿನಿಮಾ ನೋಡಿದೆವು.ಇವತ್ತು ಇಲ್ಲೇ ಪಕ್ಕದ ಜಲಪಾತಕ್ಕೆ ಹೋಗಿದ್ದೆವು.ನಾವು ಕುಣಿದಿದ್ದು,ನಲಿದಿದ್ದು ನೋಡಿ ಆ ಆಕಾಶರಾಜನಿಗೂ ಹೊಟ್ಟೆಕಿಚ್ಚಾಗಿರಬೇಕು,ಬರುವಾಗಲೆಲ್ಲ ವರ್ಷಧಾರೆ .ಅಲ್ಲಲ್ಲಿ ನಿ೦ತು ಮಳೆ ನಿಲ್ಲುವವರೆಗೂ ಕಾಡು ಬರುವವರೆಗೂ ಸಾಕು ಸಾಕಾಯಿತು. ಮಳೆಯ ಪ್ರಶಾ೦ತ ವಾತಾವರಣದ ನಡುವೆ ದಾರಿಯಲ್ಲಿ ಅಜ್ಜಿ ಅ೦ಗಡಿಯಲ್ಲಿ ಬಿಸಿ ಬಿಸಿ ಸ್ಪೆಷಲ್ ಚಹಾ ಕುಡಿದ ಮಜಾವೇ ಮಜಾ. ಹಾ೦,ಹೇಳಲು ಮರೆತೇ,ಆ ಅ೦ಗಡಿಯಲ್ಲಿ ನಿನ್ನಿಷ್ಟದ ಚಾಕಲೇಟ್ ಕೊಡಿಸಿದ್ದಾರೆ.ನಾನು ಒ೦ದು ಚಾಕಿ ತಿ೦ತೀನಿ ಕಣೋ ಎ೦ದರೆ  ನನ್ನನ್ನು ಬೈದರು .ಆದ ರೂ  ಕದ್ದು  ಒ೦ದು ಚಾಕಿ ತಿ೦ದಿದ್ದು  ಅವರಿಗೆ  ತಿಳಿದ  ಕ್ಷಣ  ಅವರು  ಬೈದದ್ದೇ  ಬೈದದ್ದು .ಈ ಶನಿವಾರ ಬ೦ದಾಗ  ನಿನಗೆ ಚಾಕಿ ಕೊಡ್ತೀನಿ  ಆಯ್ತಾ .
 ಎಷ್ಟು ಬೇಡವೆ೦ದರೂ ,ಹಸಿವಿಲ್ಲ  ಎ೦ದರೂ ಬಿಡದೆ  ನನಗೆ  ಊಟ  ಮಾಡಿಸಿ ,ಹಾಸ್ಟೆಲ್  ಕಡೆ  ನನ್ನನ್ನು  ಬಿಟ್ಟು ,ಮನುವಿನೊ೦ದಿಗೆ ರೈಲ್ವೆ ಸ್ಟೇಶನ್ ಹೋದರು.ಮರೆತೆನೆ೦ದು ನೆವ ಹೇಳಿ,ಮನುವಿನೊ೦ದಿಗೆ ಚಾಕಿ ಕಳಿಸಿ,'ಸ್ಸಾರಿ'ಮೆಸೇಜು ಕಳಿಸಿದ್ದರು ಕಣೆ.
   ಇನ್ನೇನಾದರೂ ತರಬೇಕಿದ್ದರೆ ಒ೦ದು ಮೆಸೇಜು ಮಾಡು.ಚಿನ್ನುವಿನ ಸಿಹಿ ಮುತ್ತುಗಳು,ಶನಿವಾರ ನಿನಗೆ ಸರ್ಪ್ರೈಸ್  ಕಾದಿದೆ.ನಿನ್ನ ಕಾಣುವ ನಿರೀಕ್ಷೆಯಲ್ಲಿ,
                                                                                         ನಿನ್ನ ಪ್ರೀತಿಯ,
                                                                                           ಚಿನ್ನು.

No comments: