Monday, August 20, 2012

ಚಿತ್ರಾಯಣ





ನನ್ನ ನಲ್ಮೆಯ ಹಿರೋ ,
             ಮದುವೆಯಾಗಿ ಹೊಸ ಮನೆಗೆ ಹೊಸ ಸಾಮಾನು ಖರೀದಿಸಿ-ಜೋಡಿಸಿ,ಮಾಡುವುದರೊಳಗೆ  ಸ್ವಲ್ಪ ದಿನಗಳು ಕಳೆದವು.ಈ  ನಡುವೆ ಹೇಗಾದರೂ ಮಾಡಿ ಸಿನಿಮಾ ನೋಡಬೇಕೆಂದು 'ದಮ್ಮು' ನೋಡಿ ಬಂದೆವು.



  ಈ  ನಂತರ 'ಶಗುನಿ','ಕಟಾರಿವೀರ ಸುರ ಸುಂದರಾಂಗಿ' ಹೀಗೆಲ್ಲಾ ವಾರಾಂತ್ಯದಲ್ಲಿ ಅನೇಕ  ಸಿನಿಮಾಗಳನ್ನು
ನೋಡಿದ್ದೆವು.  ವಾರಾಂತ್ಯದಲ್ಲಿ ಕೆಲವೊಮ್ಮೆ ಆಫೀಸ ಕೆಲಸ ಇರುವುದರಿಂದ ಬೇರೆ ದಿನಗಳಲ್ಲಿ ಆಫೀಸು ಮುಗಿದ ನಂತರ ಹೋಗೋಣವೆಂದು ಪ್ಲಾನ್ ಮಾಡಿದ ದಿನಗಳೂ ಇವೆ.ಹಲವಾರು ಬಾರಿ ಆಫೀಸಿನಲ್ಲಿ ತುಂಬಾ ಕೆಲಸ ಇರುವುದರಿಂದ ಅದನ್ನು ಮುಂದೂಡಬೇಕಾಗಿದ್ದವು.



    ಒಮ್ಮೆ ರಾತ್ರಿ ಕೆಲಸವಿದೆ ಎಂದು ಬೇಗ ಮನೆಗೆ ವಿಶ್ರಾಂತಿಗೆಂದು ಆಫೀಸಿನಿಂದ ಮರಳುತ್ತಾ,ನಂತರ ಆ ದಿನ ಕೆಲಸವಿಲ್ಲವೆಂದು ತಿಳಿದು 'ಅಣ್ಣ ಬಾಂಡ್ ' ಸಿನಿಮಾ ಟಿಕೆಟ್ ತೆಗೆದುಕೊಂಡು ನನಗಾಗಿ ಕಾದಿದ್ದೆ.



'ಕಹಾನೀ' ನೋಡಬೇಕೆಂದುಕೊಂಡು,ಆದರೆ ಆ ವಾರಾಂತ್ಯದಲ್ಲಿ ನಾವು ಊರಿಗೆ ಹೋಗಿ,ಇನ್ನೊಂದು ವಾರಾಂತ್ಯ ಕೆಲಸ ಎನ್ನುವುದರೊಳಗೆ ಚಿತ್ರವನ್ನು ನೋಡಲಾಗಲಿಲ್ಲ.ಗೆಳತಿ ಚಿತ್ರಾಳ ಬಳಿ ಪೆನ್ ಡ್ರೈವ್ ನಲ್ಲಿ ಪಡೆದು ನೋಡಲು,ಪ್ರಿಂಟ್ ಚೆನ್ನಾಗಿಲ್ಲ ಎಂದು ನೋಡಿರಲಿಲ್ಲ.ಎರಡು ದಿನದ,ಹಿಂದೆ ಟಿ.ವಿ.ಯಲ್ಲಿ ನೋಡಿ  ಅಂತೂ ಚಿತ್ರ 'ಕಹಾನೀ' ಮುಗಿಯಿತು!!!


ಬಂದ ಮೊದಲ ವಾರವೇ 'ಈಗ' ಚಿತ್ರ ನೋಡಿದ ನಾವು,ಊರಿಗೆ ಹೋಗಲು ಅಣ್ಣನವರಿಗೆ ಚಿತ್ರ ನೋಡಿರೆಂದು ಶಿಫಾರಸ್ಸು ಮಾಡುತಿರಲು,ಅವರೂ ನಮ್ಮನ್ನು ಕರೆಯಲು ಮತ್ತೊಮ್ಮೆ ನೋಡಿದೆವು.ಅಲ್ಲದೆ ಗೆಳೆಯನಿಗೆ ಆ ಚಿತ್ರ ತೋರಿಸಬೇಕೆಂದು,ಅಂತೂ ಇಂತೂ ಮೂರು ಬಾರಿ 'ಈಗ' ನೋಡಿದೆವು.ಗೊತ್ತಿಲ್ಲ,ನಾಳೆ ಇನ್ನ್ಯಾರಿಗಾದರೂ ಕಂಪನಿ ಕೊಡಲು,ಅವರೊಂದಿಗೆ ಹೋಗಬಹುದು!!ನಮ್ಮಿಬ್ಬರಿಗೂ ಅಷ್ಟುಇಷ್ಟವಾಗಿರಬೇಕು,ಈ  ಚಿತ್ರ.


ಕಳೆದವಾರ 'ಜುಲಾಯಿ' ಚಿತ್ರ ನೋಡಬೇಕೆಂದು ನನ್ನ ಆಫೀಸ ಮುಗಿದ  ನಂತರ ನನಗೆ ಚಿತ್ರ ಮಂದಿರದ
ಬಳಿ ಹೋಗಿ ಟಿಕೆಟ್ ಕೊಳ್ಳಲು  ಹೇಳಿ ,ಇನ್ನೇನು ಚಿತ್ರ ಶುರುವಾಗ  ಎರಡು ನಿಮಿಷ ಮುಂಚೆ  ಬಂದಿದ್ದೆ.ಬಸ್ಸಿನಲ್ಲಿ ಕುಳಿತು ಬರಲಾಗುತ್ತೋ ಇಲ್ಲವೋ ಎಂಬ ಯೋಚನೆ ಆಗಿತ್ತು ನಿನಗೆ.ಮಾರನೇ  ದಿನ ಮತ್ತೆ ಗೆಳೆಯರೊಂದಿಗೆ 'ಈಗ' , ಸಂಜೆ
'ಐಸ್  ಏಜ್ 4',ರಾತ್ರಿ ಟಿ.ವಿ.ಯಲ್ಲಿ 'ವೆಡ್ ನೆಸ್ ಡೇ '.ಹೀಗೆ 24 ತಾಸಿನಲ್ಲಿ 4 ಸಿನಿಮಾ ನೋಡಿದ್ದೆವು.


          ಹೀಗೆ ಚಿತ್ರಾಯಣ ನಡೆಯುತ್ತಿರಲು,ಇಂದು ಇನ್ನೊಂದು ಸಿನಿಮಾ ನೋಡೋಣ ಎಂದಿರುವೆ.ಕಾಯುತ್ತಿದ್ದೀನಿ ನಿನ್ನ ಬರುವಿಗಾಗಿ,ಸಿನಿಮಾಗಾಗಿಯಲ್ಲ!!
       
                                                                                -ಇಂತಿ ನಿನ್ನ ಪ್ರೀತಿಯ,
                                                                                     ಚಿನ್ನು



   

No comments: