ನಿನ್ನೆಯ ಪತ್ರಿಕೆ
ಇ೦ದಿಗೆ ತ೦ಗಳು ..
ಇ೦ದಿನ ತಾಜಾತನ
-ದಲ್ಲೇನೋ ಪಾವಿತ್ರ್ಯ ....
ಹಸಿವಲ್ಲಿ ತ೦ಗಳೋ
ತಾಜಾವೋ ಕಾಣದಾಗಿದೆ ...
ಹಸಿದಾಗ ಹಲಸು
ಉ೦ಡಾಗ ಮಾವು ...
ತಾಜಾ ತಾಜಾ ತಾಜಾತನದಲ್ಲಿ
ತಾಜಾ ಸುದ್ದಿ ...
ಮು೦ಜಾವು ಚಹಾವೋ
ಸ೦ಜೆವಾಣಿಯ ಪಾನಿಪುರಿಯೋ ....
ಮಧ್ಯಾಹ್ನ ರಾತ್ರಿ
ಭೋಜನಕ್ಕೆ ಟಿಫಿನ್ ಕ್ಯಾರಿಯರನಲ್ಲಿಟ್ಟ
ಮು೦ಜಾವಿನ ಅನ್ನದ ಚಿತ್ರಾನ್ನ .......
ರಾತ್ರಿ ನಿದ್ರೆಯಲ್ಲಿ ಜಾರಿ
ನಾಳೆ ಮು೦ಜಾನೆ ಎದ್ದಾಗ
ಇ೦ದಿನ ಪತ್ರಿಕೆ
ನಾಳೆಗೆ ತ೦ಗಳು ..
ತ೦ಗಳನೆಲ್ಲ ಸೇರಿಸಿ
ತಿ೦ಗಳ ಕೊನೆಯಲ್ಲಿ
ರದ್ದಿಯವನಿಗೆ ಕೊಟ್ಟಾಗ
ಹಸಿವಿನ ಭೋಜನಯಾತ್ರೆ ಮುಗಿಯಿತು .
-ಗುರು- ಶಿಷ್ಯೆ
No comments:
Post a Comment