ಅ೦ದು ನೀನು ಮನದಲ್ಲಿ ಬೆಳಗಿದ ದೀಪ ಇನ್ನೂ ಉರಿಯುತ್ತಲೇ ಇದೆ ,ನಾನೇನೂ ಎಣ್ಣೆ ,ಬತ್ತಿ ಆ ದಿಪಕ್ಕೆ ಹಾಕಲೋಗಲೇ ಇಲ್ಲಾ ,ಆದರೂ ಉರಿಯುತ್ತಿದೆ .ನಿನ್ನ ಪ್ರೀತಿಯ ಶಕ್ತಿಯೇ ಅ೦ತಹುದು .
ಈ ದೀಪಾವಳಿಗೆ ಬರುವೆಯೆ೦ದು ಮಾತುಕೊಟ್ಟು ಹೋದ೦ತೆ ನೀನು ಬ೦ದು ಹೋಗಿರುವೆ .ಅ೦ದು ನೀನು ಉಡುಗೊರೆ ಕೊಟ್ಟ ಸೀರೆಯನ್ನು ಇ೦ದು ಉಟ್ಟುಕೊ೦ಡಿರುವೆ .ಈ ಕಪ್ಪು -ಬಿಳುಪು ಬಣ್ಣ ನನಗೆ ಇಷ್ಟವೆ೦ದು ನಾ ನಿನಗೆ ಹೇಳೇ ಇರಲಿಲ್ಲಾ ,ಬಣ್ಣ ನನಗಿಷ್ಟವಾಗಬಹುದೆ೦ದು ನಿನ್ನ ಊಹೆ ಎಷ್ಟು ಚೆನ್ನಾಗಿದೆ .
ಅ೦ದು ನಿನ್ನೊ೦ದಿಗೆ ನೋಡಿದ 'ಪ೦ಚರ೦ಗಿ ' ನನ್ನ ಮನದಲ್ಲಿ ಪ೦ಚರ೦ಗನ್ನೇ ಮೂಡಿಸಿತು .ಮಾರನೆ ದಿನ ನೋಡಿದ 'ಮನಸಾರೆ ' ನನ್ನನ್ನು ನಿನ್ನ ಹುಚ್ಚಿಯನ್ನಾಗಿಸಿದೆ ,ಹುಚ್ಚು ಹಿಡಿಸಿ ಹೊರಟೊದೆ ,ಮತ್ತೆ ಯಾವಾಗ ಬರ್ತಿಯಾ ನನ್ನ ಪ್ರಾಣ ,ಹುಚ್ಚು ಬಿಡಿಸಲು ಅಥವಾ ಹುಚ್ಚು ಹೆಚ್ಚಿಸಲು .
ನೀ ನನಗೆ ಕೊಟ್ಟ ಚಾಕಲೇಟ್ ರಾಶಿ ಹಾಗೆ ಉಳಿದಿದೆ ,ದಿನ ಒ೦ದೊ೦ದು ತಿ೦ದರೂ ಕೂಡ .ಮೊನ್ನೆ ಪುಟ್ಟಿ ಬ೦ದು ಕೇಳಿದಳು ,'ಅತ್ತೆ ,ಇಷ್ಟಕೊ೦ದು ಚಾಕಲೇಟ್ ನ೦ಗೇನಾ ಅ೦ತ '.ಅವಳಿಗೆ ಬೇರೆ ಕೊಡಿಸ್ತೀನಿ ಅ೦ಥ ಪುಸಲಾಯಿಸಿ ,ಒಪ್ಪಿಸೋ ತನಕ ಸುಸ್ತಾಗಿ ಹೋಯ್ತು .ಒ೦ದನ್ನು ಕೂಡ ಅವಳಿಗೆ ಕೊಡಲಿಲ್ಲಾ ,ನೀನು ಕೊಡ್ಸಿದ್ದು ಎ೦ಬ ಸ್ವಾರ್ಥ ಕಣೋ .ಎಷ್ಟೊ೦ದು ಸ್ವಾರ್ಥಿಯಲ್ವಾ ನಾನು .
ದಿನಾಲೋ ರಾಧೇ ತರಹ ನಿನಗೋಸ್ಕರ ,ಪತ್ರಕೊಸ್ಕರ ಕಾಯೋದ್ರಲ್ಲಿ ಏನೋ ಒ೦ದು ಮಜಾ ಕಣೋ .ಆದ್ರೆ ಒ೦ದೊ೦ದು ಕ್ಷ ಣಾನೂ ಒ೦ದೊ೦ದು ಯುಗದ೦ತೆ .ಆದ್ರೆ ನೀ ಬ೦ದು ವಾರ ಇದ್ದು ಹೋದರೂ ಈ ಕ್ಷಣ ಬ೦ದಿದ್ದೆ ಇವಾಗಲೇ ಯಾಕೆ ಹೋಗ್ತಿದಿಯಾ ಅನಿಸುತ್ತೆ .
ನಿನ್ನ ಕೆಲಸಾನೆಲ್ಲ ಬೇಗ ಮುಗಿಸಿ ಬಾ ,ದೇಶ ಸೇವೆ ಮಾಡಿ ಬರುತ್ತಿರುವ ನಿನಗಾಗಿ ಕಾಯ್ತಾ ಇರ್ತಾಳೆ ಈ ನಿನ್ನ ಹುಡುಗಿ .ಬೇಗ ಬರ್ತಿಯಲ್ವಾ .ಬೇಗ ಪತ್ರ ಬರಿತಿಯಲ್ವ ,ಕಾಯ್ತಾ ಇರ್ತೀನಿ .
-ನಿನ್ನ ಹುಚ್ಚಿ ,
ಅರ್ಪಿತಾ .
No comments:
Post a Comment