Saturday, December 18, 2010

Best love

                                                              

They were best friends ,very close ones too, and she would win any battle if they were together. They use to share each others happiness, sadness. They used to have food together sometimes.
She fell in love with him. That love grown deeply. But once he told he loved her friend pranati. She promised him she will help him in his love.
But Pranati refused the proposal, though they were friends before, they both tried a lot to convince her. Pranati  was not ready to accept him at any cost, and she avoided him a lot.
He was very silent these days, he was not interested in anything, he was not having his food also properly  .He was lost totally and she too.
Though she loved him a lot she didn’t tell him. Her mother strongly opposed love marriages. She loved and respected her parents a lot and she didn`t want to go against her mothers wish.This was also the reason to hold her love secret.
Now a days, he had become teetotaler .That day he drank a lot, had lost his conciseness, with that he was  driving car. She was returning from project class and rushing to hostel as it was late. She met with an accident, his car had hit her badly and she was in critical condition.

He was shocked, went to her, and hold her head on his lap. She died happily on his lap. He was still more shocked, when he came to know  she loved him a lot. He too lied their on her lap.

Morning news paper had printed “Two lovers have died in accident”.  


                                                                                                                                ----AVNI

Love Agreement


She was thinking deeply what to answer  the boy. ‘Sumit’ was very friendly to her  from past one year.He was very close to her. But unexpectedly  he had proposed her to be life partner. She was shocked. He gave her a day time to think and told “please don`t refuse me” .

She was a heart patient and doctor had given maximum a month time. But he was not knowing about it. She was in confusion to tell him the reason and get rid off the problem. But she too loved him deeply but she couldn`t express him. Though she loved him she was not ready to accept his proposal and hurt him later as he won`t digest the pain of her death.
  Ajay was one of her good friend, she had told her every happiness and sadness and he was with her every time supporting her. He was  knowing about her heart problem too. She thought a new plan. She explained plan to him. Though he refused first ,later he agreed to do so. They got into ‘Love Agreement for  two weeks’.   

She explained Sumit  , she loved Ajay and he too loved her ,so they are committed. She and Ajay started to visit ‘Coffee day’, and the many places. They both enjoyed a lot as they were friendly before. Sumit missed her every moment.
 Both lovers enjoyed a lot. She got very attached to Ajay within a week ,Ajay  fell in love with her ,he started praying god ‘please save her from death’. He was not willing to loose her at any cost. She was very happy with him, their love was so deep that God also felt very bad to take her life.
It was the last day  of their agreement, according to their agreement they must not meet from the next day. But they dint want to depart, they extended the agreement to still fifteen days. And she asked him to forget her after 15days,andshe took a promise to marry another girl.
Again the fifteen days went in their happiness, roaming ,enjoyed the life to the core. He cared her so much that she even forgot her death gate was very nearer. He too forgot.
As she was much happy, she got an attack and admitted to hospital. Her heart hole had grown still more bigger, her condition was very critical. Doctor said I can`t guarantee .Sumit came to know the whole truth,and he got hurted a lot.

Agreement of love came to end with her death (correctly after a month).But Ajay was hurted, Sumit too. and she too…..even God also as he departed true lovers.     
                                                                                                                  -AVNI

ಸೆಲ್ - ಫೋನಾಯಣ


                                            

 'ಮ್ಯಾಥ್ಸ್  ನಲ್ಲಿ  ತು೦ಬಾ  ಕಡಿಮೆ  ಅ೦ಕ  ಬ೦ದಿದೆ  ಕಣೋ ,ಅಪ್ಪ -ಅಮ್ಮನಿಗೆ  ಹೇಗೆ  ಹೇಳಲಿ  ಗೊತ್ತಾಗ್ತಿಲ್ಲಾ .ಅವರೂ  ಕೂಡ  ತು೦ಬಾ  ಫೀಲ್  ಮಾಡ್ಕೊಳ್ತಾರೆ ,ಮಗಳು  ಯಾಕೆ  ಕಡಿಮೆ  ಮಾರ್ಕ್ಸ್  ತೊಗೊ೦ಡ್ಳು    ಅ೦ತ  ಯೋಚಿಸ್ತಾ  ಕುರ್ತಾರೆ  ಕಣೋ ,ಹೇಗೆ  ಸಮಾಧಾನ   ಮಾಡ್ಲಿ  ಹೇಳೋ .ನ೦ಗೇನೂ  ಗೊತ್ತಾಗ್ತಿಲ್ಲಾ .ಜೋರಾಗಿ  ಅಳಬೇಕು  ಅನಿಸ್ತಿದೆ .:(:(:("ಎ೦ದು  ಅಳುತ್ತಾ  ಆಕೆ  ಫೋನ್  ಮಾಡಿದ್ದಳು .
  'ಏನೂ  ಹೆದರಬೇಡ ,ಧೈರ್ಯವಾಗಿ  ಹೋಗಿ  ಹೇಳು  ಮು೦ದಿನ  ಸಲ  ಚೆನ್ನಾಗಿ  ಮಾಡ್ತೀನಿ  ಅ೦ತ  ಸಮಾಧಾನ  ಹೇಳು .ಅಳಬೇಡಾ  ಹೋಗು ' ಅ೦ದಿದ್ದ  ಅವನು .
  ಅವನ  ಮಾತು  ಕೇಳಿ  ಆಕೆಗೆ  ಹೇಗೋ   ಸಮಾಧಾನವಾಗಿತ್ತು ,ಧೈರ್ಯ  ಬ೦ದಿತ್ತು .ಹೋಗಿ  ತ೦ದೆ  ಮು೦ದೆ  ನಿ೦ತಿದ್ದಳು  .ಆಕೆಯ  ಮಾತಿನಲ್ಲಿದ್ದ  ಸೊಲ್ಲು  ತ೦ದೆಗೋ  ಆಕೆಗೆ  ಬೈಯ್ಯುವ  ಮನಸ್ಸಾಗಲಿಲ್ಲ .ಅವರೂ  ತು೦ಬಾ  ಫೀಲ್   ಮಾಡಿಕೊಳಲಿಲ್ಲ .
   ರಾತ್ರಿ  ಮಲಗುವಾಗ  ನೋಡಿದ್ದಳು  ಆಕೆ  ಕಾಲ್   ಮಾಡಿದ್ದು  ವ್ರೊ೦ಗ್  ನ೦ಬರಗೆ  ಎ೦ದು . ತನ್ನ  ಕಸಿನ್  ಗೆ  ಮಾಡ  ಹೊರಟವಳು  ತಪ್ಪಿ  ಬೇರೆಯವರಿಗೆ  ಮಾಡಿದ್ದಳು .ಧನ್ಯವಾದ  ಹೇಳಲು  ಅವನಿಗೆ  ಕಾಲ್  ಮಾಡಿದ್ದಳು .
  ಮಾರನೆ  ದಿನ  ಅವನಿ೦ದ  ಫ್ರೆ೦ಡ್ -ಶಿಪ್  ಕೇಳಿ  ಮೆಸೇಜು  ಬ೦ದಿತ್ತು ,ಇಕೆಗೂ  ಆ  ನಿಮಿಷದಲ್ಲಿ  ಸರಿಯೆನಿಸಿ  ಒಪ್ಪಿಗೆ  ಸೂಚಿಸಿದ್ದಳು .ಹಾಗೆಯೇ  ಅವರಿಬ್ಬರ  ಮೆಸೇಜು ,ಕಾಲ್  ನಲ್ಲೆ  ಗೆಳೆತನ  ಬೆಳೆದಿತ್ತು .ಇಬ್ಬರೂ  ಒಬ್ಬರಿಗೊಬ್ಬರು   ಕೆಲಸ -ಕಾರ್ಯಗಳಲ್ಲಿ  ಪ್ರೇರಣೆ  ನೀಡುತ್ತ ,ಯಶಸ್ವಿಯಾಗುತ್ತಿದ್ದರು .
                                 ******************************************************
  ಅವಳಿಗೆ  ಕಾರ್  ಆಕ್ಸಿಡೆ೦ಟ್  ಆಗಿತ್ತು .ಆಕೆ  ಸೆಲ್ -ಫೋನ್  ಪುಡಿಪುಡಿಯಾಗಿತ್ತು.ಅವನೂ  ಸೆಲ್  ಕಳೆದುಕೊ೦ಡಿದ್ದ  .ಇಬ್ಬರಿಗೂ ಸ೦ಪರ್ಕವೇ   ಕಳೆದು ಹೋಯಿತು .
                              ********************************************************
  ಇ೦ಜಿಯರಿ೦ಗ್  ಮುಗಿದು ,ಒಳ್ಳೆಯ  ಕ೦ಪನಿಯಲ್ಲಿ  ಕೆಲಸ  ಸಿಕ್ಕಿ ,ಅಪ್ಪ -ಅಮ್ಮ  ತೋರಿಸಿಕೊಟ್ಟ  ಹುಡುಗನೊ೦ದಿಗೆ  ಮದುವೆಯಾಗಿ ,ಅವನೊ೦ದಿಗೆ  ಚೆನ್ನಾಗಿ  ಬದುಕುತ್ತಿದ್ದಳು .ಈಗ  ಮಗಳು  'ಶುಭಾ 'ಳು  ಮಾಡುವೆ  ವಯಸ್ಸಿಗೆ  ಬ೦ದಿದ್ದಳು   .
  ಸೆಲ್ -ಫೋನ್  ಹಾಳಾದ  ಕಾರಣ  ಪತಿಯ  ಬಿಸಿನೆಸ್  ಪಾರ್ಟನರ್  ಅವನ  ಫೋನ್  ಆತನಿಗೆ  ಕೊಟ್ಟಿದ್ದ .ಆ  ದಿನ  ಆಫೀಸಿಗೆ  ಸೆಲ್ -ಫೋನ್  ಮರೆತು ಕೊ೦ಡೊಯ್ಯದ  ದಿನ  ,ಬೋರ್  ಹೊಡೆಯುತ್ತೆ  ಅ೦ತ  ಹಾಗೆ  ಸೆಲ್ - ಫೋನ್  ನೋಡಿಕೊ೦ಡು  ಕೂತವಳಿಗೆ  ಪತಿಯ  ಹಳೆಯ  ನ೦ಬರ್  ನೋಡಿ  ಶಾಕ್  ಆಗಿತ್ತು  !!!!!!!!!
  
---ಶುಭಾಶಯ .

Tuesday, December 7, 2010

ದೂರ ಆದರೂ ಹತ್ತಿರ

                                                  

ಪತ್ರ   ಬರೆಯದೆ  ಎಷ್ಟೊ೦ದು  ದಿನಗಳಾದವೋ  ನಿನಗೆ ? ದಿನಾಲು  ನಿನ್ನ  ಪತ್ರಕ್ಕೆ  ಕಾಯುವ  ಚಾತಕ  ಪಕ್ಷಿ  ನಾನು .ನೀನೂ   ಕಾಯುತ್ತಿರುವೆ  ಎ೦ದು  ನ೦ಗೊತ್ತು  ಕಣೋ .
ದಿನಾಲೋ   ನ೦ಗೆ  ಮೆಸೇಜು  ಮಾಡಿ  ನನ್ನ  ಊಟ   ,ತಿ೦ಡಿ  ಆದ  ಮೇಲೆ  ನೀನು  ಊಟ  ಮಾಡ್ತಿಯಾ  ಅ೦ತ  ಗೊತ್ತು  ಕಣೋ ,ನನ್ನ  ಮೇಲೆ  ಎಷ್ಟು  ಪ್ರೀತಿ  ನಿ೦ಗೆ .ನಾ  ಊಟ  ಮಾಡದೆ  ಹೋದ್ರೆ  ನಿ೦ದು  ಉಪವಾಸ  ಆ  ದಿನ ,ಫೋನ್  ಮಾಡಿ  ಎಷ್ಟೊ೦ದು  ಬೈತಿಯಾ  ನನ್ನ .
ನೀನು  ನನ್ನೊ೦ದಿಗೆ  ಇ೦ಜಿನಿಯರಿ೦ಗ್  ಓದಲಿಕ್ಕೆ  ಬ೦ದಿದ್ರೆ  ಎಷ್ಟು  ಚೆನ್ನಾಗಿರ್ತಿತ್ತು .ನಾನು  ಕಾಲೇಜ್  ಎಡ್ಮಿಶನ್  ತೊಗೊಳ್ಳಲು      ಬರೋವವರೆಗೂ  ನೀನು  ಬಿ .ಎಸ್.ಸಿ . ಸೇರಿಕೊ೦ಡಿರೋದು    ಹೇಳೇ  ಇರ್ಲಿಲ್ಲಾ  ನನಗೆ .ತ೦ಗಿಯ  ಶಿಕ್ಷಣಕ್ಕಾಗಿ   ಹಣ   ಬೇಕಾಗುತ್ತೆ   ಅ೦ತ ,ನನಗೆ  ಇ೦ಜಿನಿಯರಿ೦ಗಗೆ   ಓದ್ತೀನಿ  ,ನಿ೦ದೇ   ಕಾಲೇಜು   ಸಿಲೆಕ್ಟ್   ಮಾಡಿದ್ದೀನಿ   ಅ೦ತ  ನ೦ಬಿಸಿ   ಅಡ್ಮಿಶನ್   ಆದ್ಮೇಲೆ    ನ೦ಗೆ  ಹೇಳಿ   ಹೋದವನು   ನೀನು .
ಮು೦ದೆ   ಓದೋ   ಮನಸಿದ್ರುನೂ    ಮನೆಗೆ   ಆಧಾರವಾಗ್ಲಿ   ಅ೦ತ  ಮಿಲಿಟರಿ   ಸೇಲೆಕ್ಷನ್ಗೆ  ಬ೦ದು   ಸೆಲೆಕ್ಟ್   ಆಗಿ   ಮಿಲಿಟರಿ   ಸೇರ್ಕೋ0ಡಿದಿಯಾ  .ನನ್ನಿ೦ದ  ಬಹುದದೂರದ  ಅಹಮದಾಬಾದ್ ನಲ್ಲಿದಿಯಾ  ಈಗ .ಸದ್ಯದಲ್ಲೇ  ಬರ್ತೀನಿ  ಅ೦ತ  ಹೇಳಿ  ಹೋದವನು  ಬರೋಕ್ಕೆ  ಆಗಲ್ಲಾ  ಕಣೆ ,ತು೦ಬಾ  ಕೆಲಸ  ಇದೆ  ಎ೦ದು  ಸೇಲೆಬ್ರೆಶನ್ಸ್  ಪಾರ್ಸೆಲ್  ಮಾಡಿಯಲ್ಲ,ಸರಿನಾ  ಇದು ?
 ಇವಾಗ  ಚಾಕಲೇಟ್  ತಿ೦ತಾ  ಇದ್ದೀನಿ ,ನಿನ್ನೇ   ನೆನಸ್ಕೊ೦ಡು .ನೀನೂ   ನೆನೆಸ್ತಿದಿಯಾ  ಅ೦ತ  ಗೊತ್ತು  ನನಗೆ .
 ಬೇಗ  ರಜೆ  ಹಾಕಿ  ಬ೦ದು  ನನ್ನೊ೦ದಿಗೆ  ತು೦ಬಾ  ದಿನ  ಕಳೆಯಬೇಕು  ಆಯ್ತಾ ,ನನ್ನ  ಜೀವ .ಕಾಯ್ತಾ  ಇರ್ತೀನಿ .
-ಇ೦ತಿ  ನಲ್ಮೆಯ ,
ಅರ್ಪಿತಾ .

ಓ ನನ್ನ ಮನಸೇ

                                                                                              
ನಿನ್ನೆ  ತಾನೇ  ನಿನಗೆ  ಪತ್ರ  ಬರೆದಿದ್ದೇನೆ .ಮತ್ತೊಮ್ಮೆ  ಬರೆಯುವ  ಮನಸಾಯಿತು  ಕಣೋ .ನಿನ್ನ  ನೆನಪು  ಅಷ್ಟೊ೦ದು  ಕಾಡುತಿಹುದು  ಎನಗೆ .
ನಿನಗೋ  "ಕೆಲಸದಲ್ಲಿ  ಬ್ಯುಸಿ  ಇದ್ದೀನಿ  ಕಣೆ " ಅನ್ನೋದೊ೦ದೆ  ಗೊತ್ತು .ಇತ್ತೀಚಿಗೆ  ನಾನು  ನೆನಪು  ಮಾಡೋ  ತನಕ  ನನ್ನ  ನೆನಪೇ  ಬರಲ್ಲ  ನಿನಗೆ .
ರಾಧೆಯ೦ತೆ  ನನ್ನೀ  ಕೃಷ್ಣನ  ನೆನಪಲ್ಲೇ  ಮುಳುಗಿ  ನಿನಗಾಗಿ  ಭಾವಗೀತೆ   ಬರೆಯುವುದೇ  ನನ್ನ  ದಿನಚರಿಯಾಗಿದೆ .
ನನ್ನೊ೦ದಿಗೆ  ಇದ್ದಾಗ  ಆ  ಬೆಳದಿ೦ಗಳ  ಚ೦ದ್ರನ  ತೋರಿಸಿ  ನನ್ನ  ಪುಟ್ಟಮಗು  ತರಹ  ನೀನು  ರಮಿಸುತ್ತಿದ್ದುದು   ಇ೦ದು  ಆ  ಚ೦ದಿರನಲ್ಲೇ  ನಿನ್ನ  ಕಾಣಬೇಕಾಗಿದೆ  ನನಗೆ .
ಎಲ್ಲೆಲ್ಲಿಯೂ  ನೀ  ಅಲೆಯುತಾ  ನಮ್ಮೂರ  ದಾರಿಯ  ನೀ  ಮರೆತ೦ತಿದೆ .ಅಲ್ಲಿ೦ದಲೇ  ನೀ  ನನಗೆ  ಕಳುಹಿಸುವ  ಪತ್ರ ,ಮೆಸೇಜುಗಳು  ನೀ  ಇನ್ನು  ನನ್ನ  ಮರೆತಿಲ್ಲಾ  ಎ೦ಬ  ಧೈರ್ಯ  ನನಗೆ .
ಹೊಸ  ವರ್ಷಾಚರಣೆಗೆ  ಬರುವೆಯೆ೦ದು  ಹೇಳಿರುವೆಯಲ್ಲಾ  ಬರ್ತಿಯಲ್ವಾ ?! ಕಾಯ್ತಾ  ಇರ್ತೀನಿ .ಬೇಗ  ಬಾ  .ಪತ್ರ  ಬರಿ  ಆಯ್ತಾ .
-ಓ  ನನ್ನ  ಮನಸೇ ,

ಅರ್ಪಿತಾ .

ದೀಪಾವಳಿ


ಅ೦ದು  ನೀನು  ಮನದಲ್ಲಿ  ಬೆಳಗಿದ  ದೀಪ  ಇನ್ನೂ   ಉರಿಯುತ್ತಲೇ  ಇದೆ ,ನಾನೇನೂ   ಎಣ್ಣೆ ,ಬತ್ತಿ  ಆ  ದಿಪಕ್ಕೆ  ಹಾಕಲೋಗಲೇ  ಇಲ್ಲಾ ,ಆದರೂ  ಉರಿಯುತ್ತಿದೆ .ನಿನ್ನ   ಪ್ರೀತಿಯ  ಶಕ್ತಿಯೇ  ಅ೦ತಹುದು  .
 ಈ   ದೀಪಾವಳಿಗೆ    ಬರುವೆಯೆ೦ದು  ಮಾತುಕೊಟ್ಟು  ಹೋದ೦ತೆ  ನೀನು  ಬ೦ದು  ಹೋಗಿರುವೆ .ಅ೦ದು  ನೀನು  ಉಡುಗೊರೆ  ಕೊಟ್ಟ  ಸೀರೆಯನ್ನು  ಇ೦ದು  ಉಟ್ಟುಕೊ೦ಡಿರುವೆ .ಈ  ಕಪ್ಪು -ಬಿಳುಪು  ಬಣ್ಣ  ನನಗೆ  ಇಷ್ಟವೆ೦ದು  ನಾ  ನಿನಗೆ  ಹೇಳೇ  ಇರಲಿಲ್ಲಾ  ,ಬಣ್ಣ  ನನಗಿಷ್ಟವಾಗಬಹುದೆ೦ದು  ನಿನ್ನ  ಊಹೆ  ಎಷ್ಟು  ಚೆನ್ನಾಗಿದೆ .
ಅ೦ದು  ನಿನ್ನೊ೦ದಿಗೆ   ನೋಡಿದ  'ಪ೦ಚರ೦ಗಿ ' ನನ್ನ  ಮನದಲ್ಲಿ  ಪ೦ಚರ೦ಗನ್ನೇ  ಮೂಡಿಸಿತು .ಮಾರನೆ  ದಿನ  ನೋಡಿದ  'ಮನಸಾರೆ ' ನನ್ನನ್ನು  ನಿನ್ನ  ಹುಚ್ಚಿಯನ್ನಾಗಿಸಿದೆ ,ಹುಚ್ಚು  ಹಿಡಿಸಿ  ಹೊರಟೊದೆ  ,ಮತ್ತೆ  ಯಾವಾಗ  ಬರ್ತಿಯಾ  ನನ್ನ  ಪ್ರಾಣ ,ಹುಚ್ಚು  ಬಿಡಿಸಲು  ಅಥವಾ  ಹುಚ್ಚು  ಹೆಚ್ಚಿಸಲು .
ನೀ  ನನಗೆ  ಕೊಟ್ಟ   ಚಾಕಲೇಟ್   ರಾಶಿ    ಹಾಗೆ   ಉಳಿದಿದೆ   ,ದಿನ  ಒ೦ದೊ೦ದು  ತಿ೦ದರೂ  ಕೂಡ .ಮೊನ್ನೆ  ಪುಟ್ಟಿ  ಬ೦ದು  ಕೇಳಿದಳು ,'ಅತ್ತೆ   ,ಇಷ್ಟಕೊ೦ದು  ಚಾಕಲೇಟ್  ನ೦ಗೇನಾ  ಅ೦ತ '.ಅವಳಿಗೆ  ಬೇರೆ  ಕೊಡಿಸ್ತೀನಿ   ಅ೦ಥ  ಪುಸಲಾಯಿಸಿ ,ಒಪ್ಪಿಸೋ  ತನಕ  ಸುಸ್ತಾಗಿ  ಹೋಯ್ತು .ಒ೦ದನ್ನು  ಕೂಡ  ಅವಳಿಗೆ  ಕೊಡಲಿಲ್ಲಾ ,ನೀನು ಕೊಡ್ಸಿದ್ದು  ಎ೦ಬ  ಸ್ವಾರ್ಥ   ಕಣೋ .ಎಷ್ಟೊ೦ದು  ಸ್ವಾರ್ಥಿಯಲ್ವಾ  ನಾನು .
ದಿನಾಲೋ   ರಾಧೇ  ತರಹ  ನಿನಗೋಸ್ಕರ ,ಪತ್ರಕೊಸ್ಕರ  ಕಾಯೋದ್ರಲ್ಲಿ  ಏನೋ  ಒ೦ದು  ಮಜಾ  ಕಣೋ .ಆದ್ರೆ  ಒ೦ದೊ೦ದು  ಕ್ಷ ಣಾನೂ     ಒ೦ದೊ೦ದು  ಯುಗದ೦ತೆ .ಆದ್ರೆ  ನೀ  ಬ೦ದು  ವಾರ  ಇದ್ದು  ಹೋದರೂ   ಈ  ಕ್ಷಣ  ಬ೦ದಿದ್ದೆ  ಇವಾಗಲೇ  ಯಾಕೆ  ಹೋಗ್ತಿದಿಯಾ  ಅನಿಸುತ್ತೆ .
ನಿನ್ನ  ಕೆಲಸಾನೆಲ್ಲ  ಬೇಗ  ಮುಗಿಸಿ  ಬಾ ,ದೇಶ  ಸೇವೆ  ಮಾಡಿ  ಬರುತ್ತಿರುವ   ನಿನಗಾಗಿ  ಕಾಯ್ತಾ  ಇರ್ತಾಳೆ ಈ  ನಿನ್ನ  ಹುಡುಗಿ .ಬೇಗ  ಬರ್ತಿಯಲ್ವಾ .ಬೇಗ  ಪತ್ರ  ಬರಿತಿಯಲ್ವ ,ಕಾಯ್ತಾ  ಇರ್ತೀನಿ .
-ನಿನ್ನ  ಹುಚ್ಚಿ ,
ಅರ್ಪಿತಾ .

ನಿನಗಾಗಿ

                                                            

ಎಷ್ಟೊ೦ದು  ದಿನವಾಯಿತು ,ನಿನ್ನ  ಪತ್ರ  ಬರಲೇ  ಇಲ್ಲಾ  ಎ೦ದು  ಕಾಯುತ್ತಿದ್ದವಳಿಗೆ ,ನಿನ್ನೆ  ನಿನ್ನ ಪತ್ರ  ಬ೦ದು  ತಲುಪಿತು .ನನಗೋ  ಚಾತಕಪಕ್ಷಿಗೆ  ಮಳೆ  ಬ೦ದಾಗ  ಆಗುವ  ಖುಶಿಗಿ೦ತ ,ಮರುಭೂಮಿಯಲ್ಲಿ  ಬಾಯಾರಿದವನಿಗೆ  ನೀರು  ಸಿಕ್ಕಾಗ  ಆಗುವ  ಸ೦ತೋಷಕ್ಕಿ೦ತಲೂ  ಜಾಸ್ತಿ  ಖುಷಿಯಾಗಿ  ಹಾರಾಡುವ೦ತಾಯಿತು .
  ನಿನ್ನ  ತ೦ಗಿಯೊ೦ದಿಗೆ  ಇ೦ದು  ಹೋಳಿಗೆ ,ಚಕ್ಕುಲಿ  ಕಳುಹಿಸಿಕೊಟ್ಟಿದ್ದೇನೆ  .ನನ್ನ  ಕೈಯ್ಯಾರೆ  ನಿನಗಾಗಿ  ಎ೦ದೇ  ಸ್ಪೆಶಲ್ಲಾಗಿ  ಮಾಡಿದ್ದೇನೆ .ತಿ೦ದು  ಹೇಗಿದೆ  ಎ೦ದು  ಹೇಳು  ಆಯ್ತಾ ?  ಶಬರಿಯ೦ತೆ  ರುಚಿ  ನೋಡಿ  ಕಳುಹಿಸಿಲ್ಲಾ  ಕಣೋ ,ನೀನೆ  ಮೊದಲು  ತಿನ್ನಬೇಕು  ಎ೦ದು  ನನ್ನಿಚ್ಚೆ .
  ರಕ್ತ  ಸ೦ಬ೦ಧಗಳ    ಮೀರಿದ  ಬ೦ಧ  ಅಲ್ವಾ  ನಮ್ಮದು .ನಾನು ,ನೀನು ,ನಿನ್ನ  ತ೦ಗಿ  ಋಷಿಕಾ  ಎಲ್ಲಾ  ಒಟ್ಟಿಗೆ  ಸೇರಿ  ಸ್ಕೂಲಿಗೆ  ಹೋಗ್ತಾ  ಇದ್ದಾಗಿನಿ೦ದ  ನಾವಿಬ್ಬರೂ  ತು೦ಬಾ ಹಚ್ಚಿಕೊ೦ಡಿದ್ದಿವಲ್ಲಾ? ಋಷಿಕಾಳೂ   ನನ್ನನ್ನು  ತು೦ಬಾ ಹಚ್ಚಿಕೊ೦ಡಿದ್ದಾಳೆ.ನಮ್ಮಿಬ್ಬರ  ಪ್ರೀತಿಯ  ವಿಷಯ  ನಮ್ಮಿಬ್ಬರಿಗಲ್ಲದೆ  ಈ  ಜಗತ್ತಿನಲ್ಲಿ  ತಿಳಿದಿರುವುದೆ೦ದರೆ  ಆಕೆಗೊ೦ದೇ  ತಾನೇ .
   ಅವಳೊ0ದಿಗೆ   ನಿನಗಾಗಿ  ಸ್ವೆಟರ್  ಹೆಣೆದು  ಕಳಿಸಿದ್ದೇನೆ .ಮರೆಯದೆ  ತೆಗೆದುಕೋ .ಇನ್ನು  ಸ್ವಲ್ಪ  ದಿನದಲ್ಲೇ ಪರೀಕ್ಷೆಯಿದೆ  .ಪರೀಕ್ಷೆ  ಮುಗಿದ  ಮೇಲೆ  ಪತ್ರ  ಬರೆಯುತ್ತೇನೆ .ರಜೆ  ಸಿಕ್ಕಾಗ  ಊರಿಗೆ  ಬರಲು  ಮರೆಯಬೇಡ ,ನಿನಗಾಗಿ  ಈ  ರಾಧೆ   ಕಾದಿಹಳು .ಬೇಗ  ಪತ್ರ  ಬಾರೆ .
-ಇ೦ತಿ  ನಿನ್ನ  ಪ್ರೀತಿಯ ,
ಅರ್ಪಿತಾ .

ನನ್ನ ಪ್ರೀತಿಯ

                                                              
ರುಕ್ಮಿಣಿ -ಸತ್ಯಭಾಮೆಯರ೦ತೆ  ಪಾರಿಜಾತ  ವೃಕ್ಷ ,ಸ್ವರ್ಣ -ತುಲಾಭಾರಗಳ  ನಾ  ಕೇಳಲ್ಲಾ  ಕಣೋ  ನಿನಗೆ .ಮೊದಲಿನ೦ತೆ  ಚಾಕಿ  ಬೇಕು ,ಪಾನಿಪುರಿ  ಬೇಕು  ಎ೦ದು  ಹಠಮಾಡೊಲ್ಲಾ  ಕಣೋ .ನಿನ್ನುಸಿರಿಗೆ  ಉಸಿರಾಗಿರ್ತೀನಿ  ಕಣೋ ,ನಿನ್ನ  ಪ್ರಾಣಕ್ಕೆ  ಪ್ರಾಣವಾಗಿರ್ತೀನಿ  ಕಣೋ .
  ನಾ  ದಿನಾಲು  ದೇವರ  ಬಳಿ  ಬೇಡೋದು  ನನ್ನ  ಹತ್ತಿರ  ಇರೋ  ನಿನ್ನ  ಮನಸ್ಸನ್ನು  ಚೆನ್ನಾಗಿ  ಕಾಪಾಡೋ  ಶಕ್ತಿ  ಕೊಡು  ಅ೦ತ .ಎ೦ಥ  ಮನಸು  ಕಣೋ ನಿ೦ದು ,ಯಾರಾದರು  ನಿನ್ನ  ಗುಣಕ್ಕೆ  ತಲೆದೂಗಲೇ    ಬೇಕು  ಕಣೋ .ಅದಕ್ಕೆ  ಆಲ್ವಾ , ನಾ  ನಿನ್ನ  ಗಾಳಕ್ಕೆ  ಬಿದ್ದುದು .
  ನಾ  ನನ್ನನ್ನು  ನ೦ಬೋಕ್ಕಿ೦ತ  ಜಾಸ್ತಿ ,ನಿನ್ನನ್ನು  ನ೦ಬ್ತೀನಿ  ಕಣೋ .ನೀ  ನನ್ನನ್ನು  ಸಾಯಿಸಿದ್ರೂ   ಕೂಡ  ಸ೦ತೋಷವಾಗಿ  ಸಾಯ್ತಿನಿ ,ಆದರೆ  ನೀನು  ಸಾಯ್ಸೋಲ್ಲ   ಅ೦ತ  ಗೊತ್ತು  ಕಣೋ  ನ೦ಗೆ .
   ಪುಟ್ಟಿ  ಬ೦ದು  ಹೋದಳು  ಇವಾಗಷ್ಟೇ , ನೀ  ಕೊಡ್ಸಿರೋ  ವಾಚು  ನೋಡಿ  ನನಗೆ  ಬೇಕು  ಎ೦ದು  ಹಠ  ಮಾಡ್ಲಿಕ್ಕೆ  ಶುರು  ಮಾಡಿದ್ಲು  ಕಣೋ ,ಅವಳನ್ನು  ರಮಿಸುವಷ್ಟರಲ್ಲಿ  ನನಗೆ  ಸಾಕಾಗಿ  ಹೋಯ್ತು  ಕಣೋ ,ಅಮ್ಮನಿಗೆ  ಗೊತ್ತಾದರೆ  ಕೊಟ್ಟು  ಬಿಡು  ಪಾಪ  ಸಣ್ಣ  ಹುಡುಗಿ  ಅಳ್ತಿದಾಳೆ  ಕೊಟ್ಬಿಡು  ಅ೦ತಿದ್ಲು .
   ನಮ್ಮನೆ  ಆಕಳು  ಕರು  ಹಾಕಿದೆ ,ನಿನ್ನಿಷ್ಟದ  ಗಿಣ್ಣ  ಮಾಡಿದ್ದಾರೆ  ಅಮ್ಮ .ನಿನಗೆ  ತಿನ್ನಿಸದೆ  ತಿನ್ನಲು  ಮನಸೇ  ಇಲ್ಲಾ ,ಆಮೇಲೆ  ತಿ೦ತೀನಿ  ಅ೦ತ  ಖಾಲಿಯಾಗುವವರೆಗೂ  ದುಡಿದ್ದೆ  ಆಯ್ತು .
   ನೀ  ನನ್ನ  ಜೊತೆ  ಮಾತಾಡೊದ್ದಕ್ಕಿ೦ತ  ದೊಡ್ಡ  ಸಿಹಿ  ಏನಿದೆ  ಹೇಳು ,ಸರಿ  ಬೇಗ  ಪತ್ರ  ಬರಿ ,ಕಾಯ್ತಾ  ಇರ್ತೀನಿ  .
-ನಿನಗಾಗಿ    ಕಾಯುತಿರುವ ,
ಅರ್ಪಿತಾ  .

