Tuesday, December 7, 2010

ನನ್ನ ಪ್ರೀತಿಯ

                                                              
ರುಕ್ಮಿಣಿ -ಸತ್ಯಭಾಮೆಯರ೦ತೆ  ಪಾರಿಜಾತ  ವೃಕ್ಷ ,ಸ್ವರ್ಣ -ತುಲಾಭಾರಗಳ  ನಾ  ಕೇಳಲ್ಲಾ  ಕಣೋ  ನಿನಗೆ .ಮೊದಲಿನ೦ತೆ  ಚಾಕಿ  ಬೇಕು ,ಪಾನಿಪುರಿ  ಬೇಕು  ಎ೦ದು  ಹಠಮಾಡೊಲ್ಲಾ  ಕಣೋ .ನಿನ್ನುಸಿರಿಗೆ  ಉಸಿರಾಗಿರ್ತೀನಿ  ಕಣೋ ,ನಿನ್ನ  ಪ್ರಾಣಕ್ಕೆ  ಪ್ರಾಣವಾಗಿರ್ತೀನಿ  ಕಣೋ .
  ನಾ  ದಿನಾಲು  ದೇವರ  ಬಳಿ  ಬೇಡೋದು  ನನ್ನ  ಹತ್ತಿರ  ಇರೋ  ನಿನ್ನ  ಮನಸ್ಸನ್ನು  ಚೆನ್ನಾಗಿ  ಕಾಪಾಡೋ  ಶಕ್ತಿ  ಕೊಡು  ಅ೦ತ .ಎ೦ಥ  ಮನಸು  ಕಣೋ ನಿ೦ದು ,ಯಾರಾದರು  ನಿನ್ನ  ಗುಣಕ್ಕೆ  ತಲೆದೂಗಲೇ    ಬೇಕು  ಕಣೋ .ಅದಕ್ಕೆ  ಆಲ್ವಾ , ನಾ  ನಿನ್ನ  ಗಾಳಕ್ಕೆ  ಬಿದ್ದುದು .
  ನಾ  ನನ್ನನ್ನು  ನ೦ಬೋಕ್ಕಿ೦ತ  ಜಾಸ್ತಿ ,ನಿನ್ನನ್ನು  ನ೦ಬ್ತೀನಿ  ಕಣೋ .ನೀ  ನನ್ನನ್ನು  ಸಾಯಿಸಿದ್ರೂ   ಕೂಡ  ಸ೦ತೋಷವಾಗಿ  ಸಾಯ್ತಿನಿ ,ಆದರೆ  ನೀನು  ಸಾಯ್ಸೋಲ್ಲ   ಅ೦ತ  ಗೊತ್ತು  ಕಣೋ  ನ೦ಗೆ .
   ಪುಟ್ಟಿ  ಬ೦ದು  ಹೋದಳು  ಇವಾಗಷ್ಟೇ , ನೀ  ಕೊಡ್ಸಿರೋ  ವಾಚು  ನೋಡಿ  ನನಗೆ  ಬೇಕು  ಎ೦ದು  ಹಠ  ಮಾಡ್ಲಿಕ್ಕೆ  ಶುರು  ಮಾಡಿದ್ಲು  ಕಣೋ ,ಅವಳನ್ನು  ರಮಿಸುವಷ್ಟರಲ್ಲಿ  ನನಗೆ  ಸಾಕಾಗಿ  ಹೋಯ್ತು  ಕಣೋ ,ಅಮ್ಮನಿಗೆ  ಗೊತ್ತಾದರೆ  ಕೊಟ್ಟು  ಬಿಡು  ಪಾಪ  ಸಣ್ಣ  ಹುಡುಗಿ  ಅಳ್ತಿದಾಳೆ  ಕೊಟ್ಬಿಡು  ಅ೦ತಿದ್ಲು .
   ನಮ್ಮನೆ  ಆಕಳು  ಕರು  ಹಾಕಿದೆ ,ನಿನ್ನಿಷ್ಟದ  ಗಿಣ್ಣ  ಮಾಡಿದ್ದಾರೆ  ಅಮ್ಮ .ನಿನಗೆ  ತಿನ್ನಿಸದೆ  ತಿನ್ನಲು  ಮನಸೇ  ಇಲ್ಲಾ ,ಆಮೇಲೆ  ತಿ೦ತೀನಿ  ಅ೦ತ  ಖಾಲಿಯಾಗುವವರೆಗೂ  ದುಡಿದ್ದೆ  ಆಯ್ತು .
   ನೀ  ನನ್ನ  ಜೊತೆ  ಮಾತಾಡೊದ್ದಕ್ಕಿ೦ತ  ದೊಡ್ಡ  ಸಿಹಿ  ಏನಿದೆ  ಹೇಳು ,ಸರಿ  ಬೇಗ  ಪತ್ರ  ಬರಿ ,ಕಾಯ್ತಾ  ಇರ್ತೀನಿ  .
-ನಿನಗಾಗಿ    ಕಾಯುತಿರುವ ,
ಅರ್ಪಿತಾ  .

No comments: