Tuesday, February 12, 2013

ವರುಷದ ಹಿಂದೆ


 

                                   

ವರುಷದ ಹಿಂದೆ ,

ಸದ್ದಿಲ್ಲದೇ ನೀ ಬಂದೆ ..

ಪ್ರೀತಿಯ ಬೀಜವ ಮನದಲ್ಲಿ ಬಿತ್ತಿದೆ..!!!

೭ ಹೆಜ್ಜೆ,೩ ಗಂಟು,ಗಟ್ಟಿಮೇಳ,ಅಕ್ಷತೆ,

ಮಂಗಳಾಷ್ಟಕ,ಅರುಂಧತಿ ನಕ್ಷತ್ರ ,

ನಡುವೆ ಹೊಳೆಯುತ್ತಿತ್ತು ಪ್ರೀತಿ ರತ್ನ!!!

ಹಸಿರು ಗಾಜಿನ ಬಳೆಗಳ ಸದ್ದು,

ನೀ ನನ್ನ ಕೈ ಹಿಡಿದು,

ಸಪ್ತಪದಿ ತುಳಿವಾಗ ಪ್ರೀತಿಯೇ ಹಿರಿದು..!!!

ಗೃಹ ಪ್ರವೇಶ,ಮರು ದಿಬ್ಬಣ,ವರ-ಭೇಟಿ,

ಹನಿ ಮುನ್ನಾರ್,ಮೈಸೂರು - ಊಟಿ,

ಸಾಗಿದ್ದೆ ತಿಳಿಯಲಿಲ್ಲ ಒಂದು ವರ್ಷದ ಭರಾಟೆ..!!!

ನೂರು ಕನಸುಗಳ ಹೊತ್ತು,

ನನಸಾಗಿಸುತ್ತ ಸಾಗಿದೆ,ಬಾಳ ಗಮ್ಮತ್ತು,

ಹೀಗೆ ಸಾಗುತಿರಲಿ ಬಾಳ ನೌಕೆಯ ಮತ್ತು !!!

ನಾ ಬೇಡುವುದಿಷ್ಟೇ ದೇವರಲಿ,

ಸುಖವಿರಲಿ,ದುಃಖದಲಿ,

ಸಮಪಾಲು ನಮಗಿರಲಿ...!!!

ಕೂಡಿ ಬಾಳಿ,ಕೂಡಿ ಅಲೆ-

-ದು ,ಬಾಳ ನೌಕೆಯು ಸಾಗುತಿರಲಿ!!
 
 
-------ಚಿನ್ನು-----

 


 

 

 

 

 

ಮದುವೆ ವಾರ್ಷಿಕೋತ್ಸವದ ಸಂಭ್ರಮ


         

 

ಆತ : 'ಪ್ರೀತಿ' ಎಂದರೆ ನೀನೇ ಕಣೆ.

ಆಕೆ :ಪ್ರೀತಿಸಲು ಹೇಳಿಕೊಟ್ಟವನು ನೀನೇ ಅಲ್ಲವೇ.?!

ಆತ:'ಈ ಮೊದಲೇ ಯಾಕೆ ಸಿಗಲಿಲ್ಲ ನೀನು'.

ಆಕೆ: 'ಆವಾಗ ಮುಡಿಸಬೇಕೆಂದಿದ್ದ ಪ್ರೀತಿ ಹೂವನ್ನು ಈಗ ಮುಡಿಸಿ'.

ಆತ :ನಿನ್ನ ಇಷ್ಟು ಪ್ರೀತಿಗೆ ಏನು ಕೊಡಲಿ?!

ಆಕೆ:ನಿನ್ನ ಪ್ರೀತಿಗಿಂತ ಮಿಗಿಲಾದುದೇನಿದೆ ಗೆಳೆಯ!!

ಆತ:ಚಿನ್ನು!

ಆಕೆ:ಪುಟ್ಟು!!

ಪ್ರೀತಿಯಿಂದ ಎಲ್ಲರೆದುರಿಗೆ ಸವಿ, ರೀ ಎಂದು ಕರೆದುಕೊಳ್ಳುವ ಇವರಿಬ್ಬರೂ,ಏಕಾಂತದಲ್ಲಿ ಒಬ್ಬೊಬ್ಬರನ್ನು ಕರೆದುಕೊಳ್ಳುವ ಪ್ರೀತಿಯ ನಿಕ್-ನೇಮ್ ಗಳು ಬಹಳ.ಎಲ್ಲರಿಗೂ ಹೇಳುವಷ್ಟು ಸರಳವಲ್ಲವದು. ಇಬ್ಬರೂ ಈ ಶತಮಾನದ ಮುದ್ದಣ-ಮನೋರಮೆಯಂತಹವರು.

ಒಂದು ವರ್ಷದ ಹಿಂದೆ ,

ಹುಡುಗಿ:ಮಾತು ಬೆಳ್ಳಿ,ಮೌನ ಬಂಗಾರದಂತವಳು.

ಹುಡುಗ:ಮಾತಿನ ಮಲ್ಲ,ಬಂಡೆಗಲ್ಲನ್ನು ಮಾತನಾಡಿಸಿಕೊಂಡು ಬರುವವ.ಮೀನು,ಮಾಂಸ ತಿನ್ನುವುದರಲ್ಲಿ ಬೆಕ್ಕಿನಂತೆ.

ಹುಡುಗಿ:ಮಾರು ದೂರದಲ್ಲಿ ಮೀನು ಮಾರುಕಟ್ಟೆ ಇದ್ದಾರೆ ಮೂಗು ಮುಚ್ಚಿಕೊಳ್ಳುವವಳು.ರಾಗದ ಮಲ್ಲಿಯಂತೆ.

ಹುಡುಗ:ಪಾದರಸದಂತೆ.ನನ್ನವಳಿಗೆ ಚೆನ್ನಾಗಿ ಅಡಿಗೆ ಮಾಡಲು ಬಂದರೆ ಚೆನ್ನ.

ಹುಡುಗಿ:ಅಡುಗೆಯ ಅ ಆ ಇ ಬರದವಳು..!!...ತನ್ನದೇ ಪ್ರಪಂಚದಲ್ಲಿರುವವಳಾಕೆ!

ಹುಡುಗ:ಸದಾ ಜನರೊಂದಿಗೆ ಬೆರೆಯುವ ಜನಾನುರಾಗಿ!!

ಹುಡುಗ:ಕಾವ್ಯವೆಂದರೆ ಪ್ರಾಸ-ಅಲಂಕಾರಗಳ ಜೋಡಣೆ...ರಾಗ,ತಾಳ,ಭಾವಗಳ ಜೋಡಣೆ!!

ಹುಡುಗಿ:ಪ್ರಾಸ ಅದು ತ್ರಾಸ!!ಎಲ್ಲವೂ ಸ್ವತಂತ್ರ ಗೀತೆ ಯಾಕಾಗಬಾರದು!

ಎಣಿಸುತ್ತಾ ಹೋದರೆ ಭಿನ್ನ ವ್ಯಕ್ತಿತ್ವದ ಈ ಎರಡು ಹೃದಯಗಳನ್ನು ಆ ಬ್ರಹ್ಮ ಹೇಗೆ ಸೃಷ್ಟಿ ಮಾಡಿ,ಇಬ್ಬರನ್ನೂ ಹೀಗೆ ಸೇರಿಸಲು ಯೋಚಿಸಿದನೋ.ಇದೇ ಒಂದು ವರ್ಷದ ಹಿಂದೆ ತೀರ ಅಪರಿಚಿತರಾಗಿದ್ದ ಇವರಿಬ್ಬರೂ ಮದುವೆಯೆಂಬ ಪವಿತ್ರ ಬಂಧನದಲ್ಲಿ ಪ್ರೀತಿಯ ಏಳು ಹೆಜ್ಜೆಗಳನ್ನು ಜೊತೆಜೊತೆಯಲ್ಲಿತ್ತಿದ್ದು ಮೊನ್ನೆ ಮೊನ್ನೆಯಂತಿದೆ!

ಪ್ರೀತಿಯೆಂದರೆ ಸಮಾನ ಮನಗಳ ಮಿಲನವೇ ಆಗಬೇಕೆಂದಿಲ್ಲ.ಸಮಾನ ಮನಸುಗಳ ಜೊತೆಯಲಿ ಒಬ್ಬರಿಗೊಬ್ಬರು ಇನ್ನೊಬ್ಬರ ಅಭಿಪ್ರಾಯಗಳನ್ನು ಗೌರವಿಸುವ ಕಲೆ.ಆ ಕಲೆಯನು ಅರಿತು ಬಾಳಿ,ಪ್ರೀತಿ ಸ್ವರ್ಗವನ್ನು ಕಾಣುತಿಹರು.

ಆತ: ಈ ಬಾರಿ ನಮ್ಮ ಪ್ರೀತಿಯ ಹುಟ್ಟುಹಬ್ಬಕ್ಕೆ ಏನು ಉಡುಗೊರೆ ಕೊಡಲಿ ?

ಆಕೆ:ಅದೇ ಕಳೆದ ಬಾರಿ 'ಪ್ರೀತಿ ದಿನಾಚರಣೆ'ಗೆ ಕೊಟ್ಟ ಗುಲಾಬಿ.

ಆತ:ಅಷ್ಟೇ ಸಾಕೆ?ಇನ್ನೇನಾದರೂ ಕೇಳು! ಮುತ್ತಿನ ಹಾರ,ರೇಶ್ಮೆ ಸೀರೆ?!!

ಆಕೆ:ಪ್ರೀತಿಯ ಮುತ್ತಿನ ಹಾರ ಕೊಟ್ಟರೆ ಬೇಡ ಎಂದು ಯಾಕೆ ಹೇಳಲಿ!!

ಆತ:ಸಾಕು!ಸಾಕು!! ಪ್ರೀತಿಯಿಂದ ಊಟಕೆ ಬಡಿಸು!

ಆಕೆ:ಅಡಿಗೆ ಏನೂ ಮಾಡಿಲ್ಲ!!

ಆತ :ಇಷ್ಟೆಲ್ಲ ಮಾಡಿದ್ದಿಯಲ್ಲ?! ನೂರು ಜನರಿಗೆ ಕರೆದಿದ್ದಿಯೇನು ಊಟಕೆ!!

ಆಕೆ:ಪ್ರೀತಿಯಿಂದ ನಿಮಗಾಗಿ ಮಾಡಿದ್ದು!!ಸ್ವಲ್ಪ ಜಾಸ್ತಿಯಾಯ್ತು!!

ಅಯ್ಯೋ,ಎಷ್ಟು ಕೇಳ್ತಿರಾ?ಇವರ ಸಂಭಾಷಣೆ.ಕಿವಿ ಮುಚ್ಕೊಳ್ಳೋಣ.ಬಿಟ್ಟರೆ ಜೀವನವಿಡೀ ಮಾತನಾಡುತ್ತಾ ಕುಳಿತು ಬಿಡುತ್ತಾರೆ!

ಆಕೆ:ರೀ,ಈ ಹೆಸರು ಕರೆದು ಬೋರ್ ಬಂತು,ಏನಾದರೂ ಹೊಸ ತರಹ ಕರೀಲಾ?

ಆಟ:ಏನಾದರೂ ಕರಿ.ಹಾಂ!ಆ ಎರಡು ಹೆಸರು ಮಾತ್ರ ಬೇಡ.ಅದಕ್ಕೆ ಬೇರೆಯವರ ಹೆಸರಲ್ಲಿ ಪೇಟೆಂಟ್ ಇದೆ!!(ಆಕೆಗೆ ಆ ಹೆಸರೇ ಇಷ್ಟದಂತಿತ್ತು!!)

ಅಮ್ಮ,ಇನ್ನೂ ಕೇಳುತ್ತಾ ಇದೆ.ಅಬ್ಬಬ್ಬಾ ಪಚ್ಚೆ ಸೀರೆ,ಪಚ್ಚೆ ಬಳೆ ತೊಟ್ಟು ಅಮ್ಮಾವ್ರು ಗ್ರೀನ್ ಸಿಗ್ನಲ್ ಕೊಟ್ಟಿದ್ದೆ,ರಾಯರು ತಾಳಿ ಕಟ್ಟಿ,ಕರೆದುಕೊಂಡು ಬಂದಿದ್ದು ಇದೇ ೧ ವರ್ಷದ ಹಿಂದೆ ಫೆಬ್ರುವರಿ ೧೨ ರಂದು.

ಈಗ ಇಬ್ಬರದ್ದೂ ದಿನಾಲೂ ಪ್ರೀತಿ ರಾಗ,ಪ್ರೀತಿ ಉಸಿರು.ಪ್ರೀತಿಯಲ್ಲಿ ಮುಳುಗಿ ಬಿಟ್ಟಿದ್ದಾರೆ.ಪ್ರೀತಿಯಿಂದ ಆಕೆ ಇಷ್ಟದ ಜಾಮೂನು ಮಾಡಿ ಕಾಯ್ತಾ ಇದ್ದಾಳೆ ,ಸಾರು ಆಫೀಸಿನಿಂದ ಬಂದ ತಕ್ಷಣ ತಿನ್ನಿಸಿ,ಮೊದಲು ವಿಶ್ ಮಾಡಲು,ಅವನು ಮಾಡುವ ಮುಂಚೆ!!

ಹೀಗೆ ಸಾಗುತಿರುವ ಪ್ರೀತಿ ಜೀವನ ನೂರು ವರ್ಷ ಕಾಲ,ಪ್ರೀತಿಯಿಂದ ನಡೆದರೆ ಅಷ್ಟೇ ಸಾಕು.ದೇವರಲಿ ನಾ ಬೇಡಿಕೊಳ್ಳುವುದಿಷ್ಟೇ!!ಈ ಪ್ರೀತಿ ದಿನದಿ,ಪ್ರತಿ ದಿನದಿ.!!

ಪ್ರಿಯತಮ,ಸಂಗಾತಿ ,ಇನಿಯ .ಸ್ನೇಹಿತ ಇವೆಲ್ಲಕ್ಕಿಂತ ಮಿಗಿಲಾದ ನಿನ್ನ ಹೇಗೆ ಕರೆಯಲಿ ಚಿನ್ನ.ನಿನ್ನ ಪ್ರೀತಿಯ ಮಡಿಲಲಿ ಮಲಗಿ ಸದಾ ನಿನ್ನೊಂದಿಗೆ ಪ್ರೀತಿ ಸಂಭಾಷಣೆ ನಡೆಸುವಾಸೆ!

ಪ್ರೀತಿಯಿಂದ ಬರೆದಿದ್ದೇನೆ .ಪ್ರೀತಿಯಿಂದ ಓದಿ,ಪ್ರೀತಿಯಿಂದ ತಪ್ಪಿದ್ದರೆ ಕ್ಷಮಿಸಿ.

-ಇಂತಿ ನಿನ್ನ ಪ್ರೀತಿಯ ,
    ಚಿನ್ನು