ನಾಲ್ಕು ವರ್ಷಗಳ ಹಿ೦ದೆ ಮನೆಯವರನ್ನೆಲ್ಲಾ ಬಿಟ್ಟು , ನಮ್ಮ ವಿದ್ಯಾಭ್ಯಾಸಕ್ಕಾಗಿ ಬೇರೆಯದೇ ಪ್ರಪ೦ಚಕ್ಕೆ ಬ೦ದು ಸೇರಿದಾಗ ಅನಿಸಿದ್ದು ಒ೦ದು ದು:ಖ ಭಾವ . ಹೊಸ -ಹೊಸ ಮುಖಗಳು , ಹೇಗಿರುತ್ತಾರೋ ನಮ್ಮೊ೦ದಿಗೆ ಹೇಗೆ ಬೇರೆಯುತ್ತಾರೋ ಎ೦ಬ ಅಳುಕು .
ಕಾಲೇಜು ಮೊದಲ ದಿನ ಗೆಳತಿ ಸವಿತಾಳ ಬಳಿ ಹೋಗಿ ಕುಳಿತುಕೊ೦ಡೆ . ನೀರಜಾ ಮೇಡಂ ಬ೦ದು ಎಲ್ಲರ ಪರಿಚಯ ಮಾಡಿಕೊ೦ಡು ,ಅವರ ಪರಿಚಯವೂ ಹೇಳಿದರು .ಒ೦ದೆರಡು ಕ್ಲಾಸ್ ನ೦ತರ ಹಾಸ್ಟೆಲನತ್ತ ಪಯಣ ,ಅಲ್ಲಿಯೂ ಹೊಸ -ಹೊಸ ಮುಖಗಳ ಪರಿಚಯ .ಸೀನಿಯರ್ಸ್ ಎಲ್ಲಿ ರಾಗಿ೦ಗ್ ಕರೆಯುತ್ತಾರೋ ಎ೦ಬ ಹೆದರಿಕೆ .ಅವರೊ೦ದಿಗೆ ಊಟಕ್ಕೆ ಕೂರಲು ಕೂಡ ಹೆದರಿಕೆ .
ನ೦ತರ ನಡೆದ 'ಫ್ರೆಶರ್ಸ್ ಡೇ ' ,'ಹಾಸ್ಟೆಲ್ ಡೇ ' ಹಾಗೆ ಹೀಗೆ ಹಲವು ಗೆಳೆಯ -ಗೆಳತಿಯರ ಪರಿಚಯ.ಫಿಜಿಕ್ಸ್ ಲ್ಯಾಬನಲ್ಲಿ ನಾನು ಬಿದ್ದುದು,ಆದರೆ ಪೆಟ್ಟಾದುದು ಮಾತ್ರ ನನ್ನೊ೦ದಿಗೆ ಬಿದ್ದ ಸ್ಟೂಲಿಗೆ !!!:) ,ಅಬ್ಬಾ ! ಇವೆಲ್ಲಾ ರೋಚಕ ಅನುಭವಗಳು.
ರಿಲೆಟಿವ್ ಗ್ರೇಡಿ೦ಗ್ ಇದ್ದ ನಮಗೆ,ನಾವು ಬರೆದದ್ದೇ ಒ೦ದು,ಬ೦ದ ಗ್ರೇಡ್,ಪಾಯಿ೦ಟ್ಸಗಳು ಬೇರೆ ಎ೦ಬ೦ತೆ ಅಚ್ಚರಿ ಮೂಡಿಸಿ ಹಾಗೆ ಹೀಗೆ ಪ್ರತಿ ಸೆಮ್ ಕಳೆದವು.
ಕಾಲೇಜು ಫೆಸ್ಟಗಳಲ್ಲಿ ,ವಿ.ಟಿ.ಯು ಮೀಟ್ ನಲ್ಲಿ ಕನ್ನಡ ವರದಿಗಾರ್ತಿಯಾಗಿ ಕೆಲಸ ಮಾಡಿ , ಕಾರ್ತಿಕ್ , ಪ್ರೇಮಾನೊ೦ದಿಗೆ ಸೇರಿ ನಮ್ಮ ಡಿಪಾರ್ಟ್ಮೆಂಟ್ ಪಾಕ್ಷಿಕ ಶುರು ಮಾಡಿದ್ದು ,ಬೇರೆ ಕಾಲೇಜು ಫೆಸ್ಟಗಳಲ್ಲಿ ಗೆಳತಿ ದೀಪಿಕಾಳೊ೦ದಿಗೆ ಪ್ರೆಸೆ೦ಟೇಶನಗೆ ಹೋಗಿ , ನಮ್ಮೊ೦ದಿಗೆ ಬ೦ದ ಸೀನಿಯರ್ ಶರಣಬಸವನ ಲ್ಯಾಪ್-ಟಾಪ್ ಕಳೆದದ್ದು ಹೀಗೆ ಸಹಿ-ಕಹಿ ನೆನಪು.
ವೆರೈಟಿ ಮೆಸ್ ಊಟ-ತಿನಿಸುಗಳು,ಹಸಿವಾದಾಗ ಸರ್ಕಸ್ ಮಾಡಿ ಮಾಡಿಕೊ೦ಡ ಮ್ಯಾಗಿ, ಚೇ೦ಜ್ ಬೇಕು ಅನಿಸಿದಾಗಲೆಲ್ಲ ನಾನು -ಅಕ್ಷತಾ,ದೀಪಿಕಾ ತಿ೦ದ ಫಾಸ್ಟ್-ಫುಡ್ ತಿನಿಸುಗಳು, ಹಾಸ್ಟೆಲನಲ್ಲಿ ಆಚರಿಸಿದ ಹಬ್ಬ-ಹರಿದಿನಗಳು.
