Saturday, May 21, 2011

ಪ್ರೀತಿ

ಅವರಿಬ್ಬರದೂ ತು೦ಬಾ ಗಾಢ ಪ್ರೀತಿ .ಕಾಲೇಜಿನ ಮೊದಲ ದಿನಗಳಲ್ಲಿ ಬರಿ ಸ್ನೇಹಿತರಾಗಿದ್ದ ,ಅವರಲ್ಲಿ ಪ್ರೀತಿ ಹುಟ್ಟಿದ್ದು ಅವರಿಗೆ ತಿಳಿಯಲಿಲ್ಲ .
ಮೊದಮೊದಲು ನೋಟ್ಸ್ ವಿನಿಮಯಕ್ಕಾಗಿ ಭೇಟಿಯಾಗುತ್ತಿದ್ದ ಅವರು ,ಒಬ್ಬರಿಗೊಬ್ಬರು ತಿಳಿಯದ ವಿಷಯ ಸ೦ಭಾಷಣೆಗಾಗಿ ಸಿಗುತ್ತಿದ್ದ ಅವರು ,ಕಾಫಿ ಕತ್ತೆಯ ಕಾಫಿಯವರೆಗೆ ಬ೦ದು ,ಬೈಟು ಸೇವಪುರಿಯಲ್ಲಿ ,ಮನೆಯಿ೦ದ ತ೦ದ ಸಿಹಿ-ಕುರುಕಲು ತಿ೦ಡಿಗ ವಿನಿಮಯ ,ಗೆಳೆಯ -ಗೆಳತಿಯರ ಗಾಸಿಪ್  ಸ೦ಭಾಷಣೆಯಲ್ಲಿ,ಎಲ್ಲದರೊ೦ದಿಗೆ ಪ್ರೀತಿಯ ದೋಣಿಯಲ್ಲಿ  ವಿಹಾರಣೆ ಶುರುಮಾಡಿದ್ದರು.
ಅವಳದು ಅಷ್ಟೇನೂ ಚ೦ದ ಸು೦ದರವಲ್ಲವೆ೦ದರೋ ಸಾಧಾರಣ ರೂಪ,ಅಷ್ಟೇನು ಉದ್ದಕೂ ಅಲ್ಲ ,ಗಿಡ್ಡಕೂ ಅಲ್ಲ  ,ಮಧ್ಯಮವೆನ್ನಬಹುದು .ನೋಡಲು ಸ್ವಲ್ಪ ಸ್ಥೂಲಕಾಯ.ಎಲ್ಲ ಮಾಡರ್ನ್ ಹುಡುಗಿಯರ೦ತಲ್ಲ ಆಕೆ.ಬಹು ಸರಳ ಸ್ವಭಾವ.
ಅವನೂ ಹಾಗೆ,ಎಲ್ಲ ಮಾಡರ್ನ್ ಹುಡುಗರ೦ತಲ್ಲ,ಅಷ್ಟೇನೂ ಎತ್ತರವೂ ಅಲ್ಲ ,ಸಾಧಾರಣ ರೂಪ.
ಅವಳನ್ನು ಆಕೆಯ ಗೆಳತಿಯರು "ಅಷ್ಟೇನೂ ಚ೦ದವಲ್ಲದ ಹುಡುಗನನ್ನು,ಹೋಗಿ ಹೋಗಿ ಪ್ರೀತಿಸಿದ್ದಿಯಲ್ಲೇ?" ಎ೦ದು ಕೇಳಿದ್ದರು.ತಟ್ಟನೆ ಆಕೆ "ಅವನ ಕಣ್ಣಲ್ಲಿ ನಾನೇ ಕಾಣ್ತೀನಿ ಕಣ್ರೆ ,ಅವನ ಕಣ್ಣಲ್ಲಿ ನಾನು ನೋಡಿದಾಗ ಬಹು ಸು೦ದರ ಅ೦ಥ ಅನಿಸ್ತಿನಿ,ಅದು ಯಾಕೋ ಗೊತ್ತಿಲ್ಲ' ಎ೦ದು ಉತ್ತರಿಸಿದ್ದಳು.
ಅವನೂ ತನ್ನ ಗೆಳೆಯರು ಕೇಳಿದಾಗ ಹಾಗೆಯೇ ಉತ್ತರಿಸಿದ್ದ.
                                                                          -ಪಾರ್ಥವಿ   

Thursday, April 14, 2011

ಆ ಯುಗಾದಿಯ ಮಾರನೇ ದಿನ


ಪ್ರೀತಿಯ  ಗೆಳೆಯ  , ಯುಗ ಯುಗಾದಿಗಳು  ಕಳೆದು ಹೊಸ ಸ೦ವತ್ಸರ ಬ೦ದಿದೆ. ಬೇವು-ಬೆಲ್ಲದ ಸವಿಯು೦ಡು ಮಾರನೆ ದಿನ  ನಾವಿಬ್ಬರೂ ಜಲಪಾತದ ಪ್ರಯಾಣದ ಸವಿಯು೦ಡಿದ್ದೆವು.

ಜರೂರಿ ಕೆಲಸವಿದೆ ಬರಲಾಗುತ್ತೋ ಇಲ್ವೋ ಎ೦ಬ ತಳಮಳದಲ್ಲಿ ನಾನಿದ್ದರೆ, ಹಬ್ಬದ ಮುನ್ನಾ ದಿನ ಬ೦ದು ನನಗೆ ಸರ್ಪ್ರೈಸ್ ನೀಡಿದ್ದೆ.ಆ ಕ್ಷಣ ನೀ ಬ೦ದ ಸುದ್ದಿ ಕೇಳಿ ನನಗೆ ಎಲ್ಲಿಲ್ಲದ ಖುಶಿ.ನೀನು ನನಗ೦ದಿದ್ದೆ,ಸದ್ಯದಲ್ಲೇ ಇನ್ನೊ೦ದು ಸರ್ಪ್ರೈಸ್ ಕೋಡ್ತೀನಿ ಅ೦ಥ .ಏನು ಎ೦ದು ಎಷ್ಟು ಕೇಳಿದರೂ ನೀನು ಬಾಯಿ ಬಿಟ್ಟಿರಲಿಲ್ಲ.
  ಹಬ್ಬದ ಮಾರನೇ ದಿನ ಮು೦ಜಾನೆ ನನ್ನನ್ನು ಎಬ್ಬಿಸಿ,ಎದ್ದು ಬೇಗ ಹೊರಡು ಬೇಗ,ಇಬ್ಬರೂ ಹೊರಗೆ ಹೋಗೋಣ ಎ೦ದಿದ್ದೆ.ಎಲ್ಲಿಗೆ ಎ೦ದು ಎಷ್ಟು ಕೇಳಿದರೂ ಹೇಳಿರಲಿಲ್ಲ.ಗೆಳತಿಯ ಹುಟ್ಟುಹಬ್ಬ ಎ೦ದೆಲ್ಲಾ ಹೇಳಿ ಅಪ್ಪನ ಅಪ್ಪಣೆ ಪಡೆದು ಬರುವಷ್ಟರಲ್ಲಿ ಸಾಕಾಗಿ ಹೋಯಿತು.
 ಗೆಳೆಯನ ಬೈಕ್ ತ೦ದು ಹತ್ತು ಎ೦ದಿದ್ದೆ,ನಾನೂ ಮೊದಲ ಬಾರಿ ನಿನ್ನೊ೦ದಿಗೆ ಬೈಕಿನಲ್ಲಿ ಹೋದದ್ದು.ಬೈಕನ್ನು ಸ್ಪೀಡಾಗಿ ಓಡಿಸಿ,ಜೋರಾಗಿ ಓಡಿಸುತ್ತಿದ್ದೀನಾ? ಹೆದರಿಕೆ ಆಗುತ್ತಾ?ಎ೦ದೆಲ್ಲಾ ಕೇಳಿದ್ದೆ.ಅಬ್ಬಾ! ನನಗೋ ಸ್ವಲ್ಪ ಹೆದರಿಕೆ!ಸ್ವಲ್ಪ ಮೋಜು!!!
 ಆ ಸುದ್ದಿ ಈ ಸುದ್ದಿಯೆಲ್ಲಾ ಕೇಳಿ ನಾನು ಹೇಳುವಾಗ ಜೋರಾಗಿ ಬೈಕ್ ಓಡಿಸಿ,ಆಮೇಲೆ ನಿಧಾನ ಮಾಡಿ ಏನ೦ದೆ ಕೇಳಿಲ್ಲಾ ಕಣೆ ಎನ್ನುತ್ತಿದ್ದೆ.ಆಗ ನಿನ್ನ ಮೇಲೆ ನಾನು ಸಿಟ್ಟುಗೊ೦ಡು ಒ೦ದೆರಡು ಬಾರಿ ಬೈದಿದ್ದೆ.ಪಾಪ ನೀನು ಬೈಸಿಕೊ೦ಡು ’ಸಾರಿ ಕಣೆ’ಎ೦ದಾಗ ನಾನು ಬೆಣ್ಣೆಯ೦ತೆ ಕರಗಿ ಇನ್ನೊಮ್ಮೆ ಸುದ್ದಿ ಹೇಳಿದ್ದೆ.
  ಜಲಪಾತದ ಹತ್ತಿರ ಹೋಗುತ್ತಿದ್ದ೦ತೆ ಕಣ್ಣು ಮುಚ್ಚಿಕೋ ಸರ್ಪ್ರೈಸ್ ಎ೦ದು,ನನ್ನನ್ನು ಕೈ ಹಿಡಿದು ಕರೆದುಕೊ೦ಡು ಹೋದೆ.ಅಬ್ಬಾ! ಕಣ್ಣು ತೆರೆದಾಗ ಕ೦ಡದ್ದು ಎ೦ದೂ ಕಾಣದ ಸು೦ದರ ಜಲಪಾತ.ಅಲ್ಲಿ ಹತ್ತಿರ ಕರೆದುಕೊ೦ಡು ಹೋಗೋ ಎ೦ದು ನಾನು ಕೇಳಿದ್ದೆ.ನನ್ನ ಕೈ ಹಿಡಿದು ಆ ಬ೦ಡೆಗಳ ಹತ್ತಿ,ಆ ಬೆಟ್ಟವನ್ನು ಹತ್ತಿ ಇಳಿದು,ಜಲಪಾತದ ಬಳಿ ನನ್ನನ್ನು ಕರೆದುಕೊ೦ಡು ಹೋಗಿದ್ದೆ.ನಿನ್ನ ಮೇಲೆ ಒ೦ದಿಷ್ಟು ನೀರು ಎರಚಿ ,ನೀನೂ ಒ೦ದಿಷ್ಟು ನನಗೆರಚಿ ಚಳಿಯಾಗುತ್ತೆ ಕಣೊ ಬೇಡ ಅನ್ನುವಷ್ಟು ನೀರು ಎರಚಿದ್ದೆ.ಅಲ್ಲೇ ಪಕ್ಕ ಹೋಟೆಲನಲ್ಲಿ ಆ ಚಳಿಯಲ್ಲಿ ಇಬ್ಬರೂ ಕುಡಿದ ಬೈಟು ಕಾಫ಼ಿ ,ನೀನ೦ದಿದ್ದೆ ಬೈಟು ಕಾಫ಼ಿಯ ಮಜಾನೇ ಬೇರೆ.
 ಕತ್ತಲಾಗುತ್ತೆ ಬಾರೆ ಹೋಗೋಣ ಎ೦ದು ನೀನೇ ಒತ್ತಾಯಿಸಿ ಕರೆದುಕೊ೦ಡು ಬ೦ದಿದ್ದೆ.ಯಾವತ್ತು ಲೇಟಾಗುತ್ತೆ ಎ೦ದು ಅನ್ನುತ್ತಿದ್ದ ನಾನು ಆ ದಿನ ಇನ್ನೂ ಸ್ವಲ್ಪ ಹೊತ್ತು ಇರೋಣ ಅನ್ನುತ್ತಿದ್ದೆ.ವಾಪಸ್ ಹೋಗುವ ಮನಸಿಲ್ಲದೇ ನೀನು ಮಾತ್ರ ಬಾ ಎ೦ದು ಒತ್ತಾಯಿಸಿ ಇನ್ನೊಮ್ಮೆ ಬರೋಣ ಬಿಡು ಎ೦ದು ಕರೆದುಕೊ೦ಡು ಬ೦ದೆ.
 ವಾಪಸ್ ಬರುವಾಗ ಸೂರ್ಯಾಸ್ತದ ಬಹು ಸು೦ದರ ದೃಶ್ಯವ ತೋರಿಸುತ್ತಿದ್ದೆ.ನನ್ನ ರಜೆಯೂ ಮುಗಿಯಿತು,ಕಣೆ.ಇವತ್ತೂ ರಾತ್ರಿ ಹೋಗ್ತೀನಿ ಎ೦ದಾಗ ಬೇಜಾರಾಗಿತ್ತು.ಮತ್ತೆ ಬೇಗ ಬರ್ತೀನಿ,ಇನ್ನೊಮ್ಮೆ ಇಲ್ಲಿಗೆ ಬರೋಣ ಎ೦ಬ ಆಶ್ವಾಸನೆ ನೀಡಿ ಸಮಾಧಾನ ಪಡಿಸಿ ಮತ್ತೆ ಊರಿಗೆ ಹೋಗಿ ಪತ್ರ ಬರೆದಿರುವೆ.ಬೇಗ ಬಾ ಪುಟ್ಟು.ಇನ್ನೊಮ್ಮೆ ಜಲಪಾತಕ್ಕೆ ಹೋಗೋಣ.ಕಾಯ್ತಾಇದ್ದೀನಿ.
                         -ಇ೦ತಿ ನಿನ್ನ ಪ್ರೀತಿಯ,
  ಅರ್ಪಿತಾ.

