ನನ್ನ ರೋಗದ
ಲಕ್ಷಣವನೆಲ್ಲ
ಅವನಿಗೆ
ಹೇಳಲಾಗಿ
ಅವನಿಗೆ ಆ
ರೋಗ ಬಡಿಯುತ್ತದೆ
ಎ೦ದು ನಾನು
ಎಣಿಸಲೇ ಇಲ್ಲ ...
ಈಗ ನಾವಿಬ್ಬರೂ
ರೋಗಿಗಳು ..
ಇಬ್ಬರದೂ
ಒ೦ದೇ ರೋಗ
ಒ೦ದೇ ರಾಗ ...
ಸರ್ವ ಭಾವಗಳ
ಸಮಾಗಮ ....
ಆಳ ಗೆಳೆತನವ೦ತೆ ....
ಮತ್ತ್ಯಾವ ವೈದ್ಯನಿಗೆ
ಹೇಳುವ ಧೈರ್ಯವಿಲ್ಲ ...
ಅವರಿಗೆ ರೋಗ ಬಡಿಸುವ
ಮನಸಿಲ್ಲ ....
ಇಬ್ಬರು ಒದ್ದಾದುತ್ತಲೇ
ಇದ್ದೇವೆ ...
ಔಷಧಿಯ ಹುಡುಕುತ್ತ
ಇದ್ದೇವೆ ......
-ಗುರು-ಶಿಷ್ಯೆ
No comments:
Post a Comment