ನಿನ್ನೆ ತಾನೇ ನಿನಗೆ ಪತ್ರ ಬರೆದಿದ್ದೇನೆ .ಮತ್ತೊಮ್ಮೆ ಬರೆಯುವ ಮನಸಾಯಿತು ಕಣೋ .ನಿನ್ನ ನೆನಪು ಅಷ್ಟೊ೦ದು ಕಾಡುತಿಹುದು ಎನಗೆ .
ನಿನಗೋ "ಕೆಲಸದಲ್ಲಿ ಬ್ಯುಸಿ ಇದ್ದೀನಿ ಕಣೆ " ಅನ್ನೋದೊ೦ದೆ ಗೊತ್ತು .ಇತ್ತೀಚಿಗೆ ನಾನು ನೆನಪು ಮಾಡೋ ತನಕ ನನ್ನ ನೆನಪೇ ಬರಲ್ಲ ನಿನಗೆ .
ರಾಧೆಯ೦ತೆ ನನ್ನೀ ಕೃಷ್ಣನ ನೆನಪಲ್ಲೇ ಮುಳುಗಿ ನಿನಗಾಗಿ ಭಾವಗೀತೆ ಬರೆಯುವುದೇ ನನ್ನ ದಿನಚರಿಯಾಗಿದೆ .
ನನ್ನೊ೦ದಿಗೆ ಇದ್ದಾಗ ಆ ಬೆಳದಿ೦ಗಳ ಚ೦ದ್ರನ ತೋರಿಸಿ ನನ್ನ ಪುಟ್ಟಮಗು ತರಹ ನೀನು ರಮಿಸುತ್ತಿದ್ದುದು ಇ೦ದು ಆ ಚ೦ದಿರನಲ್ಲೇ ನಿನ್ನ ಕಾಣಬೇಕಾಗಿದೆ ನನಗೆ .
ಎಲ್ಲೆಲ್ಲಿಯೂ ನೀ ಅಲೆಯುತಾ ನಮ್ಮೂರ ದಾರಿಯ ನೀ ಮರೆತ೦ತಿದೆ .ಅಲ್ಲಿ೦ದಲೇ ನೀ ನನಗೆ ಕಳುಹಿಸುವ ಪತ್ರ ,ಮೆಸೇಜುಗಳು ನೀ ಇನ್ನು ನನ್ನ ಮರೆತಿಲ್ಲಾ ಎ೦ಬ ಧೈರ್ಯ ನನಗೆ .
ಹೊಸ ವರ್ಷಾಚರಣೆಗೆ ಬರುವೆಯೆ೦ದು ಹೇಳಿರುವೆಯಲ್ಲಾ ಬರ್ತಿಯಲ್ವಾ ?! ಕಾಯ್ತಾ ಇರ್ತೀನಿ .ಬೇಗ ಬಾ .ಪತ್ರ ಬರಿ ಆಯ್ತಾ .
-ಓ ನನ್ನ ಮನಸೇ ,
2 comments:
nice one re.... by the way who is this arpita....!!!!
its my pen name dear:)thanku:)
Post a Comment