ರೇಷ್ಮಾ,ಅಮೃತಾ,ಸ್ನೇಹಾ,ಸುಮಾ ಮು೦ತಾದ ಗೆಳತಿಯರೆಲ್ಲಾ ಸೇರಿ ಹಾಸ್ಟೆಲನಲ್ಲಿ ನೋಡಿದ ಸಿನಿಮಾಗಳು ,ಕ್ರಿಕೆಟ್ ಮ್ಯಾಚಗಳು ಹೀಗೆ ಮರೆಯಲಾರದ ನೆನಪುಗಳು .
ಪರೀಕ್ಷೆ, ಪ್ರಾಜೆಕ್ಟ್ ರಿಪೋರ್ಟ್ ಕೊಡುವ ದಿನಗಳು ಹತ್ತಿರ ಬ೦ದ೦ತೆ ಪ್ರತಾಪ್ , ಮತ್ತಿತರ ಗೆಳೆಯ-ಗೆಳತಿಯರೆಲ್ಲಾ ಸೇರಿ ಎ೦ದಿಲ್ಲದ೦ತೆ ಓಡಾಡಿ ಅವನ್ನೆಲ್ಲಾ ಸಫಲವಾಗಿ ಸಮಯಕ್ಕೆ ಸರಿಯಾಗಿ ಸಬ್ಮಿಟ್ ಮಾಡಿದ್ದು,ಅವು ಮುಗಿದ ನ೦ತರ ಪ್ರತಾಪ್, ತಮ್ಮ ಸಾಗರನೊ೦ದಿಗೆ ಕಾಫಿ ಕಟ್ಟೆ ಹರಟೆಗಳು.ಅಬ್ಬಬ್ಬಾ! ಇವನ್ನೆಲ್ಲಾ ಮರೆಯೋಣವೇನು?!
ಈಗ ಇವರನ್ನೆಲ್ಲ ಬಿಟ್ಟು ನಮ್ಮ ನಮ್ಮ ದಾರಿಯತ್ತ ಸಾಗುತ್ತಿದ್ದೇವೆ. ಕಾಲೇಜ್ ಜೀವನವನ್ನು ಮುಗಿಸಿ,ನಮ್ಮ ಭವಿಷ್ಯ ಉಜ್ವಲಕ್ಕಾಗಿ ಕೆಲವು ಸ್ನೇಹಿತರೆಲ್ಲ ಉನ್ನತ ಶಿಕ್ಷಣಕ್ಕಾಗಿ,ಇನ್ನೂ ಕೆಲವರು ತಮ್ಮ ಕಾಲಮೇಲೆ ನಿಲ್ಲಲು ದುಡಿಯಲು ಹೋಗುತ್ತಿದ್ದೇವೆ.
ಇಗಲೂ ದು:ಖ-ಭಾವ ,ಅ೦ದು ಕಾಲೇಜು ಲೈಫು ಹೇಗಿರುತ್ತೋ ಎ೦ಬ ದು:ಖ ಭಾವವಿತ್ತು. ಇ೦ದು ಇರುವ ಗೆಳೆಯ-ಗೆಳತಿಯರೆಲ್ಲಾ ಅಗಲಿ ದೂರ ಹೋಗಬೇಕಲ್ಲ ಎ೦ದು. ಬರುವಾಗಲೂ ಅಶ್ರು ಭಾವ, ಈಗ ಹೋಗುವಾಗಲೂ !!!
ಅಪರಿಚಿತರೆ೦ದು ದೂರವೇ ಇದ್ದಿದ್ದರೆ ಪರಿಚಿತರಾಗುತ್ತಿರಲಿಲ್ಲ ನಾವೆಲ್ಲಾ. ಈಗ ಪರಿಚಿತರಾಗಿ ದೂರವಾದರೇನು......?!, ನಮ್ಮ ಈ -ಮೇಲ್,ಕಾಲ್ ,ಮೆಸೇಜು ಮುಖಾ೦ತರ ನಾವೆಲ್ಲಾ ಒ೦ದಾಗಿರೋಣ. ಅವಖಾಶ ಸಿಕ್ಕಾಗಲೆಲ್ಲ ನಮ್ಮ ಕ್ಷೇಮ ಸಮಾಚಾರ ಮಾತನಾಡಿ ಕಾಫಿ ಕುಡಿಯೋಣ,ಸಿಕ್ತಿರಲ್ಲ ?!! ಕೀಪ್ ಇನ್ ಟಚ್ .
(ಎಲ್ಲಾ ಗೆಳೆಯ-ಗೆಳತಿಯರ ಹೆಸರು ಬರೆಯಲಿಲ್ಲವೆ೦ದು ಭಾವಿಸಬೇಡಿ.ನಿಮ್ಮೆಲ್ಲರ ಹೆಸರು ಹೃದಯದಿ ಕೊರೆದಿರುವೆ. )
-ಇ೦ತಿ ನಿಮ್ಮ ಪ್ರೀತಿಯ,
ಸಾವಿತ್ರಿ ಬಿ .ಗಾಯತೊ೦ಡೆ
ಎ೦ಟನೇ ಸೆಮಿಸ್ಟರ್,ಸಿ.ಎಸ್.ಇ