ನನಗ೦ಟಿರುವುದು
ಹೊಸ ಕಾಯಿಲೆ
ಕರ್ಣ ಕಾಯಿಲೆ .
ನೆನಪಾಗಬೇಕಾದಾಗ
ನೆನಪಾಗದ ಸೂತ್ರಗಳು
ಬೇಡಸಲ್ಲದ ಹೊತ್ತಲ್ಲಿ
ನೆನಪಾಗುತ್ತವೆ ..
ಅಗತ್ಯವಿದ್ದಾಗ
ಸಿಗದವುಗಳು ,
ಅನಗತ್ಯವಿದ್ದಾಗ
ಹೇರಳವಾಗುತ್ತವೆ ...
ಅಗತ್ಯವಿದ್ದಾಗ
ಸಿಗದ ಕು೦ತಿ ಪ್ರೀತಿ
ಅನಗತ್ಯವಿದ್ದಾಗ
ಸಿಕ್ಕ ಹೇರಳ ಕುರುಮಿತ್ರ ಬಳಗ .
ಈ ಪ್ರಥಮ ಪ್ರುಥೆಯನ್ನು
ಪರಶುರಾಮ
ಶಪಿಸಿದ೦ತೆ
ನನ್ನನ್ನು ಯಾರು
ಶಪಿಸಿದರೋ
ನಾನರಿಯೆ ?!!!
-ಗುರು-ಶಿಷ್ಯೆ
No comments:
Post a Comment