Monday, August 20, 2012

ನಮ್ಮ ಮನೆ -ಅಡುಗೆ ಕಥೆ


ನಲ್ಮೆಯ ಪುಟ್ಟು ,

      ಅಯ್ಯೋ?! ಗೌರವ ಕೊಟ್ಟು ರೀ ಅಂತಿಲ್ಲ, ಅಂತ ಆಶ್ಚರ್ಯ ಪಡ್ತಿದಿಯಾ ? ಎಷ್ಟಂದರೂ ನೀನು ನನ್ನ ಪುಟ್ಟುನೇ ಆಲ್ವಾ,ಕರೆದರೆ ಏನೂ ತಪ್ಪಿಲ್ಲಾ ಅನ್ಕೊತೀನಿ.
 
      ಮದುವೆ   ಆದ ಹೊಸತರಲ್ಲಿ ನಾವಿಬ್ಬರೂ ಅಡಿಗೆಯಲ್ಲಿ ಎಲ್ ಬೋರ್ಡು.ಮಾಡಲು ಬರುತ್ತಿದ್ದುದು ಅನ್ನ ,ಬೇಳೆಸಾರು.ಮದುವೆಯಾಗಿ ಈ  ಮನೆಗೆ ಬಂದ ಮೊದಲ ದಿನಗಳಲ್ಲಿ ,ಅಡಿಗೆ ಸಾಮಾನಿಲ್ಲದೆ,ದಿನಾಲೂ ಎಸ್ .ಎಲ್ .ವಿ (ಹೋಟೆಲ್ ) ಊಟ .ಆ ಹೋಟೆಲ್ ಉದ್ಯೋಗಿಗಳೆಲ್ಲ ನಮ್ಮ ಊರಿನವರೆಂದು,ಅವರೊಂದಿಗೆ ಚೆನ್ನಾಗಿ ಹರಟೆ ಹೊಡೆದು ಬಂದಿದ್ದೆವು.

           ಗ್ಯಾಸ್ ಕನೆಕ್ಷನ್ಗಾಗಿ ವಿಚಾರಿಸಿ ಸೋತು ,ಎಲ್ಲಾ ಗೆಳೆಯರ ಬಹುಮತಾಭಿಪ್ರಾಯದಿಂದ  ಇಂಡಕ್ಷನ್ -ಸ್ಟೋವ್
 ಕೊಂಡು ತಂದು,ತಂದ ದಿನವೇ ಹಾಲುಕ್ಕಿಸಿ (ಹಾಲುಕ್ಕಿಸುವ ಶಾಸ್ತ್ರ ಮುಗಿದಿದ್ದರೂ ), ಅನ್ನ, ಬೇಳೆಸಾರು ಮಾಡಿ ಊಟ
 ಮಾಡಿದ್ದೆವು .ನೆಂಚಿಕೊಳ್ಳಲು ಉಪ್ಪಿನಕಾಯಿ ತರಲು ನಾವು ಮರೆತಿರಲಿಲ್ಲ .ಮಾರನೆ ದಿನವೇ ಸರ್ಪ್ರೈಸ್ ನೀಡಲೆಂದು
 ನಾ   ಮಾಡಿದ ಗುಲಾಬ್ ಜಾಮೂನು.ಅದಕ್ಕೆ ಮಾಡಿದ ಜಾಸ್ತಿ ಪಾಕ ಇನ್ನೆರಡು ದಿನದಲ್ಲಿ ಮತ್ತೆ ಜಾಮೂನು
 ತಯಾರಿಸುವಂತಾಯಿತು.
         ಅಮ್ಮನಿಗೆ  ಫೋನಾಯಿಸಿ ಒಂದೊದಾಗಿ ಅಡಿಗೆ ಮಾಡಿ,ದಿನಾಲೂ ನಮ್ಮ ಮನೆಯಲ್ಲಿ ಹೊಸ ರುಚಿ .
  "ಅಮ್ಮಾ ,ದಿಡೀರ್  ಅಂತ ಹತ್ತೇ ನಿಮಿಷದಲ್ಲಿ ಮಾಡುತ್ತಿದ್ದಿಯಲ್ಲ, ಆ ಸಾರು  ಹೇಗೆ ಮಾಡುತ್ತಿ ??!!! ಅತ್ತಿಗೆ,  ಒಡೆದ ಹಾಲಿನಿಂದ ಸಿಹಿ ತಿನಿಸು  ಹೇಗೆ ಮಾಡುವುದು.ಅತ್ತೆ ಆ ಕಾಳಿನ ಸಾರು ಹೇಗೆ ಮಾಡುತ್ತಿ ?ಎಂದೆಲ್ಲ ಇಬ್ಬರೂ    ಫೋನಾಯಿಸುವುದೇ ದಿನಚರಿಯಾಗಿದ್ದವು.        ಊರಿಗೆ ಹೋದರೂ "ಅಮ್ಮಾ ,ಈ ಪಲಾವ್ ಹೇಗೆ ಮಾಡಿದಿರಿ ??","ಬೇಳೆ ಸಾರು ಇಷ್ಟು ಚೆನ್ನಗಾಗಲು ಏನು
 ಮಾಡಬೇಕು"."ಈ  ಸಾರಿಗೆ ಯಾವ ಒಗ್ಗರಣೆ ಉತ್ತಮ " ಹೀಗೆಲ್ಲ  ನೂರಾರು ಪ್ರಶ್ನೆಗಳೊಂದಿಗೆ ಶುರುವಾಯಿತು ನಮ್ಮ ಮನೆ ಅಡುಗೆ ಕಥೆ.    