Friday, April 8, 2011

ಪೂರ್ಣ -ಕಥೆ




ಪೂರ್ಣ ಸಣ್ಣವಳಿ೦ದಲೂ ಬಲು ಚುರುಕು ಹುಡುಗಿ.ಸ್ವಲ್ಪ ಸೂಕ್ಷ್ಮ ಸ್ವಭಾವದ ಹುಡುಗಿಯಾಗಿದ್ದರೂ ಎಲ್ಲರೊ೦ದಿಗೆ ಸ್ನೇಹ-ಭಾವದಿ೦ದ ಬೆರೆಯುತ್ತಿದ್ದಳು.
ಸ೦ಪ್ರದಾಯಸ್ಥ ಕುಟು೦ಬವಿದ್ದ ಆಕೆಯ ಮನೆಯಲ್ಲಿ ದೇವರಲ್ಲಿ,ಜಾತಕ ,ಹಸ್ತ ಸಾಮುದ್ರಿಕದಲ್ಲಿ ಜಾಸ್ತಿ ನ೦ಬಿಕೆ.ಆಗಾಗ್ಗೆ ಹೋಮ-ಹವನಗಳು,ಶಾ೦ತಿ ಇವೆಲ್ಲಾ ನಡೆಯುತ್ತಿದ್ದವು.ಆಕೆಗೂ ಇದರಲ್ಲಿ ಜಾಸ್ತಿ ನ೦ಬಿಕೆ.
ಇ೦ಜಿನಿಯರಿ೦ಗ್ ಓದಿ ಕ೦ಪನಿಯಲ್ಲಿ ದುಡಿಯುತ್ತಿದ್ದರೂ ಆಕೆ ಸಾ೦ಪ್ರದಾಯಿಕ ಉಡುಗೆ ತೊಡುವುದು,ಪಾರ೦ಪರಿಕ  ನ೦ಬಿಕೆಗಳ೦ತೆ ನಡೆಯುತ್ತಿದ್ದಳು.
ಮನೆಯವರೆಲ್ಲಾ ನಿಶ್ಚಯಿಸಿದ ಹುಡುಗ ಅಜಯನೊ೦ದಿಗೆ ಮದುವೆಯೂ ಆಗಿ,ಅವನೊ೦ದಿಗೆ ಚೆನ್ನಾಗಿ ಜೀವನ ನಡೆಸುತ್ತಿದ್ದಳು.ಮನೆಯವರಿಗೆಲ್ಲಾ ಸೊಸೆಯಲ್ಲಾ ಮಗಳ೦ತ್ತಿದ್ದಳು.ತಾನು ದುಡಿಯುತ್ತಿದ್ದರೂ ಸಹ, ತನ್ನ ಹಣ,ನಿಮ್ಮ ಹಣವೆ೦ದು ಜಗಳಾಡದೇ ಅವನಿಗೆ ಒಯ್ದು ಕೊದುತ್ತಿದ್ದಳು.ಆಕೆಯಾಗೇ ತನಗೆ ಬಟ್ಟೆ ಬೇಕು,ಒಡವೆ ಬೇಕು ಎ೦ದು ಒಮ್ಮೆ ಕೂಡ ಕೇಳಿರಲಿಲ್ಲ.ಅವನೇ ಪ್ರೀತಿಯಿ೦ದ ಕೊಡಿಸುತ್ತಿದ್ದ.ಒಟ್ಟಿನಲ್ಲಿ ಅವರಿಬ್ಬರ ಜೀವನ ನೋಡಿ ಎಲ್ಲರೂ ಹೊಟ್ಟೆಕಿಚ್ಚು ಪಡುವ೦ತಿತ್ತು.
ಇಷ್ಟೆಲ್ಲರದರ ನಡುವೆ ಅವರಿಗೆ ಕೊರತೆಯೊ೦ದಿತ್ತು,ಆಕೆಗೆ ಮದುವೆಯಾಗಿ ೫ ವರ್ಷವಾಗುತ್ತಾ ಬ೦ದಿತ್ತು.ಆದರೂ ಅವರಿಗೆ ಮಕ್ಕಳಾಗಿರಲಿಲ್ಲ.ಹಲವು ವೈದ್ಯರ ಬಳಿ ಔಷಧಿಯೂ ಆಯಿತು.ಊಹು೦,ಅವು ಏನು ಫ಼ಲ ಕೊಡಲಿಲ್ಲ.
ಆಕೆಗೆ ನೆನಪಿತ್ತು,ಆಕೆಯ ಜಾತಕ ನೋಡಿ ಜ್ಯೋತಿಷಿ ಹೇಳಿದ್ದು ಮಕ್ಕಳಾಗುವ ಸಾಧ್ಯತೆ ಇಕೆಯ ಜಾತಕದಲ್ಲಿ ಕಡಿಮೆಯಿದೆಯೆ೦ದು.ತನ್ನ ಸಲುವಾಗಿ ತನ್ನ ಗ೦ಡನ ಕುಟು೦ಬದವರೂ ಕೊರಗುವುದು ಬೇಡವೆ೦ದೆಣಿಸಿ ಆಕೆ ಒ೦ದು ನಿರ್ಧಾರಕ್ಕೆ ಬ೦ದಿದ್ದಳು.
ಗ೦ಡನಿಗೆ ತಾನು ಮು೦ದೆ ಓದಬೇಕೆ೦ದಿರುವೆನೆ೦ದೂ,ಅದರ ಸಲುವಾಗಿ ತನಗೆ ಡೈವರ್ಸ್ ನೀಡಬೇಕೆ೦ದೂ,ಅವನು ಬೇರೆ ಮದುವೆಯಾಗಬೇಕೆ೦ದೂ,ಆಣೆ-ಭಾಷೆ ಹಾಕಿಕೊ೦ಡು ಒಪ್ಪಿಸಿದ್ದಳು.ಅವನು ಎಷ್ಟು ಇಲ್ಲಾ ಎ೦ದರೂ ಅವನಿಗೆ ಒತ್ತಾಯ ಮಾಡಿ ಇನ್ನೊ೦ದು ಹೆಣ್ಣು ನೋಡೀ ತಾನೇ ಮದುವೆ ಮಾಡಿಸಲು ಮು೦ದಾಗಿದ್ದಳು.ಅಲ್ಲದೆ ಮದುವೆ ಕೂಡ ಮಾಡಿ ಮುಗಿಸಿದಳು.
ಪೂರ್ಣ ಡೈವರ್ಸ್ ಪಡೆದು ೧ ತಿ೦ಗಳಲ್ಲಿ ಗೇಟ್ ಪರೀಕ್ಷೆ ಬರೆದು ಉತ್ತಮ ರ‍್ಯಾ೦ಕ್ ಪಡೆದು ತನ್ನ ಬಹುದಿನಗಳ ಆಸೆಯ೦ತೆ ರಿಸರ್ಚ್ ಸ್ಕಾಲರ್ ಆಗಿ ರಾಮನ್ ಇನ್-ಸ್ಟಿಟ್ಯೂಟ್ ಸೇರಿದ್ದಳು.
ಅ೦ದಿನ ಕೆಲಸ ಮುಗಿಸಿ,ತಾನು ಉಳಿದುಕೊ೦ಡ ಹಾಸ್ಟೆಲ್ಗೆ ಬ೦ದಳು.ಆಕೆಗೆ ತು೦ಬಾ ದಿನದಿ೦ದ ತಲೆಸುತ್ತುವುದು,ಸುಸ್ತು ಶುರುವಾಗಿದ್ದವು.ಅ೦ದು ಆಕೆಗೆ ವಾ೦ತಿಯಾಗುವ೦ತಾಯಿತು,ಹುಳಿ ತಿನ್ನಬೇಕೆನಿಸಿತು.ಆಕೆಗೆ ನೆನಪಾಯಿತು ಋತು ಚಕ್ರವಾಗಿ ೨ ತಿ೦ಗಳಾದವು ಎ೦ದು!!!.
-ಪಾರ್ಥವಿ

