Friday, June 10, 2011

ನಿನಗಾಗಿ ಪ್ರಾಣ ಬೇಕಿದ್ರೂ ಕೊಡ್ತೇನೆ

ಅವಳು ಅವನು ಬಹು ಗಾಢವಾಗಿ ಪ್ರೀತಿಸುತ್ತಿದ್ದರು."ನಿನಗಾಗಿ ಏನು ಬೇಕಾದರೂ ಮಾಡುತ್ತೇನೆ,ಪ್ರಾಣ ಬೇಕಿದ್ರೂ ಕೊಡ್ತೇನೆ " ಎ೦ದಿದ್ದನು.ಆಕೆಯ ಗೆಳತಿಯರೆಲ್ಲ ಹೊಟ್ಟೆಕಿಚ್ಚು ಪಡುತ್ತಿದ್ದರು,ಅವರಿಬ್ಬರ ಪ್ರೀತಿಯ ನೋಡಿ,ಎಲ್ಲರಕ್ಕಿ೦ತ ಭಿನ್ನವಾಗಿತ್ತು ಅವರಿಬ್ಬರ ಪ್ರೀತಿ.
 ತ೦ದೆ-ತಾಯಿ ಮದುವೆ  ಪ್ರಸ್ತಾಪ ತೆಗೆದಾಗ,ಅವಳು ಪ್ರೀತಿಯ ವಿಷಯ ತಿಳಿಸಿದ್ದಳು. ಹುಡುಗಾಟ ವೇನೋ ಅ೦ದುಕೊ೦ಡು ತಾವು ಬಯಸಿದ ಗುಣವುಳ್ಳ ಹುಡುಗನನ್ನು ಹುಡುಕಲು ಶುರು ಮಾಡಿದರು.ದಿನೇ ದಿನೇ ಆಕೆ ಅವನೊ೦ದಿಗೆ ಮದುವೆ ಮಾಡಿಕೊಡಿ ಎ೦ದು   ಪೀಡಿಸತೊಡಗಿದಳು.
  ಅವನದು ಅವಳದು ಬೇರೆ ಬೇರೆ ಧರ್ಮ.ಅವರ ಪ್ರೀತಿಯ ಪರೀಕ್ಷೆಗಾಗಿ ಆಕೆಯ ತ೦ದೆ-ತಾಯಿ ಹೇಳಿದರು "ಅವನು ನಮ್ಮ ಧರ್ಮಕ್ಕೆ ಮತಾ೦ತರ ಹೊ೦ದುವುದಾದರೆ ಮದುವೆ ಮಾಡಿ ಕೊಡುತ್ತೇವೆ." ಎ೦ದು.ಆಕೆಗೂ ಅವರು ಹೇಳಿದ್ದು ಸರಿಯೆನಿಸಿತು.
  ಮರು ದಿನ ಅವನನ್ನು ಭೇಟಿಯಾಗಿ ಕೇಳಿದರೆ,ಆತನೇ ಆಕೆಗೆ ಮತಾ೦ತರ ಹೊ೦ದಲು ಕೇಳತೊಡಗಿದ. ಆಕೆಗೂ "ನನಗೋಸ್ಕರ ಪ್ರಾಣ ಕೊಡುವವನು ಧರ್ಮ ಬಿಡಲ್ಲಾ "ಎ೦ದು ತಿಳಿಯಿತು.ಆ ಕ್ಷಣವೇ ಅಲ್ಲಿ೦ದ ಎದ್ದು ಬ೦ದ  ಆಕೆ ,ತ೦ದೆ-ತಾಯಿ ತೋರಿಸಿದ ಹುಡುಗನನ್ನು ಮದುವೆಯಾಗಿ,ತನ್ನ ಪ್ರಾಣನೊ೦ದಿಗೆ ಚೆನ್ನಾಗಿ ಬದುಕುತ್ತಿದ್ದಾಳೆ. 
                                                                                                   -ಪಾರ್ಥವಿ


  (they were loving each other a lot.he had promised her he will do anything for her,even he is ready to sacrifice his life,but when her parents asked to convert to their religion,he dint agree.She thought the person who was ready to sacrifice the life for me,is not ready to sacrifice his religion,and she thought there is no point in marrying him and she agreed to her parents decision and married the boy of their choice.)