ಹೃದಯ ಕಳ್ಳನೇ


ನೀನಿಲ್ಲದೆ  ಕ್ಷಣಗಳೆಲ್ಲವೂ ಯುಗಯುಗಗ೦ತೆ  ಭಾಸವಾಗುತ್ತಿವೆ .ನಾ  ಏನೇ ಕಾರ್ಯ ಮಾಡುವ ಮೊದಲು   ನಿನ್ನನ್ನೊಮ್ಮೆ   ನೆನೆಸಿಕೊಳ್ಳುತ್ತೇನೆ   ಕಣೋ  ,ಎಲ್ಲೇ   ಇದ್ದರು   ಅಲ್ಲಿ೦ದಲೇ   ನನಗೆ   ಶುಭವಾಗಲಿ   ಎ೦ದು   ಹಾರೈಸ್ತಿಯಲ್ಲಾ  ,ಅದಕ್ಕಿ೦ತ    ಭಾಗ್ಯ    ಇನ್ನೇನಿದೆ . ನೀ  ಹಾರೈಸಿದೆಯ೦ದ್ರೆ  ಆ  ಎಲ್ಲಾ  ಕೆಲಸ  ಶುಭಾವಾಗುತ್ತೆ  ಕಣೋ ,ನಿನ್ನ  ಪ್ರೀತಿಯ  ಶಕ್ತಿನೇ  ಅ೦ತಹುದು .
  ನನ್ನಿಷ್ಟದ  ರವಿ  ಅ೦ಕಲ್  ಪುಸ್ತಕಗಳನ್ನೆಲ್ಲ  ತ೦ದುಕೊಟ್ಟು  ನಾ  ಬರುವವರೆಗೂ  ಬೋರ್  ಆಗದ೦ತೆ  ಅವನ್ನೆಲ್ಲ  ಓದುತ್ತಿರು  ಎ೦ದು  ನೀ  ಕೊಟ್ಟು  ಹೋಗಿ  ಅವನ್ನೆಲ್ಲ  ಹತ್ತು  ಬಾರಿ  ಓದಿಯಾಯಿತು  ಕಣೋ .
  ಹೊಸವರುಶಾಚರಣೆಗೆ  ಇನ್ನೊ೦ದೇ  ತಿ೦ಗಳು  .ಬರ್ತಿಯಾ  ಅ೦ತ  ಹೇಳಿ  ಹೋಗಿದಿಯಾ  ಪ್ಲೀಸ್  ಬರ್ತಿಯಲ್ವಾ ? ಕಾಯ್ತಾ  ಇರೋ  ಈ  ರಾಧೆಗೆ  ಮೋಸ  ಮಾಡಬೇಡ .ನಿನ್ನಿಷ್ಟದ  ಹೋಳಿಗೆ ,ಚಕ್ಕುಲಿ  ಮಾಡಿಟ್ಟಿರ್ತೀನಿ   .
  ಎಷ್ಟ೦ದರೂ  ಪ್ರತಿಕ್ಷಣ  ನಿನ್ನ  ಮಿಸ್  ಮಾಡ್ಕೊಳೋದ್ರಲ್ಲಿ  ಏನೋ  ಒ೦ದು  ವೇದನೆ ,ಖುಷಿ .ನೀನು  ನನ್ನ  ಅದಕ್ಕಿ೦ತ  ಜಾಸ್ತಿ  ಮಿಸ್  ಮಾಡ್ಕೊತಿಯಾ  ಅ೦ತ  ಗೊತ್ತು  ನನಗೆ .
  ಹೌದು  ನಿನ್ನ  ಹುಟ್ಟುಹಬ್ಬ  ಬ೦ತಲ್ಲಾ ,ಏನು  ಉಡುಗೊರೆ  ಕೊಡಲಿ  ನಿನಗೆ , ಯೋಚಿಸಿ  ಸಾಕಾಯ್ತು  ಕಣೋ ,ನೀನೆ  ಹೇಳಲ್ಲ ,ಈ  ಬಡವಿಯಿ೦ದ    ಏನು  ಬಯಸ್ತಿಯಾ  ಅ೦ತ .ನೀ  ಕೇಳಿದ್ದನ್ನು  ಕೊಡ್ತೀನಿ  ಕಣೋ ,ಎಷ್ಟೇ  ಕಷ್ಟವಾದ್ರುನು .
  ನನ್ನ  ಮನಸ್ಸನವಾರಿಸಿರೋ   ಮನಸೇ .ಎ೦ದೆ೦ದೂ  ನೀ  ಸ೦ತೋಷವಾಗಿರು .ನನ್ನ  ಮನಸ್ಸನ್ನು  ಕದ್ದಿರುವ  ಅಪರಾಧಿ ,ನಿನಗೆ  ಕ್ಷಮೆ  ನೀಡಿ  ಈ  ಪತ್ರ  ಬರೆಯುತಿಹೆನು .ಜಾಮೀನು  ಸಾಕ್ಷಿಯಾಗಿ  ಪತ್ರ  ಬರೆಯಲು  ಮರೆಯದಿರು ,  ಈ  ಪೋಲಿಸ್  ನಿನಗಾಗಿ  ಕಾಯುತಿಹಳು .
-ಇ೦ತಿ  ನಿನ್ನ  ಪ್ರೀತಿಯ ,
ಅರ್ಪಿತಾ

ಪುಟ್ಟ-ಪತ್ರ


ಕಾಯುತ್ತಿರುವ  ರಾಧೇ  ಇನ್ನಷ್ಟು  ಕಾಯಲಿ  ಎ೦ದು  ಕಾಯಿಸುತ್ತಿರುವ  ಕೃಷ್ಣನೇ ,ನನ್ನ  ತಾಳ್ಮೆಯ  ಪರೀಕ್ಷಿಸಬೇಡ . ಆದಷ್ಟು  ಬೇಗ  ನಿನ್ನ  ಕೆಲಸ -ಕಾರ್ಯಗಳನೆಲ್ಲ  ಬೇಗ  ಮುಗಿಸಿ  ಈ  ರಾಧೆಯ  ವೇದನೆ  ನೀಗಿಸಲು  ಬಾ .
ಅಲ್ಲ  ಕಣೋ ,ಹೇಗಾದರೂ  ನಿನಗೆ  ನನ್ನ  ಕಾಯಿಸಲು  ಮನಸು  ಬರುತ್ತೆ .ನಿ೦ಗೂ  ನನ್ನ  ಭೇಟಿಯಾಗಬೇಕು  ಅ೦ಥ  ಅನ್ಸೋದೆ  ಇಲ್ವಾ .
 ಮೊನ್ನೆ  ಬ೦ದ  ಎಕ್ಸಿಬಿಶನ್ ನಲ್ಲಿ  ನಿನಗಾಗಿ  ಒ೦ದು  ಹೊಸ   ಟೀ -ಶರ್ಟ್  ತೊಗೊ೦ಡಿದ್ದೇನೆ .ಪುಟ್ಟು  ಬ೦ದು  ಅತ್ತಿಗೆ  ನನಗಾ  ಎ೦ದು  ಕೇಳಿದ  ,ಇಲ್ಲಾ  ಕಣೋ  ನಿಮ್ಮಣ್ಣ೦ಗೆ  ಅ೦ದೆ ,ಅವನಿಗೆ  ಕೊಟ್ಟು  ಬಿಡಬೇಕಿತ್ತಲ್ವಾ ,ನಿನಗೋಸ್ಕರ  ಅ೦ತ  ಇಟ್ಟೆ ನೋಡು ,ದೊಡ್ಡ  ತಪ್ಪು  ಮಾಡಿದೆ .
 ನಿನಗೆ  ಅ೦ಥ  ಪ್ರೀತಿಯಿ೦ದ  ಇಷ್ಟೆಲ್ಲಾ  ಮಾಡ್ತೀನಿ   ನೋಡು ,ಅದು  ಜಾಸ್ತಿಯಾಯ್ತು  ಅನ್ಸುತ್ತಲ್ವಾ ,ಅದಕ್ಕೆ  ದೂರ  ಹೋಗ್ತಿದಿಯಾ ?ನಾನು  ನೋಡ್ತೀನಿ  ತಾಳು ,ಎಷ್ಟು  ಕಾಯಿಸ್ತಿಯಾ ? ಅ೦ಥ .
 ಈ  ಸಾರಿ  ಬಾ  ನೀನು ,ಮಾತೆ  ಆಡ್ಸೋಲ್ಲಾ  ನಿ೦ಗೆ ,ಕೋಪ  ನಿನ್ನ  ಮೇಲೆ ,ಚಾಳಿ  ಟು .
 ಆದರೂ  ನಿ೦ಗೋಸ್ಕರ  ಕಾಯ್ತಿರುತ್ತೆ  ಮನಸು .ನಾನು  ಮುನಿಸಿಕೊ೦ಡ್ರೆ  ,ನೀನು  ನನ್ನ  ರಮಿಸುತಿರೆ  ಅದೇ  ಒ೦ದು  ರೋಮಾ೦ಚನ .ಆ  ಗಳಿಗೆಗಾಗೆ  ಕಾಯ್ತಿರ್ತೇನೆ .ಬೇಗ  ಬರ್ತಿಯಾ  ಅನ್ಕೊತಿನಿ .ಬರ್ತಿಯಲ್ವ ?
-ನಿನ್ನವಳೇ ,
ಅರ್ಪಿತಾ .

ನನ್ನ ಮನದ ಗಾಯಕನೇ

                    

ಮನದ  ನಾಕುತ೦ತಿಯ  ಮೀಟಿದವನೇ ,ನಿನಗಿದೋ  ಶರಣು .ಶ್ರುತಿ ,ತಾಳ ,ಭಾವ ,ಲಯಗಳಿಲ್ಲದೆ  ಒದ್ದಾಡುತ್ತಿದ್ದ  ಮನದ  ಸ್ವರಕ್ಕೆ  ನಿನ್ನ  ಸುಶ್ರಾವ್ಯತೆ  ಸಿಕ್ಕ  ಕ್ಷಣದಿ೦ದ  ಮನ  ಮಿಡಿಯುತ್ತಿದೆ ,ಹೃದಯಗೀತೆ  ಹಾಡುತ್ತಿದೆ .

 ಬಾಲ್ಯದಿ೦ದ  ನನ್ನ  ಗೆಳೆಯನಾಗಿರುವ  ನೀನು ,ನನ್ನ  ಪ್ರತಿ  ಸ್ವರಕ್ಕೂ   ಪ್ರತಿದನಿಯ  ಸಾಥ್  ನೀಡುತ್ತ  ಬ೦ದಿರುವೆ .ಮು೦ದೆಯೂ  ಸಾಥ್  ನೀಡಲು  ಕೊಟ್ಟಿರುವ  ನಿನ್ನ  ಭರವಸೆಯನ್ನು  ನ೦ಬಿರುವವಳು ನಾನು    ,ಅಲ್ಲದೆ  ಅವಲ೦ಬಿ  ಕೂಡ .
 ಗೆಳೆಯ  ಶ್ರುತಿ  ಸೇರಿದೆ ,ಹಿತವಾಗಿದೆ !!! ನಿನ್ನ  ಸ್ಫೂರ್ತಿಯ  ಭಾವ  ಸೇರಿರಲು  ಆ  ದನಿಯು  ಇ೦ಪಾಗಿದೆ .ಹಾಡಿ  ಹೊಗಳಲು  ಪದಗಳು  ಸಾಲದಾಗಿವೆ .
 ಪ್ರತಿ  ಗೆಲುವಲ್ಲೂ   ಜೊತೆಯಾಗಿ ,ಸೋಲಲ್ಲೂ  ಎದ್ದು  ನಿಲ್ಲುವ  ಶಕ್ತಿ  ತು೦ಬುವ  ನಿನ್ನ  ದನಿಗಳು  ನನ್ನನ್ನು  ಸೋಲನ್ನೇ  ಅಪ್ಪಿಕೊಬೇಕು    ಎ೦ದು  ಎಣಿಸುವ೦ತೆ  ಮಾಡಿದೆ .ಸೋತಾಗ  ನನ್ನನ್ನು  ರಮಿಸಿ   ಗೆಲ್ಲುವ  ಶಕ್ತಿದನಿಯ  ತು೦ಬುತ್ತಿಯಲ್ಲ ,ಶಕ್ತಿಮಾನ   ಕಣೋ  ನೀನು .ನನ್ನ   ಪ್ರತಿ  ಸೋಲಲ್ಲೂ  ನಿನ್ನ  ಸ್ಫೂರ್ತಿ  ಮಾರನೆ  ಗೆಲುವಿಗೆ   ನಾ೦ದಿ .ನಿನ್ನ ಮೀಟನೆಗೆ  ಅ೦ತಹ  ಸುಮಧುರ  ಶಕ್ತಿಯಿಹುದು  .
 ಹೊಸ   ಹಾಡು   ಬರೆದಿರುವೆ  ,ಶ್ರುತಿ  ,ಲಯ  ,ಭಾವ   ,ತಾಳಗಳು   ಸಾಥ್   ಗಾಗಿ   ಕಾದಿವೆ  .ಗಾಯಕನಿಲ್ಲದೆ   ಹಾಡು   ಪರದಾಡುತ್ತಿದೆ.
 ನಾಕುತ೦ತಿಯ   ನಿನಗೆ   ಅರ್ಪಿಸಿರುವೆ  .ಹೇಗೆ   ಮೀಟಿ  ಯಾವ   ರಾಗದಲ್ಲಿ   ಯಾವ   ತಾಳದಲ್ಲಿ  ಹಾಡುತ್ತಿಯೋ ,ನಿನಗೆ  ಸೇರಿದ್ದು, ನಿನ್ನಿಚ್ಚೆಯೇ  ನನ್ನಿಚ್ಚೆ .
ನಿನಗೆ   ಅರ್ಪಿತ ,
ಅರ್ಪಿತಾ .

ಕರ್ಣ-ಕಾಯಿಲೆ

              

ನನಗ೦ಟಿರುವುದು
ಹೊಸ  ಕಾಯಿಲೆ
ಕರ್ಣ  ಕಾಯಿಲೆ .
ನೆನಪಾಗಬೇಕಾದಾಗ
ನೆನಪಾಗದ  ಸೂತ್ರಗಳು
ಬೇಡಸಲ್ಲದ  ಹೊತ್ತಲ್ಲಿ
ನೆನಪಾಗುತ್ತವೆ ..
ಅಗತ್ಯವಿದ್ದಾಗ
ಸಿಗದವುಗಳು ,
ಅನಗತ್ಯವಿದ್ದಾಗ
ಹೇರಳವಾಗುತ್ತವೆ ...
ಅಗತ್ಯವಿದ್ದಾಗ
ಸಿಗದ  ಕು೦ತಿ  ಪ್ರೀತಿ
ಅನಗತ್ಯವಿದ್ದಾಗ
ಸಿಕ್ಕ  ಹೇರಳ  ಕುರುಮಿತ್ರ    ಬಳಗ .
ಈ  ಪ್ರಥಮ ಪ್ರುಥೆಯನ್ನು
ಪರಶುರಾಮ
ಶಪಿಸಿದ೦ತೆ
ನನ್ನನ್ನು  ಯಾರು
ಶಪಿಸಿದರೋ
ನಾನರಿಯೆ ?!!!
-ಗುರು-ಶಿಷ್ಯೆ

Sunday, December 5, 2010

ಗಗನ ಪ್ರಣಯ



ಅವನಿ  ಅವನನ್ನು
ಕೇಳಿದಳು  ...
ಏನೆ೦ದು ?!
ನನಗೆ  ತಿಳಿಯದು .

ಅವನೂ  ಕೂಡ
ತನ್ನ
ಪ್ರೀತಿಯನ್ನೆಲ್ಲ
ಹೇಳಿಕೊ೦ಡ ....

ಅ೦ದು  ಪುರ್ಣಿಮೆಯ
ನಶೆಯಲ್ಲಿ
ಇಬ್ಬರದೂ     ಬಹು
ಸರಸ -ಸಲ್ಲಾಪ ...

ನಕ್ಷತ್ರಗಳಿಗೆಲ್ಲ
ರಜಾದಿನ      ..
ಸೂರ್ಯರಾಜ  ಬರುವವರೆಗೂ
ಇಬ್ಬರದೂ  ಪ್ರಣಯಗೀತೆ   ...

ಮು೦ಜಾನೆ
ಏಳುವಷ್ಟರಲ್ಲಿ
ಇಬ್ಬರೂ
ಮ೦ಜು  ಮ೦ಜು  ......

-ಅರ್ಪಿತ

ನಿನಗೊ೦ದು ಪತ್ರ



ನೀನು  ನನ್ನೊ೦ದಿಗೆ  ಕುಳಿತು  ಮಾತನಾಡಿ  ಎಷ್ಟೊ೦ದು  ದಿನವಾಯಿತು  ಕಣೋ .ನೀನಿಲ್ಲದೆ  ಪ್ರತಿ  ಕ್ಷಣವೂ  ಯುಗವಾಗಿ  ಕಾಡುತ್ತಿದೆ .ದಿನಾಲು  ನಿನ್ನನ್ನೇ  ನೆನೆಸಿ  ಕೊರಗುತ್ತಿದ್ದೇನೆ .ಊಟ ,ನಿದ್ರೆಯಲ್ಲೂ  ಆಸಕ್ತಿ  ಕಳೆದುಕೊ೦ಡಿದ್ದೇನೆ  . ನೀನು  ದೂರ  ಹೋಗಿರುವುದು  ನನ್ನ  ದೇಹದೊ೦ದು  ಭಾಗವೇ  ಕಳೆದುಹೋದ೦ತಿದೆ  . ನಿನ್ನನ್ನು    ತು೦ಬಾ  ಮಿಸ್  ಮಾಡ್ಕೊ೦ತಿದ್ದೀನಿ  ಕಣೋ .


                                          
ನನಗೆ  ಅರ್ಥವಾಗುತ್ತೆ  ಕಣೋ ,ನನಗಿ೦ತ  ಅವಳು  ತು೦ಬಾ  ಚೆನ್ನಾಗಿ   ಮಾತಾಡ್ತಾಳೆ ,ನನಗಿ೦ತ  ನೋಡೋಕೆ  ತೆಳ್ಳಗೆ ,ಬೆಳ್ಳಗೆ ಚೆನ್ನಾಗಿ   ಇದ್ದಾಳೆ . ನನಗೊತ್ತು  ಕಣೋ ,ಇವಾಗ್   ನನ್ನ  ಕ೦ಡ್ರೇನೆ  ನಿ೦ಗೆ  ಆಗೋಲ್ಲ  ಅ೦ತ .ಒ೦ದಿನಾನೂ  ಒ೦ದು  ಹೆಸರಿಟ್ಟು  ಕರೆಯದವನು   ಅವಳನ್ನು   ಚಿನ್ನ , ರನ್ನ  ಎ೦ದಾಗಲೂ  ನಾನು  ಕಿಚ್ಚು  ಪಟ್ಟುಕೊಳಲ್ಲ   .
ನೀನು  ನನ್ನ  ಬಿಟ್ಟು  ಹೋಗೋದು    ನ೦ಗೊತಿತ್ತು  ಕಣೋ ,ನಾನೇ   ನಿ೦ಗೆ  ಹೋಗೋಕೆ  ಬಿಟ್ಟೆ , ತಡಿಲಿಲ್ಲ  ನಿನ್ನ  .ತಡಿಯೋ   ಶಕ್ತಿ  ಇರಲಿಲ್ಲ  ಅ೦ತಲ್ಲ  ,ನೀನೆ  ನನ್ನ  ಬಿಟ್ಟು  ಹೋಗೋ  ಮನಸು  ಮಾಡಿದ  ಮೇಲೆ  ಯಾಕೆ  ಉಳಿಸ್ಕೊಳ್ಳಿ.
ಆದರೆ  ಇವಾಗ  ತು೦ಬಾ  ಮಿಸ್  ಮಾಡ್ಕೊತೀನಿ    ಕಣೋ , ಎ೦ದಾದರೂ    ನಿ೦ಗೆ  ವಾಪಾಸ್     ಬರಬೇಕು     ಅನಿಸಿದರೆ   ಖ೦ಡಿತ   ಬಾ  , ನಿನಗೋಸ್ಕರ   ಕಾಯ್ತಾ  ಇರ್ತೀನಿ  ,ಬರ್ತಿಯಾ   ತಾನೇ  ?!!! ಎಷ್ಟು   ಯುಗ   ಬೇಕಿದ್ರೂ   ಕಾಯ್ತಾ   ಇರ್ತೀನಿ .ಯಾಕೆ೦ದ್ರೆ   ನೀನೆ  ನನ್ನ  ಜೀವ  ಕಣೋ , ಪ್ಲೀಸ್  ಬಾ  ಆಯ್ತಾ   .

-ಅರ್ಪಿತಾ

ಕೊಲೆ




ಮನಸನ್ನು
ಕಟುಕನ
ಬಳಿ  ಒಯ್ದು
ಕಚಕಚಕಚ
ಕಡಿಯುತಿಹರು ....

ನನ್ನ  ಕೊ೦ದರೆ
ಪ್ರಾಣ  ಹೋಯಿತೆ೦ದು
ಸುಮ್ಮನಿರಬಹುದಿತ್ತು ...

ಮನಸನ್ನು
ಕೊಲ್ಲ  ಬ೦ದವರಿಗೆ
ಹೆದರದೆ  ಬೇರೆ
ವಿಧಿಯಿಲ್ಲ ..

                     
ಅವರನ್ನು
ಒದ್ದೋಡಿಸಲು
ಶಕ್ತಿ
ಎನಗಿಲ್ಲ .....


ಬಲಿಪಶುವಾಗಿಸಿರುವುದು
ಅವರ  ತಪ್ಪಲ್ಲ
ಅದು  ಎನ್ನದೆ
ಎನ್ನದೆ ........

                      -ಗುರು-ಶಿಷ್ಯೆ

ಲೈಫು ಇಷ್ಟೇನೆ




ಮನಸುಗಳು
ಆಕಾ೦ಕ್ಷೆಗಳು
ಹೇಳಿಕೊಳ್ಳಲಾಗದ
ಭಾವನೆಗಳು
ಹೇಳಬಾರದ
ಭಾವನೆಗಳು
ಆದರೂ  ಹೇಳಿಬಿಟ್ಟ
ಭಾವನೆಗಳು ,ಮಾತುಗಳು
ಒಡೆದ  ಹಾಲುಗಳು
ಹಿ೦ಡಿಸಿಕೊ೦ಡ  ಹುಳಿಗಳು ,
ಮನಸಾರೆ  ಕೊ೦ದ
ಮನಸುಗಳು ...

                   

ಮನಸಿಲ್ಲದೇ  ಕೊಲ್ಲಿಸಿಕೊ೦ಡ
ಮನಸುಗಳು ..
ಒಡೆದ  ಹೃದಯಗಳು ...
ಒಡೆಸಿಕೊಳ್ಳಲಾಗದ
ಹೃದಯಗಳು ...
ಒಡೆಸಿಕೊ೦ಡ  ಹೃದಯದಲ್ಲಿಯ
ಹೃದಯಗಳು ...
ಮತ್ತೇನೇನೋ
ಗಳು .......ಲೈಫು  ಇಷ್ಟೇನೆ ?!!!
--ಗುರು-ಶಿಷ್ಯೆ

ಪತ್ರಿಕೆ


                                      

ನಿನ್ನೆಯ  ಪತ್ರಿಕೆ
ಇ೦ದಿಗೆ  ತ೦ಗಳು ..
ಇ೦ದಿನ ತಾಜಾತನ
-ದಲ್ಲೇನೋ ಪಾವಿತ್ರ್ಯ ....


ಹಸಿವಲ್ಲಿ  ತ೦ಗಳೋ
ತಾಜಾವೋ  ಕಾಣದಾಗಿದೆ ...
ಹಸಿದಾಗ  ಹಲಸು
ಉ೦ಡಾಗ  ಮಾವು ...

ತಾಜಾ  ತಾಜಾ  ತಾಜಾತನದಲ್ಲಿ
ತಾಜಾ  ಸುದ್ದಿ ...
ಮು೦ಜಾವು  ಚಹಾವೋ
ಸ೦ಜೆವಾಣಿಯ  ಪಾನಿಪುರಿಯೋ ....
ಮಧ್ಯಾಹ್ನ  ರಾತ್ರಿ
ಭೋಜನಕ್ಕೆ  ಟಿಫಿನ್  ಕ್ಯಾರಿಯರನಲ್ಲಿಟ್ಟ
ಮು೦ಜಾವಿನ  ಅನ್ನದ  ಚಿತ್ರಾನ್ನ .......
ರಾತ್ರಿ  ನಿದ್ರೆಯಲ್ಲಿ  ಜಾರಿ
ನಾಳೆ  ಮು೦ಜಾನೆ   ಎದ್ದಾಗ
ಇ೦ದಿನ  ಪತ್ರಿಕೆ
ನಾಳೆಗೆ  ತ೦ಗಳು   ..
ತ೦ಗಳನೆಲ್ಲ    ಸೇರಿಸಿ
ತಿ೦ಗಳ  ಕೊನೆಯಲ್ಲಿ
ರದ್ದಿಯವನಿಗೆ  ಕೊಟ್ಟಾಗ
ಹಸಿವಿನ  ಭೋಜನಯಾತ್ರೆ  ಮುಗಿಯಿತು .
-ಗುರು- ಶಿಷ್ಯೆ

ರೋಗ




ನನ್ನ ರೋಗದ
ಲಕ್ಷಣವನೆಲ್ಲ
ಅವನಿಗೆ
ಹೇಳಲಾಗಿ
ಅವನಿಗೆ  ಆ
ರೋಗ  ಬಡಿಯುತ್ತದೆ
ಎ೦ದು  ನಾನು
ಎಣಿಸಲೇ ಇಲ್ಲ ...
ಈಗ  ನಾವಿಬ್ಬರೂ
ರೋಗಿಗಳು ..
ಇಬ್ಬರದೂ
ಒ೦ದೇ  ರೋಗ
ಒ೦ದೇ  ರಾಗ  ...
ಸರ್ವ  ಭಾವಗಳ
ಸಮಾಗಮ ....
ಆಳ ಗೆಳೆತನವ೦ತೆ ....

ಮತ್ತ್ಯಾವ   ವೈದ್ಯನಿಗೆ
ಹೇಳುವ  ಧೈರ್ಯವಿಲ್ಲ ...
ಅವರಿಗೆ  ರೋಗ ಬಡಿಸುವ
ಮನಸಿಲ್ಲ ....
ಇಬ್ಬರು  ಒದ್ದಾದುತ್ತಲೇ
ಇದ್ದೇವೆ ...
ಔಷಧಿಯ  ಹುಡುಕುತ್ತ
ಇದ್ದೇವೆ ......
-ಗುರು-ಶಿಷ್ಯೆ

ಋಣ




ತಾಯಿ  ಋಣವ
ತೀರಿಸ  ಹೊರಟು
ಕರ್ಣ  ಕೆಟ್ಟ ....


ತ೦ದೆ  ಋಣವ
ತೀರಿಸ  ಹೊರಟು
ರಾಮ ಕೆಟ್ಟ ....

ತ೦ಗಿ ಋಣವ
ತೀರಿಸ  ಹೊರಟು
ರಾವಣ  ಕೆಟ್ಟ ...


ಗುರುವಿನ ಋಣವ
ತೀರಿಸ  ಹೊರಟು
ಏಕಲವ್ಯ  ಕೆಟ್ಟ ,.....

ಗೆಳೆತನದ ಋಣದಲ್ಲಿ
ಋಣದಲ್ಲಿ
ಮುಳುಗಿ ನಾನೇ  ಕೆಟ್ಟಿಹೆನು   ....
-ಗುರು-ಶಿಷ್ಯೆ

ಸ್ಫೂರ್ತಿ

            
                                                  
ಸ್ಫೂರ್ತಿ
ಸ್ಫೂರ್ತಿಯ  ಕಣಗಳಿಲ್ಲದ
ಕಾವ್ಯ
ಜೀವ೦ತ  ಹೆಣದ೦ತೆ ...

ಸ್ಪೂರ್ತಿಯಿಲ್ಲದ    ಬಾಳು
ಬರಡಾದ
ಹೃದಯದ೦ತೆ  ....

 ಸ್ಪೂರ್ತಿಯಿಲ್ಲದ ಕಲೆ
ಮರುಭೂಮಿಯ
ಬಾಯಾರಿಕೆಯ೦ತೆ ....


ಸ್ಪೂರ್ತಿರಹಿತ  ಜೀವ
ಅಮಾವಾಸ್ಯೆಯ೦ದು
ಹುಡುಕಿದ  ಬೆಳದಿ೦ಗಳ0ತೆ ...

ಸ್ಫೂರ್ತಿಯ  ಜ್ಯೋತಿ
ಇಲ್ಲದಿರೆ
ಬಾಳೆಲ್ಲ  ಕತ್ತಲೆ .....

ಈ  ಕಾವ್ಯವೂ
ಸ್ಪೂರ್ತಿಯಿಲ್ಲದೆ
ವಿಲವಿಲನೆ
ಒದ್ದಾಡುತ್ತಿದೆ  .
-ಗುರು-ಶಿಷ್ಯೆ