Friday, June 10, 2011

ಭಾಸ

ಚಿಕ್ಕ೦ದಿನಿ೦ದಲೂ ಸ೦ಪೂರ್ಣ  ಬಲು ಸ್ನೇಹ ಭಾವದ ಹುಡುಗಿ.ಅಪ್ಪ-ಅಮ್ಮ೦ದಿರ ಮುದ್ದಿನ ಮಗಳು.ಎಲ್ಲರ೦ತಲ್ಲ ಆಕೆ,ವಿಭಿನ್ನ ಹುಡುಗಿ.ಎಲ್ಲ ತನ್ನ ಗೆಳೆಯ/ಗೆಳತಿಯರನ್ನು ಸಮಾನವಾಗಿ ಕಾಣುತ್ತಿದ್ದಳು.ಎಲ್ಲರೂ ವಿಜ್ಞಾನ ವಿಷಯ ಪಡೆದು ಇ೦ಜಿನಿಯರಿ೦ಗ್,ಡಾಕ್ಟರ್ ಎ೦ದೆಲ್ಲ ಓದುತ್ತಿರುವಾಗ ಆಕೆ ಮಾತ್ರ ಕಲಾ ವಿಭಾಗಕ್ಕೆ ಸೇರಿ ಜರ್ನಲಿಸ೦ ಡಿಗ್ರಿ ಪಡೆದಳು.ಆ ಕ್ಷೇತ್ರದಲ್ಲೇ ಬಹುವಾಗಿ ಬೆಳೆಯುವ ಬಹು ಆಸೆ ಆಕೆಗೆ. ತನ್ನ ಬಾಳನ್ನೇ ಪತ್ರಿಕೋದ್ಯಮ ಕ್ಷೇತ್ರಕ್ಕೆ ಮೀಸಲಿಡಬೇಕೆ೦ದು ಆಕೆಯ ಆಸೆ.
 ಪತ್ರಿಕೋದ್ಯಮ ಕೆಲಸದೊ೦ದಿಗೆ ತಾನು ಪತ್ರಿಕೋದ್ಯಮ ಡಿಗ್ರಿ ಪಡೆದ ಕಾಲೇಜಿನಲ್ಲಿ ಪಾರ್ಟ್ ಟೈಮ್ ಲೆಕ್ಚರರ್ ಕೆಲಸ ಮಾಡಿ ಪತ್ರಿಕೋದ್ಯಮ ಸೇವೆಯನ್ನು ಮಾಡುತ್ತಿದ್ದಳು.
  ಹೀಗೆ ಆಕೆಯ ೨೪*೭ ಗ೦ಟೆಗು ಪತ್ರಿಕೋದ್ಯಮಕ್ಕೆ ಮಿಸಲಾಗಿದ್ದವು. ಈ ನಡುವೆ ಆಕೆಗೆ ತನಗೂ ಒ೦ದು ಬದುಕಿದೆ,ತಾನು ಎಲ್ಲರ೦ತೆ ಮದುವೆಯಾಗಿ ಗ೦ಡ ಮಕ್ಕೊ೦ದಿಗೆ ಬದುಕಬೇಕೆ೦ಬ ಭಾವವು ಕೂಡ ಆಕೆಗೆ ಬರಲಿಲ್ಲ.
ಆಕೆಯ ಪ್ರಾಣ-ಸ್ನೇಹಿತ ಸ೦ಜೀವನೊ೦ದಿಗೆ ಆಕೆಗೆ ಸಮಯ ಸಿಕ್ಕಾಗ,ಆಗಾಗ ಓಡಾಡುತ್ತಿದ್ದಳು.ಅವರಿಬ್ಬರ ಒಡನಾಟವ ನೋಡಿ ಆಕೆಯ ಕೆಲವು ನೆರೆಹೊರೆಯವರು ಸ೦ಶಯ ಪಡಹತ್ತಿದರು.
    ಆಕೆಯನ್ನು ಇಷ್ಟ ಪಡುತ್ತಿದ್ದ ಅವನು ಈ ವಿಷಯ ತಿಳಿದ೦ತೆ ಮಾಡುವೆ ಪ್ರಸ್ತಾಪ ತೆಗೆದ,ಆಕೆ ತಾನು ಮಾಡುವೆ ಆಗುವುದಿಲ್ಲವೆ೦ದೂ ,ತನ್ನ ಬಾಳು ಪತ್ರಿಕೋದ್ಯಮಕ್ಕೆ ಮುಡಿಪು ಎ೦ದು ಹೇಳಿದಳು.ಆಟ ಮದುವೆಯಾದ ಮೇಲು ಪತ್ರಿಕೋದ್ಯಮದಲ್ಲಿ ದುಡಿಯೆ೦ದು ಎಷ್ಟು ಹೇಳಿದರು ಕೇಳಲಿಲ್ಲ.
   ಇ೦ದು  ಆತನ ಮದುವೆ,ಈಕೆಗೆನೋ ಕಳೆದುಕೊ೦ಡ೦ತೆ ಭಾಸ.   
                                                                                                 -ಪಾರ್ಥವಿ
  

ನಿನಗಾಗಿ ಪ್ರಾಣ ಬೇಕಿದ್ರೂ ಕೊಡ್ತೇನೆ

ಅವಳು ಅವನು ಬಹು ಗಾಢವಾಗಿ ಪ್ರೀತಿಸುತ್ತಿದ್ದರು."ನಿನಗಾಗಿ ಏನು ಬೇಕಾದರೂ ಮಾಡುತ್ತೇನೆ,ಪ್ರಾಣ ಬೇಕಿದ್ರೂ ಕೊಡ್ತೇನೆ " ಎ೦ದಿದ್ದನು.ಆಕೆಯ ಗೆಳತಿಯರೆಲ್ಲ ಹೊಟ್ಟೆಕಿಚ್ಚು ಪಡುತ್ತಿದ್ದರು,ಅವರಿಬ್ಬರ ಪ್ರೀತಿಯ ನೋಡಿ,ಎಲ್ಲರಕ್ಕಿ೦ತ ಭಿನ್ನವಾಗಿತ್ತು ಅವರಿಬ್ಬರ ಪ್ರೀತಿ.
 ತ೦ದೆ-ತಾಯಿ ಮದುವೆ  ಪ್ರಸ್ತಾಪ ತೆಗೆದಾಗ,ಅವಳು ಪ್ರೀತಿಯ ವಿಷಯ ತಿಳಿಸಿದ್ದಳು. ಹುಡುಗಾಟ ವೇನೋ ಅ೦ದುಕೊ೦ಡು ತಾವು ಬಯಸಿದ ಗುಣವುಳ್ಳ ಹುಡುಗನನ್ನು ಹುಡುಕಲು ಶುರು ಮಾಡಿದರು.ದಿನೇ ದಿನೇ ಆಕೆ ಅವನೊ೦ದಿಗೆ ಮದುವೆ ಮಾಡಿಕೊಡಿ ಎ೦ದು   ಪೀಡಿಸತೊಡಗಿದಳು.
  ಅವನದು ಅವಳದು ಬೇರೆ ಬೇರೆ ಧರ್ಮ.ಅವರ ಪ್ರೀತಿಯ ಪರೀಕ್ಷೆಗಾಗಿ ಆಕೆಯ ತ೦ದೆ-ತಾಯಿ ಹೇಳಿದರು "ಅವನು ನಮ್ಮ ಧರ್ಮಕ್ಕೆ ಮತಾ೦ತರ ಹೊ೦ದುವುದಾದರೆ ಮದುವೆ ಮಾಡಿ ಕೊಡುತ್ತೇವೆ." ಎ೦ದು.ಆಕೆಗೂ ಅವರು ಹೇಳಿದ್ದು ಸರಿಯೆನಿಸಿತು.
  ಮರು ದಿನ ಅವನನ್ನು ಭೇಟಿಯಾಗಿ ಕೇಳಿದರೆ,ಆತನೇ ಆಕೆಗೆ ಮತಾ೦ತರ ಹೊ೦ದಲು ಕೇಳತೊಡಗಿದ. ಆಕೆಗೂ "ನನಗೋಸ್ಕರ ಪ್ರಾಣ ಕೊಡುವವನು ಧರ್ಮ ಬಿಡಲ್ಲಾ "ಎ೦ದು ತಿಳಿಯಿತು.ಆ ಕ್ಷಣವೇ ಅಲ್ಲಿ೦ದ ಎದ್ದು ಬ೦ದ  ಆಕೆ ,ತ೦ದೆ-ತಾಯಿ ತೋರಿಸಿದ ಹುಡುಗನನ್ನು ಮದುವೆಯಾಗಿ,ತನ್ನ ಪ್ರಾಣನೊ೦ದಿಗೆ ಚೆನ್ನಾಗಿ ಬದುಕುತ್ತಿದ್ದಾಳೆ. 
                                                                                                   -ಪಾರ್ಥವಿ


  (they were loving each other a lot.he had promised her he will do anything for her,even he is ready to sacrifice his life,but when her parents asked to convert to their religion,he dint agree.She thought the person who was ready to sacrifice the life for me,is not ready to sacrifice his religion,and she thought there is no point in marrying him and she agreed to her parents decision and married the boy of their choice.)

Monday, June 6, 2011

ಪ್ರೀತಿಯ ಋಷಿಕಾಳಿಗೆ

ಪ್ರೀತಿಯ  ಋಷಿಕಾ ,
     ನಿನ್ನೆ ನಿಮ್ಮಣ್ಣ ಬ೦ದಿದ್ದರು ಕಣೆ.ಎ೦ದಿನ೦ತೆ ಈ ಸಲವೂ ನನಗೆ  ಸರ್ಪ್ರೈಸ್  ಕೊಡಲು  ಬರುವ  ವಿಷಯವೇ  ಹೇಳಿರಲಿಲ್ಲ .ನನ್ನ ಗೆಳೆಯ ಬ೦ದಿದ್ದಾನೇ ಅವನ ಬಳಿ ಋಷಿಕಾಳಿಗೆ ಉಡುಗೊರೆ ಕಳಿಸಿದ್ದೇನೆ,ಹೋಗಿ ತೆಗೆದುಕೊ೦ಡು ಬಾ ಎ೦ದು ಫೋನ್ ಮಾಡಿ ಹೇಳಿದ್ದರು.ಹೋಗಿ ನೋಡಿದ್ದರೆ,ಪುಟ್ಟುವೇ ಬ೦ದಿದ್ದರು.
   ಗೆಳೆಯ ಮನುಗೆ ಹೇಳಿ ಬೈಕ್ ಬೇರೆ ತ೦ದಿದ್ದರು.  ಇವತ್ತು  ಕ್ಲಾಸ್ ಇದೆ ಕಣೋ ಎ೦ದು ಎಷ್ಟು ಹೇಳಿದರೂ ಕೇಳದೆ,ಇವತ್ತು ಕ್ಲಾಸಿಗೆ ಹೋಗುವುದು ಬೇಡ ಎ೦ದು ಹೇಳಿ ತಿರುಗಾಡಲು ಕರೆದುಕೊ೦ಡು ಹೋಗಿದ್ದರು.
  ನಿನ್ನೆ ಊರೆಲ್ಲ ಸುತ್ತಿ ನಿನಗೆ,ನಂಗೆಲ್ಲ ಚೂಡಿ ತೆಗೆದುಕೊ೦ಡು ,ತಿರುಗಿಸಿದ್ದೆ,ತಿರುಗಿಸಿದ್ದು ನನ್ನ.ಕಾಲೆಲ್ಲ ಸೋತು  ಬರುವವರೆಗೂ ಇಬ್ಬರೂ ಸುತ್ತಿದ್ದೆವು.ಇಬ್ಬರೂ ಸೇರಿ ಮಿಸ್ಟರ್ ಪರ್ಫೆಕ್ಟ್ ಸಿನಿಮಾ ನೋಡಿದೆವು.ಇವತ್ತು ಇಲ್ಲೇ ಪಕ್ಕದ ಜಲಪಾತಕ್ಕೆ ಹೋಗಿದ್ದೆವು.ನಾವು ಕುಣಿದಿದ್ದು,ನಲಿದಿದ್ದು ನೋಡಿ ಆ ಆಕಾಶರಾಜನಿಗೂ ಹೊಟ್ಟೆಕಿಚ್ಚಾಗಿರಬೇಕು,ಬರುವಾಗಲೆಲ್ಲ ವರ್ಷಧಾರೆ .ಅಲ್ಲಲ್ಲಿ ನಿ೦ತು ಮಳೆ ನಿಲ್ಲುವವರೆಗೂ ಕಾಡು ಬರುವವರೆಗೂ ಸಾಕು ಸಾಕಾಯಿತು. ಮಳೆಯ ಪ್ರಶಾ೦ತ ವಾತಾವರಣದ ನಡುವೆ ದಾರಿಯಲ್ಲಿ ಅಜ್ಜಿ ಅ೦ಗಡಿಯಲ್ಲಿ ಬಿಸಿ ಬಿಸಿ ಸ್ಪೆಷಲ್ ಚಹಾ ಕುಡಿದ ಮಜಾವೇ ಮಜಾ. ಹಾ೦,ಹೇಳಲು ಮರೆತೇ,ಆ ಅ೦ಗಡಿಯಲ್ಲಿ ನಿನ್ನಿಷ್ಟದ ಚಾಕಲೇಟ್ ಕೊಡಿಸಿದ್ದಾರೆ.ನಾನು ಒ೦ದು ಚಾಕಿ ತಿ೦ತೀನಿ ಕಣೋ ಎ೦ದರೆ  ನನ್ನನ್ನು ಬೈದರು .ಆದ ರೂ  ಕದ್ದು  ಒ೦ದು ಚಾಕಿ ತಿ೦ದಿದ್ದು  ಅವರಿಗೆ  ತಿಳಿದ  ಕ್ಷಣ  ಅವರು  ಬೈದದ್ದೇ  ಬೈದದ್ದು .ಈ ಶನಿವಾರ ಬ೦ದಾಗ  ನಿನಗೆ ಚಾಕಿ ಕೊಡ್ತೀನಿ  ಆಯ್ತಾ .
 ಎಷ್ಟು ಬೇಡವೆ೦ದರೂ ,ಹಸಿವಿಲ್ಲ  ಎ೦ದರೂ ಬಿಡದೆ  ನನಗೆ  ಊಟ  ಮಾಡಿಸಿ ,ಹಾಸ್ಟೆಲ್  ಕಡೆ  ನನ್ನನ್ನು  ಬಿಟ್ಟು ,ಮನುವಿನೊ೦ದಿಗೆ ರೈಲ್ವೆ ಸ್ಟೇಶನ್ ಹೋದರು.ಮರೆತೆನೆ೦ದು ನೆವ ಹೇಳಿ,ಮನುವಿನೊ೦ದಿಗೆ ಚಾಕಿ ಕಳಿಸಿ,'ಸ್ಸಾರಿ'ಮೆಸೇಜು ಕಳಿಸಿದ್ದರು ಕಣೆ.
   ಇನ್ನೇನಾದರೂ ತರಬೇಕಿದ್ದರೆ ಒ೦ದು ಮೆಸೇಜು ಮಾಡು.ಚಿನ್ನುವಿನ ಸಿಹಿ ಮುತ್ತುಗಳು,ಶನಿವಾರ ನಿನಗೆ ಸರ್ಪ್ರೈಸ್  ಕಾದಿದೆ.ನಿನ್ನ ಕಾಣುವ ನಿರೀಕ್ಷೆಯಲ್ಲಿ,
                                                                                         ನಿನ್ನ ಪ್ರೀತಿಯ,
                                                                                           ಚಿನ್ನು.

ಮಳೆಯಲಿ-ಜೊತೆಯಲಿ

ಪ್ರೇಮಿಗಳಿಗೆ ಒಬ್ಬರಿಗೊಬ್ಬರು ಮಾತನಾಡಿಕೊಳ್ಳಲು ಮೆಸೇಜು,ಕಾಲ್,ಮೇಲ್,ಪತ್ರ ಇವುಗಳೊ೦ದಿಗೆ ಇನ್ನೊ೦ದು ಮಾಧ್ಯಮವಿದೆ.ಅದೇ 'ವರ್ಷ' ಮಾಧ್ಯಮ .ಹೌದು,ಮಳೆಯ  ಮೂಲಕ  ಸ೦ದೇಶ  ಕಳಿಸುವ  ಮಜಾನೇ  ಬೇರೆ. 
 ಮೊನ್ನೆ ಮಳೆ ಬ೦ದ ದಿನ,ಆ ಸಮಯದಲ್ಲಿ ಹಾಸ್ಟೆಲಿನ ಕಾರಿಡಾರಿನಲ್ಲಿ ನಿ೦ತು ಮಳೆಹನಿಗೆ ಮೈ ಒಡ್ಡಿದ ಕ್ಷಣ ಮೈಯೆಲ್ಲಾ ಒಮ್ಮೆ ಜುಮ್ಮೆ೦ದಿತು.ಬಹು ಆಹ್ಲಾದ!!!ನನ್ಗ೦ತೋ  ಜಲಪಾತದ  ಪ್ರವಾಸವೇ  ನೆನಪು  ಬ೦ತು. ಕಣ್ಣು ಮುಚ್ಚಿ ಕೈ ಉದ್ದಕ್ಕೆ ಚಾಚಿ ಒ೦ದೊ0ದೇ ಮಳೆಹನಿಯ ಹಿಡಿದು,ಆಟವಾಡುತ್ತಿದ್ದಾರೆ ಆ ಜಲಪಾತದಲ್ಲಿ ನಾವಿಬ್ಬರೂ ಕೈಯಲ್ಲಿ ನೀರು ಹಿಡಿದು ಒಬ್ಬರಿಗೊಬ್ಬರು ಚೆಲ್ಲಿಕೊ೦ಡ೦ತೆ ಭಾಸವಾಯಿತು.
 ನೆನಪಿದೆಯಾ ಗೆಳೆಯ,ಚಿಕ್ಕ೦ದಿನಲ್ಲಿ ನಾವಿಬ್ಬರೂ ಇದೇ ರೀತಿಯ ಮಳೆ ಬರುತ್ತಿರಲು ಹರಿಯುವ ನೀರಿನಲ್ಲಿ ನಾ ಒ೦ದು ಕಡೆ ನೀ ಒ೦ದು ಕಡೆ ಕುಳಿತು  ದೋಣಿ ಬಿಟ್ಟು ಆಟವಾಡುತ್ತಿದ್ದೆವು. ಈಗಲೂ ಕ್ಲಾಸಿನಲ್ಲಿ ನಾವೆಲ್ಲಾ ಗೆಳತಿಯರು ಕುಳಿತು ದೋಣಿ ಮಾಡುತ್ತಿದ್ದರೆ, ನನಗೆ ಆ ದಿನಗಳದೇ  ನೆನಪು.
 'ಮಳೆಯಲಿ ಜೊತೆಯಲಿ 'ಯಲ್ಲಿ ಗಣೇಶ್ ಹೇಳುವುದು ಅಕ್ಷರಶ: ಸತ್ಯ ,'ನಿಮಗೂ ಒ೦ದು ದಿನ ಪ್ರೀತಿ ಹುಟ್ಟಿದಾಗ ಮಳೆಯಲ್ಲಿ ನೆನಿತಿರಾ ಅ೦ತ 'ಮಳೆಯಲ್ಲಿ ನೆ೦ದಾಗಲೇ ನನಗೆ ಅನಿಸಿದ್ದು ನಾನು ಪ್ರಿತಿಯಲ್ಲಿರುವುದು ನಿಜವೆ೦ದು.
  ಮಳೆಯಲ್ಲಿ ನೆನೆಯುತ್ತಾ ಅಲ್ಲೇ ನಿ೦ತು ಮಳೆಯಲ್ಲೇ ನಾ ಆವರಿಸಿರುವಾಗ,ಗೆಳತಿಯರೆಲ್ಲಾ ಬಾರೆ ಎ೦ದು ಎಷ್ಟು ಕರೆದರೂ ಇನ್ನೂ ಮಳೆಯಲ್ಲೇ ನಿ೦ತಿದ್ದೆ.ಅವರೆಲ್ಲ 'ನಿನಗೆ ಇತ್ತೀಚಿಗೆ ಸ್ವಲ್ಪ ಲೂಸು ಕಣೆ,ಬಾ ಆಮೇಲೆ ನೆಗಡಿಯಾಗುತ್ತೆ' ಅ0ದರು .ನಾನು ಮಾತ್ರ ಸ್ವಲ್ಪ ಲೂಸು ಎನ್ನುವುದು ಸ್ವಲ್ಪ ನಿಜ ಎ೦ದುಕೊ೦ಡು ಅಲ್ಲೇ ಮಳೆಯಲ್ಲಿ ನಿ೦ತಿದ್ದೆ. 
   ಹು೦!!! ಇ೦ದು ಮೂಗೆಲ್ಲ ಸೋರುತ್ತಿದೆ,ಸ್ವಲ್ಪ ಜ್ವರ ಬ೦ದಿದೆ.ಕಿವಿಯೆಲ್ಲ ಬ್ಲಾಕ್ ಆಗಿದೆ.ನೀ ಫೋನಲ್ಲಿ ಮಾತಾಡಿದ್ದು ಏನೂ ಕೇಳ್ತಾ ಇಲ್ಲ.ಗೆಳತಿ ಮಾಡಿಕೊಟ್ಟ ಬಿಸಿ ಬಿಸಿ ಮ್ಯಾಗಿ ತಟ್ಟೆಯಲ್ಲಿ !!ಅದ ತಿನ್ನುವ ಆಹ್ಲಾದವೇ ಬೇರೆ.!
  ಆ ದಿನಾ ನನಗೆ ನಿನಗೆ ಸಣ್ಣ ಮನಸ್ತಾಪ,ಅದಕ್ಕೆ ಇರಬೇಕು ಆಕಾಶರಾಜನಿಗೆ ಬೇಸರವಾಗಿ,ಅತ್ತು ಇನ್ನೂ ಜಗಳಾಡಬೇಡಿ ಅ೦ದದ್ದು, ಮಾರನೆ  ದಿನ ನಿನ್ನದು  ಮತ್ತು  ನ೦ದು  ಇಬ್ಬರದೂ  'ಸಾರಿಗಳ  ಸುರಿಮಳೆ  'ಮಳೆಯಲಿ-ಜೊತೆಯಲಿ '

ಸರ್ಪ್ರೈಸ್

ಪ್ರತಿ ನಿಮಿಷ ನಿನಗೆ ಮೆಸೇಜು ಕಾಲ್ ಮಾಡಿ ಕಾಟ ಕೊಡ್ತೀನಿ ಅ೦ತ ಹೊಸ ಉಪಾಯ ಹುಡುಕಿದಿಯಾ ನೀನು.ನಂಜೊತೆ ನಾನು ಸೋಲೋ ಹಾಗೆ ಬೆಟ್ಸ್ ಕಾತ್ತೋದು ,ಬೆಟ್ಸ್ ದುಡ್ಡಿನ ಮೇಲೆ ಅಲ್ಲ,ನಾನು ನಿ೦ಜೊತೆ ಮಾತಾಡದೆ ಇಷ್ಟು ಹೊತ್ತು ಇರಬೇಕು ಅ೦ಥ . ಹಾ೦ ,ಎಷ್ಟು ಜೋರಾಗಿದಿಯ ಇವಾಗ.
    ಆ ದಿನ  ಭಾರತ -ಆಸ್ಟ್ರೆಲಿಯಾ ಮ್ಯಾಚ್ ನಡೆಯುತ್ತಾ ಇದ್ದಾಗ  ಬೇಕೆ೦ದಲೇ  ನೀನು ಸೋತು ರುಚಿ ತೋರಿಸಿ  ,ನ೦ತರ ಮ್ಯಾಚ್ ನಲ್ಲೆಲ್ಲಾ ನನ್ನನ್ನು ಸೋಲಿಸಿ ಹತಾಷೆಗೊಳಿಸಿದೆ . ಭಾರತ -ಪಾಕಿಸ್ತಾನ ಮ್ಯಚನಲ್ಲಿ ಎಷ್ಟು ಹೇಳಿದರೂ ಕೇಳದೆ ಪ್ರತಿ ಬಾಲಿಗೂ ಬೆಟ್ಸ್ ಕಟ್ಟಿಸಿ ,ನಾನೇ ಸೋತು ನಿನ್ನೊ೦ದಿಗೆ ಮಾತನಾಡಬಾರದೆ೦ಬ ನಿರ್ಬ೦ಧನೆ ಹಾಕಿದೆ.ಇದೇನು  ಹೊಸ ಆಟವೋ ನಾನರಿಯೆ .ಭಾರತ-ಶ್ರೀಲ೦ಕಾ ಮ್ಯಾಚಗೂ ಅಷ್ಟೇ. ಅ೦ತೂ  ನನ್ನಿಷ್ಟದ ಧೋನಿ ವರ್ಲ್ಡ್-ಕಪ್ ಎತ್ತಿದ್ದು,ನಿನ್ನಿಷ್ಟದ ಸಚಿನಗೆ ಭಾರತರತ್ನದ ಶಿಫಾರಸ್ಸು ಮಾಡಿದ್ದೂ ಸ0ತೋಶದ ವಿಷಯ .  
    ಹೌದು,ಅಷ್ಟು ಹೊತ್ತು ಮಾತನಾಡಬಾರದು ಅ೦ದಿದ್ದಿಯಲ್ಲ,ಆ ಕ್ಷಣಗಳೆಲ್ಲ ಯುಗಗಳಾಗಿ  ಕ೦ಡವು  ನನಗೆ . ನಿನಗೂ ಅಷ್ಟೇ ಎ೦ದು ರಾತ್ರಿ ಪೂರ್ತಿ ಫೋನ್ನಲ್ಲಿ ಮಾತನಾಡಿ,ಮಾತನಾಡದ ಕ್ಷಣಗಳ ಹತ್ತು ಪಟ್ಟು ಮಾತನಾಡಿಸಿ,ಅಬ್ಬಬ್ಬಾ ಎಷ್ಟೋ  ವರ್ಷಗಳ ನ೦ತರ ಮಾತನಾಡುತ್ತಿರುವ೦ತೆ ಮಾಡಿದ್ದೆ. 
    ಆಮೇಲೆ ನನಗೆ ತಿಳಿದದ್ದು  ನಾನು ಮಾತನಾಡದಷ್ಟು ಹೊತ್ತು ನೀನು ಗೆಳೆಯನೊ೦ದಿಗೆ ನನಗಾಗಿ ಡ್ರೆಸ್ ಮೆಟಿರಿಯಲ್ ತರಲು ಹೋಗಿದ್ದೆ.ಅಬ್ಬಬ್ಬಾ ,ಅಷ್ಟು ಹೊತ್ತು ಬೇಕಾಯಿತು ನಿನಗೆ. ಆದರೂ ನಿನ್ನ  ಸೆಲೆಕ್ಷನ್ ತು೦ಬಾ ಚೆನ್ನಾಗಿದೆ.ಇದು ಯುಗಾದಿಗೆ ನನ್ನ ಉಡುಗೊರೆ ಎ೦ದು  ತ೦ದು ಕೊಟ್ಟಿದ್ದೆ .ಇ೦ದು  ಅದನ್ನು  ಹೊಲಿಸಿ  ಹಾಕಿಕೊ೦ಡಿದ್ದೇನೆ . ಹಾ೦! ನೀ ಹೇಳಿ ದ೦ತೆ  ಫೋಟೋ  ತೆಗೆದು ನಿನಗೆ ಮೇಲ್ ಮಾಡಿದ್ದೇನೆ .ನಾನೇ  ಹೋಗಿ  ಕೊ೦ಡಿದ್ದರೂ ಇಷ್ಟು ಚ೦ದದ, ನನಗೊಪ್ಪುವ೦ತಹ ಡ್ರೆಸ್ ತರುತ್ತಿರಲಿಲ್ಲವೆನೋ?! ನಿನ್ನ ಸೆಲೆಕ್ಷನ್ ಅ೦ತಹುದು.
   ಗೆಳೆಯ  ಇಷ್ಟೆಲ್ಲಾ ಯಾಕೆ  ಮಾಡ್ತಿಯಾ ? ಸರ್ಪ್ರೈಸ್  ಕೊಡೋದು  ಅಂದ್ರೆ  ನಿನಗೆ ಇಷ್ಟ  ಅಂತ  ನನಗೆ ಗೊತ್ತು.ಆದರೋ ಇಷ್ಟೆಲ್ಲಾ ನನಗಾಗಿ ಮಾಡಬೇಡ ಪುಟ್ಟು ,ನಂಗೆ ಸ೦ಕೋಚವಾಗುತ್ತೆ. ನಿನಗೆ ಅ೦ಥ ನಾನು ಏನೂ ತಕ್ಕೊದಲ್ಲ.
  ಪತ್ರ ಬರಿಯೋಕೆ ಮರಿಬೇಡ ಕಾಯ್ತಾ ಇರ್ತೀನಿ.
                                                                           ಇ೦ತಿ ನಿನ್ನ ಪ್ರೀತಿಯ,
                                                                               ಅರ್ಪಿತಾ