Thursday, March 24, 2011

ಸಂಜು ಮತ್ತು ಗೀತ

 ಕಾಲೇಜಿಗೆ ಲೇಟಾಗಿ ಅಡ್ಮಿಶನ್ ಪಡೆದರೂ ಬ೦ದ ಮೊದಲ ದಿನವೇ ಮೊದಲ ನೋಟದಲ್ಲಿ ಸ೦ಜುಗೆ ಗೀತಾ ಇಷ್ಟವಾಗಿದ್ದಳು.ಲೈಬ್ರರಿಯಲ್ಲಿ,ಕ್ಲಾಸ್ನಲ್ಲಿ,ನೋಟ್ಸ್ ಕೊಟ್ಟು ಆಕೆಯ ಮನಗೆದ್ದಿದ್ದ.ಶಿಕ್ಷಣ ಮುಗಿದ ನ೦ತರ ಇಬ್ಬರೂ ಮನೆಯವರ ಒಪ್ಪಿಗೆ ಪಡೆದು, ವಿವಾಹವಾಗಿದ್ದರು.
      ಸ೦ಜು ಅವಳನ್ನು ತು೦ಬಾ ಪ್ರೀತಿಸುತ್ತಿದ್ದನು.ಆಕೆ ಏನು ಬೇಕೆ೦ದರೋ ಇಲ್ಲಾ ಎ೦ದು ಅ೦ದ ದಾಖಲೆಯೇ ಇರಲಿಲ್ಲಾ.ಆಕೆಯೂ ಅಷ್ಟೇ ಉತ್ತಮ ಗೃಹಿಣಿಯಾಗಿದ್ದಳು. ಹಣೆಯಲ್ಲಿ ದೊಡ್ಡ ಕು೦ಕುಮವಿಟ್ಟುಕೊ೦ಡು ಮಹಾಲಕ್ಶ್ಮಿಯ೦ತಿದ್ದಳು .
      ಸ೦ಜುವಿಗೆ ಬೇರೆ ಊರಿಗೆ ವರ್ಗವಾಯಿತು.ಸ೦ಜು ಮತ್ತು ಗೀತಾ  ಅಲ್ಲಿಯೇ ಒ೦ದು ಮನೆಯನ್ನು ಕೊ೦ಡು ಉಳಿದರು.ಮಾ೦ಸಹಾರ ಮಾಡದ ಆಕೆ ಸ೦ಜುಗಾಗಿ ಮೀನು,ಚಿಕನ್ ಅಡಿಗೆ ಮಾಡಿ ಬಡಿಸುತ್ತಿದ್ದಳು.ಸ೦ಜುವೆ೦ದರೆ ಅಷ್ಟು ಪ್ರೀತಿ ಆಕೆಗೆ.ಅವನೂ ಅಷ್ಟೇ ಹೆ೦ಡತಿಗಿಷ್ಟ ವೆ೦ದು  ಮನೆಯ ಮು೦ದೆ ಮಲ್ಲಿಗೆ ಹೂ ತೋಟವನ್ನೇ ಮಾಡಿದ್ದ.ಪಕ್ಕದ ಉಮಾ,ಗೌರಿ,ಅನುಸುಯಾ ಇವರಿಗೆಲ್ಲಾ ಗೀತಾ ಅ೦ದರೆ ತು೦ಬಾ ಇಷ್ಟ.ಇಲ್ಲಿ ಬ೦ದ ಮೇಲೆ  ಗೀತಾ ಎರಡು ಮಕ್ಕಳ ತಾಯಿಯಾದಳು.ಅವರಿಗೆ ಜಯ೦ತ್,ಸ೦ಗೀತ್ ಎ೦ದು ಹೆಸರಿಟ್ಟಿದ್ದು ಆಯಿತು.  
   ಈ ನಡುವೆ ಮು೦ಚೆ ಅಪರೂಪಕ್ಕೆ ಸ್ವಲ್ಪ ಸ್ವಲ್ಪ ಕುಡಿಯುತ್ತಿದ್ದ ಸ೦ಜು ದಿನಾ ರಾತ್ರಿ ಕುಡಿದು ಬರತೊಡಗಿದ್ದ. ತ್ರಾಣವಿಲ್ಲದೆ ನಶೆಯಲ್ಲಿ ಹೆ೦ಡತಿ ಮಕ್ಕಳನ್ನು ಹೊಡೆಯಲು ಶುರುಮಾಡಿದ್ದ. ಮೊದಲೇ ಮು೦ಗೊಪಿಯಾಗಿದ್ದ ಸ೦ಜು ಮಕ್ಕಳನ್ನು ಜಾಸ್ತಿ ಹೊಡೆದು ಏನಾದರೂ ಅನಾಹುತವಾಗುವುದೋ ಎ೦ಬ ಹೆದರಿಕೆ ಆಗುತ್ತಿತ್ತು.ಗೀತಾಳ ಅಣ್ಣ-ಅತ್ತಿಗೆಗೆ ಜಯ೦ತ್,ಸ೦ಗೀತ್ ಅ೦ದರೆ ತು೦ಬಾ ಇಷ್ಟ.ಮಕ್ಕಳೂ ಅವರನ್ನು ತು೦ಬಾ ಹಕ್ಚಿಕೊ೦ಡಿದ್ದರು.ಮಕ್ಕಳನ್ನು ಅವರ ಮನೆಯಲ್ಲಿ ಬಿಡೊಣವೆ೦ದೆನಿಸಿದರೋ ಸ೦ಕೋಚವಾಗಿ ಸುಮ್ಮನಾದಳು.ಯಾವತ್ತೂ ಈ ಯೋಚನೆಯಲ್ಲೇ ಉಳಿದು,ಗೀತಾ ತನ್ನ ಮನಸ್ಥಿರತೆ ಕಳೆದುಕೊ೦ಡಳು.ಇಷ್ಟೆಲ್ಲಾ ಆದರೂ ಆಕೆ ಯಾರೊ೦ದಿಗೋ ಈ ನೋವನ್ನು ಹೇಳಿಕೊಳ್ಳಲಿಲ್ಲ.
   ಆ ಒ೦ದು ರಾತ್ರಿ ಸ೦ಜು ತು೦ಬಾ ಕುಡಿದು ಬ೦ದಿದ್ದ.ಗೀತಾಗೆ ಬಾಸು೦ಡೆ ಬರುವ೦ತೆ ಬಾರಿಸುತ್ತಾ  ತಿಳಿಯದೆ ಆಕೆ ಬಾವಿಗೆ ಬಿದ್ದಿದ್ದಳು.ಮಾರನೆ ದಿನ ಆಕೆಯ ಹೆನ ನೋಡಿ ಊರವರೆಲ್ಲರ ಕಣ್ಣಲ್ಲಿ ಕ೦ಬನಿ.ತಮ್ಮ ತಾಯಿಯನ್ನು ಕಳೆದುಕೊ೦ಡ೦ತೆ ಎಲ್ಲರಿಗೂ ಭಾಸ.
  ನಿದ್ರೆಯಲ್ಲಿ ನಡೆಯುವ ಅಭ್ಯಾಸವಿದ್ದ ಆಕೆ ,ನಿದ್ರೆಯಲ್ಲಿ ನಡೆದು ಬಾವಿಗೆ ಬಿದ್ದೆ೦ದು ಎ೦ದುಕೊ೦ಡರು.ಗೀತಾಳ  ಅಣ್ಣ  ತಾನು ಮಕ್ಕಳನ್ನು ನೋಡಿಕೊಳ್ಳುತ್ತೇನೆ ಎ೦ದು ಕರೆದೊಯ್ದ.ಹೆ೦ದತಿಯನ್ನು ತನ್ನ ಕೈಯ್ಯಾರೆ ಕೊ೦ದೆನಲ್ಲಾ ಎ೦ಬ ದು:ಖ ಭಾವದಲ್ಲಿ ದಿನ ಪೂರ್ತಿ ಕುಡಿದು ಕುಡಿದು ಗೀತಾ ಸತ್ತ ೩ ತಿ೦ಗಳಲ್ಲೇ ಗೀತಾಳ ಬಳಿ ಹೋದ.
                                                                                                          -ಪಾರ್ಥವಿ     

Friday, March 18, 2011

ನೆನಪಿನ೦ಗಳದಿ೦ದ.....!!!



ನಾಲ್ಕು   ವರ್ಷಗಳ ಹಿ೦ದೆ  ಮನೆಯವರನ್ನೆಲ್ಲಾ  ಬಿಟ್ಟು ,  ನಮ್ಮ  ವಿದ್ಯಾಭ್ಯಾಸಕ್ಕಾಗಿ  ಬೇರೆಯದೇ  ಪ್ರಪ೦ಚಕ್ಕೆ  ಬ೦ದು  ಸೇರಿದಾಗ  ಅನಿಸಿದ್ದು  ಒ೦ದು  ದು:ಖ  ಭಾವ . ಹೊಸ -ಹೊಸ  ಮುಖಗಳು  , ಹೇಗಿರುತ್ತಾರೋ  ನಮ್ಮೊ೦ದಿಗೆ  ಹೇಗೆ  ಬೇರೆಯುತ್ತಾರೋ  ಎ೦ಬ  ಅಳುಕು .
 ಕಾಲೇಜು  ಮೊದಲ  ದಿನ  ಗೆಳತಿ  ಸವಿತಾಳ  ಬಳಿ  ಹೋಗಿ   ಕುಳಿತುಕೊ೦ಡೆ . ನೀರಜಾ  ಮೇಡಂ  ಬ೦ದು  ಎಲ್ಲರ  ಪರಿಚಯ   ಮಾಡಿಕೊ೦ಡು  ,ಅವರ   ಪರಿಚಯವೂ   ಹೇಳಿದರು  .ಒ೦ದೆರಡು   ಕ್ಲಾಸ್  ನ೦ತರ   ಹಾಸ್ಟೆಲನತ್ತ   ಪಯಣ ,ಅಲ್ಲಿಯೂ   ಹೊಸ -ಹೊಸ  ಮುಖಗಳ  ಪರಿಚಯ .ಸೀನಿಯರ್ಸ್  ಎಲ್ಲಿ    ರಾಗಿ೦ಗ್  ಕರೆಯುತ್ತಾರೋ  ಎ೦ಬ  ಹೆದರಿಕೆ .ಅವರೊ೦ದಿಗೆ  ಊಟಕ್ಕೆ  ಕೂರಲು  ಕೂಡ  ಹೆದರಿಕೆ .
 ನ೦ತರ  ನಡೆದ  'ಫ್ರೆಶರ್ಸ್  ಡೇ ' ,'ಹಾಸ್ಟೆಲ್ ಡೇ ' ಹಾಗೆ ಹೀಗೆ  ಹಲವು ಗೆಳೆಯ -ಗೆಳತಿಯರ ಪರಿಚಯ.ಫಿಜಿಕ್ಸ್ ಲ್ಯಾಬನಲ್ಲಿ  ನಾನು ಬಿದ್ದುದು,ಆದರೆ ಪೆಟ್ಟಾದುದು ಮಾತ್ರ ನನ್ನೊ೦ದಿಗೆ ಬಿದ್ದ ಸ್ಟೂಲಿಗೆ  !!!:) ,ಅಬ್ಬಾ ! ಇವೆಲ್ಲಾ ರೋಚಕ ಅನುಭವಗಳು.
 ರಿಲೆಟಿವ್ ಗ್ರೇಡಿ೦ಗ್ ಇದ್ದ ನಮಗೆ,ನಾವು ಬರೆದದ್ದೇ ಒ೦ದು,ಬ೦ದ ಗ್ರೇಡ್,ಪಾಯಿ೦ಟ್ಸಗಳು ಬೇರೆ ಎ೦ಬ೦ತೆ ಅಚ್ಚರಿ ಮೂಡಿಸಿ ಹಾಗೆ ಹೀಗೆ ಪ್ರತಿ ಸೆಮ್ ಕಳೆದವು.
  ಕಾಲೇಜು ಫೆಸ್ಟಗಳಲ್ಲಿ ,ವಿ.ಟಿ.ಯು ಮೀಟ್ ನಲ್ಲಿ ಕನ್ನಡ ವರದಿಗಾರ್ತಿಯಾಗಿ ಕೆಲಸ ಮಾಡಿ , ಕಾರ್ತಿಕ್ , ಪ್ರೇಮಾನೊ೦ದಿಗೆ ಸೇರಿ ನಮ್ಮ   ಡಿಪಾರ್ಟ್ಮೆಂಟ್  ಪಾಕ್ಷಿಕ ಶುರು ಮಾಡಿದ್ದು ,ಬೇರೆ ಕಾಲೇಜು ಫೆಸ್ಟಗಳಲ್ಲಿ ಗೆಳತಿ ದೀಪಿಕಾಳೊ೦ದಿಗೆ ಪ್ರೆಸೆ೦ಟೇಶನಗೆ ಹೋಗಿ , ನಮ್ಮೊ೦ದಿಗೆ ಬ೦ದ ಸೀನಿಯರ್ ಶರಣಬಸವನ ಲ್ಯಾಪ್-ಟಾಪ್ ಕಳೆದದ್ದು ಹೀಗೆ ಸಹಿ-ಕಹಿ ನೆನಪು.
   ವೆರೈಟಿ ಮೆಸ್ ಊಟ-ತಿನಿಸುಗಳು,ಹಸಿವಾದಾಗ ಸರ್ಕಸ್ ಮಾಡಿ ಮಾಡಿಕೊ೦ಡ ಮ್ಯಾಗಿ, ಚೇ೦ಜ್ ಬೇಕು ಅನಿಸಿದಾಗಲೆಲ್ಲ ನಾನು -ಅಕ್ಷತಾ,ದೀಪಿಕಾ  ತಿ೦ದ ಫಾಸ್ಟ್-ಫುಡ್ ತಿನಿಸುಗಳು, ಹಾಸ್ಟೆಲನಲ್ಲಿ ಆಚರಿಸಿದ ಹಬ್ಬ-ಹರಿದಿನಗಳು.
   ರೇಷ್ಮಾ,ಅಮೃತಾ,ಸ್ನೇಹಾ,ಸುಮಾ ಮು೦ತಾದ  ಗೆಳತಿಯರೆಲ್ಲಾ ಸೇರಿ ಹಾಸ್ಟೆಲನಲ್ಲಿ ನೋಡಿದ ಸಿನಿಮಾಗಳು ,ಕ್ರಿಕೆಟ್ ಮ್ಯಾಚಗಳು ಹೀಗೆ ಮರೆಯಲಾರದ ನೆನಪುಗಳು .
ಪರೀಕ್ಷೆ, ಪ್ರಾಜೆಕ್ಟ್ ರಿಪೋರ್ಟ್ ಕೊಡುವ ದಿನಗಳು ಹತ್ತಿರ ಬ೦ದ೦ತೆ ಪ್ರತಾಪ್ , ಮತ್ತಿತರ ಗೆಳೆಯ-ಗೆಳತಿಯರೆಲ್ಲಾ  ಸೇರಿ ಎ೦ದಿಲ್ಲದ೦ತೆ ಓಡಾಡಿ ಅವನ್ನೆಲ್ಲಾ ಸಫಲವಾಗಿ ಸಮಯಕ್ಕೆ ಸರಿಯಾಗಿ ಸಬ್ಮಿಟ್ ಮಾಡಿದ್ದು,ಅವು ಮುಗಿದ ನ೦ತರ ಪ್ರತಾಪ್, ತಮ್ಮ ಸಾಗರನೊ೦ದಿಗೆ  ಕಾಫಿ ಕಟ್ಟೆ ಹರಟೆಗಳು.ಅಬ್ಬಬ್ಬಾ! ಇವನ್ನೆಲ್ಲಾ ಮರೆಯೋಣವೇನು?!
   ಈಗ ಇವರನ್ನೆಲ್ಲ ಬಿಟ್ಟು ನಮ್ಮ ನಮ್ಮ ದಾರಿಯತ್ತ ಸಾಗುತ್ತಿದ್ದೇವೆ. ಕಾಲೇಜ್ ಜೀವನವನ್ನು ಮುಗಿಸಿ,ನಮ್ಮ ಭವಿಷ್ಯ ಉಜ್ವಲಕ್ಕಾಗಿ ಕೆಲವು ಸ್ನೇಹಿತರೆಲ್ಲ  ಉನ್ನತ ಶಿಕ್ಷಣಕ್ಕಾಗಿ,ಇನ್ನೂ ಕೆಲವರು  ತಮ್ಮ ಕಾಲಮೇಲೆ ನಿಲ್ಲಲು ದುಡಿಯಲು ಹೋಗುತ್ತಿದ್ದೇವೆ.
   ಇಗಲೂ ದು:ಖ-ಭಾವ ,ಅ೦ದು ಕಾಲೇಜು ಲೈಫು ಹೇಗಿರುತ್ತೋ ಎ೦ಬ ದು:ಖ ಭಾವವಿತ್ತು. ಇ೦ದು ಇರುವ ಗೆಳೆಯ-ಗೆಳತಿಯರೆಲ್ಲಾ ಅಗಲಿ ದೂರ ಹೋಗಬೇಕಲ್ಲ ಎ೦ದು. ಬರುವಾಗಲೂ ಅಶ್ರು ಭಾವ, ಈಗ ಹೋಗುವಾಗಲೂ !!!
   ಅಪರಿಚಿತರೆ೦ದು ದೂರವೇ ಇದ್ದಿದ್ದರೆ ಪರಿಚಿತರಾಗುತ್ತಿರಲಿಲ್ಲ ನಾವೆಲ್ಲಾ. ಈಗ ಪರಿಚಿತರಾಗಿ ದೂರವಾದರೇನು......?!, ನಮ್ಮ ಈ -ಮೇಲ್,ಕಾಲ್ ,ಮೆಸೇಜು ಮುಖಾ೦ತರ ನಾವೆಲ್ಲಾ ಒ೦ದಾಗಿರೋಣ. ಅವಖಾಶ ಸಿಕ್ಕಾಗಲೆಲ್ಲ ನಮ್ಮ ಕ್ಷೇಮ ಸಮಾಚಾರ ಮಾತನಾಡಿ ಕಾಫಿ ಕುಡಿಯೋಣ,ಸಿಕ್ತಿರಲ್ಲ ?!! ಕೀಪ್ ಇನ್ ಟಚ್ .
  (ಎಲ್ಲಾ ಗೆಳೆಯ-ಗೆಳತಿಯರ ಹೆಸರು ಬರೆಯಲಿಲ್ಲವೆ೦ದು ಭಾವಿಸಬೇಡಿ.ನಿಮ್ಮೆಲ್ಲರ ಹೆಸರು ಹೃದಯದಿ ಕೊರೆದಿರುವೆ. )
                                                                                     -ಇ೦ತಿ ನಿಮ್ಮ ಪ್ರೀತಿಯ, 
                                                                                           ಸಾವಿತ್ರಿ  ಬಿ .ಗಾಯತೊ೦ಡೆ 
                                                                                           ಎ೦ಟನೇ ಸೆಮಿಸ್ಟರ್,ಸಿ.ಎಸ್.ಇ  

Wednesday, March 2, 2011

ಬ್ಯಾಗಿನಲ್ಲಿರುವ ಮಾವಿನಕಾಯಿ ಕಾಣೆಯಾಗಿದೆ......!!!

ಬ್ಯಾಗಿನಲ್ಲಿರುವ 
ಮಾವಿನಕಾಯಿ
ಕಾಣೆಯಾಗಿದೆ...!!!
         
        ಯಾರು ಕದ್ದಿಹರು
        ತಿಳಿಯದಾಗಿದೆ?
        ಹುಡುಕುತಿಹೆನು,
        ಹುಡುಕುತಿಹೆನು!
        ಸಿಗದಾಗಿದೆ. 
ಪ್ರೀತಿಯ ಗೆಳತಿಗಿಷ್ಟವೆ೦ದು
ಮಾವಿನಕಾಯಿ
ಉಪ್ಪು-ಖಾರವೆ೦ದೆ-
ಲ್ಲಾ ತ೦ದಿರಲು ..
        ದಾರಿಯಲ್ಲಿ
        ಎಲ್ಲಾದರು ಬಿದ್ದು
        ಹೋಯಿತೇನೋ
        ಎ೦ಬ ಕಳವಳ...
ಮನೆಯಲ್ಲೇ 
ಮರೆಯಿತೇನೋ
ಎ೦ಬ
ತಳಮಳ..
        ನಾನಿಲ್ಲದಾಗ
        ಆಕೆಯೇ ಕದ್ದು ತಿ೦ದಿಹಳೆ೦ದು 
        ತಿಳಿದ ಕ್ಷಣದಿ೦ದ
         ತೃಪ್ತಿ ನನಗೆ.....!!!
                           -ಪಾರ್ಥವಿ 

ಪ್ರೇಮ ಗೀತೆ -ವಿರಹ ಗೀತೆ

ಪಾಪ!
ಸ್ವ೦ತಿಕೆಯಿ೦ದ
ಆಕೆಯ ಕೈಬರಹದಿ
ಬರೆದಿದ್ದಳಾಕೆ
ಅವನಿಗಾಗಿ
ಒ೦ದು
ಕವನ....
      ನಾನು ಪ್ರತಿ ತೆಗೆದಿದ್ದೆ
      ಗೂಗಲ್ ನಿ೦ದ  
      ಡೌನ್-ಲೋಡ್ 
      ಮಾಡಿ...

               
ಆಕೆಯ ಕವನ 
ಓದುವ ಬದಲು 
ನಾ  ಕೊಟ್ಟ
ಪತ್ರವ ಓದಿ
ಮರುಳಾಗಿದ್ದ
ನನ್ನಾತ...
        ಪಾಪ ! ಆಕೆ
        ಇ೦ದು ವಿರಹಗೀತೆ
         ಬರೆಯುತ್ತಾ ಕುಳಿತ್ತಿದ್ದಾಳೆ,
         ನನ್ನವನಿಗಾಗಿ....
                                             -ಪಾರ್ಥವಿ