       ಪ್ರತಿ ವಾರಾಂತ್ಯದಲ್ಲಿ ನೆಂಟರನ್ನು,ಗೆಳೆಯ-ಗೆಳತಿಯನ್ನೆಲ್ಲ ಕರೆದು ಎಲ್ಲಾ ಸೇರಿ ಅಡಿಗೆ ಮಾಡಿ ಎಲ್ಲರೂ ಆಟವಾಡುತ್ತಾ ಸಮಯ ಕಳೆಯುತ್ತಿದ್ದವು.ಮೊದಮೊದಲು ಮಾಡುತ್ತಿದ್ದುದ್ದು ಅನ್ನ,ಬೇಳೆಸಾರು ,ಸಾಂಬಾರು ,ಕೋಸಂಬರಿ .ಮನೆಗೆ ಯಾರು ಬಂದರೂ ಅದನ್ನೇ ಮಾಡಿ ಬಡಿಸುತ್ತಿದ್ದುದು.ನಂತರ ನಿಧಾನವಾಗಿ ಕಾಳು ಪಲ್ಯ,ಬಜ್ಜಿ,ಶ್ಯಾವಿಗೆ ಪಾಯಸ ಇತ್ಯಾದಿಗಳನ್ನೂ ಮಾಡತೊಡಗಿ ಇತರೆ ಸಿಹಿತಿನಿಸುಗಳನ್ನೂ ಮಾಡುತ್ತಿದ್ದೇವೆ.

     ನಮ್ಮಿಬ್ಬರಿಗೆ ಮಾತ್ರ ಅಡಿಗೆ ಮಾಡುವಾಗ ಸರಿಯಾಗಿ ಆದರೂ,ಇನ್ಯಾರಾದರೂ ಬರುತ್ತಾರೆ ಎಂದರೆ ಟೆನ್ಷನಲ್ಲಿ ಏನಾದರೂ ಹೆಚ್ಚು ಕಡಿಮೆ ಆಗುತ್ತಿದ್ದವು.ಅಣ್ಣ ಸ್ವಲ್ಪ ಮೆತ್ತಗಾಗುವುದು,ಸಾಂಬಾರಿನಲ್ಲಿ ಯಾವುದಾದರೂ ತರಕಾರಿ
ಬೇಯದಿರುವುದು,ಹೀಗೆಲ್ಲ.ಆದರೂ ಅದನ್ನು ಬಿಡದೇ ಮೆತ್ತಗಾದ ಅನ್ನ ಒಗ್ಗರಣೆ ಹಾಕಿ ಮೊಸರು ಬೆರೆಸಿ ಮೊಸರನ್ನ ಮಾಡಿ ಗೆಳೆಯರೆಲ್ಲರೂ ಚಪ್ಪರಿಸಿ ತಿನ್ನುವಂಥ ಉಪಾಯಕ್ಕೆ ತಲೆದೂಗಲೇ ಬೇಕು!


   ಸ್ವಲ್ಪ ದಿನಗಳ ಹಿಂದೆ ಆಫೀಸಿನಲ್ಲಿ 'ಪೊಟ್ ಲಕ್ ' (ನಾವೇ ,ನಮ್ಮ ಕೈಯ್ಯಾರೆ  ಅಡುಗೆ ಮಾಡಿ,ಎಲ್ಲರೂ ಕುಳಿತು ಒಟ್ಟಿಗೆ ಊಟ ಮಾಡುವುದು.) ಇದ್ದಾಗ ಏನು ಅಡುಗೆ ಮಾಡುವುದು ಎಂಬ ತಳಮಳದಲ್ಲಿರಲು,ಬಟಾಟೆ ಪಲ್ಯ,ಶ್ಯಾವಿಗೆ ಪಾಯಸ ಮಾಡುವ ಉಪಾಯ ಹೇಳಿ ಇಬ್ಬರೂ ಸೇರಿ ಮಾಡಿದ ಪಲ್ಯ ಮತ್ತು ಪಾಯಸ ಬಲು ಚೆನ್ನಾಗಿತ್ತು.   ಇವೆಲ್ಲಾ ನಾವು ಮಾತನಾಡಿಕೊಳ್ಳಬಹುದು,ಆದರೆ ಅವು ಪತ್ರ ಬರೆದು ಹೇಳಿದಷ್ಟು ರಸಪೂರಿತವಾಗಿರಲ್ಲ .ಹೀಗಿದೆ,ನಮ್ಮ ಅಡುಗೆ ಮನೆ ಕಥೆ.ಪತ್ರದಲ್ಲಿರೋ ಮಜಾನೇ  ಬೇರೆ. ಪತ್ರ ಬರೆದ್ರೆ ,ಓದಿದರೆ ಒಳ್ಳೆ

ಕಳಿತ ಮಾವಿನ ಹಣ್ಣಿನ ರಸಾಯನ ಮಾಡಿ ತಿಂದ ಹಾಗಿರುತ್ತೆ .'ಸರಿ ಅಡಿಗೆ ಆಗಿದೆ'.ನಿಮ್ಮಿಷ್ಟದ ಬೇಳೆಸಾರು,ಬದನೇಕಾಯಿ ಬಜ್ಜಿ ಮಾಡಿದ್ದೀನಿ ,ಊಟಕ್ಕೆ ಬನ್ನಿ ....!!!!

                                                                           -ಇಂತಿ ನಿನ್ನ  ಪ್ರೀತಿಯ ,
                                                                                ಚಿನ್ನು 
                                   
   

No comments: