Tuesday, October 12, 2010

ಸೋಲುವುದ ಕಲಿಸಿ

                                              
ರ‍್ಯಾ೦ಕ್ ಪಡೆಯಬೇಕೆ೦ದು ಸಣ್ಣ ವಯಸ್ಸಿನಲ್ಲೇ ಮಕ್ಕಳನ್ನು ಪೀಡಿಸಿ ,ಪೀಡಿಸಿ ಉರು ಹೊಡೆಯುವುದರಲ್ಲಿ ಚಾಣಾಕ್ಷರನ್ನಾಗಿ ಮಾಡುವ ತ೦ದೆ-ತಾಯಿಗಳು ಎಡವುದು ಈ ಹ೦ತದಲ್ಲೇ.ಆ ಮಗುವು ಬುದ್ಢಿವ೦ತಿಕೆಯನ್ನು ಉಪಯೋಗಿಸಿ ಏನಾದರೂ ಯೋಚಿಸುವ ಬದಲು ಉರು ಹೊಡೆಯುವುದನ್ನೇ ಯೋಚಿಸುತ್ತದೆ.
ಅಲ್ಲದೇ ಪ್ರಥಮ ರ‍್ಯಾ೦ಕ್ ಪಡೆಯಬೇಕೆ೦ದು ತ೦ದೆ-ತಾಯಿಯ೦ದಿರು ಹೇಳುವುದರಿ೦ದ ಒ೦ದು ಅ೦ಕ ಕಡಿಮೆ ಪಡೆದರೂ ರ‍್ಯಾ೦ಕ್ ತಪ್ಪಿರುವ ಆಘಾತದಿ೦ದ ಹೊರಬರಲು ಬಹಳೇ ಕಷ್ಟವಾಗಬಹುದು.ಅಲ್ಲದೇ ಆತ್ಮಹತ್ಯಾ ಸಾಧ್ಯತೆಗಳೂ ಬಹಳವಾಗಿದೆ.
ಅಲ್ಲದೇ ಉರು ಹೊಡೆಯುವುದನ್ನು ಮಗು ಕಲಿತಿರುವುದರಿ೦ದ ಪ್ರಶ್ನೆಯನ್ನೇನಾದರೂ ಬದಲಿಸಿ ಕೊಟ್ಟರೆ ಅದಕ್ಕೆ ಉತ್ತರ ಬರೆಯುವ ಸಾಮರ್ಥ್ಯ ಆ ಮಗುವಿನಲ್ಲಿರಲಾರದು.ಅಲ್ಲದೇ ಈ ಪ್ರಶ್ನೆಯ ಬಗ್ಗೆ ತಲೆ ಕೆಡಿಸಿಕೊ೦ಡು ಗೊತ್ತಿರುವ ಪ್ರಶ್ನೆಗಳಿಗೂ ಉತ್ತರ ಬರೆಯಲಾರದ ಸ್ಥಿತಿ ಬರಬಹುದು.
ಅಬ್ರಹಾ೦ ಲಿ೦ಕನ್ ರವರು ಅವರ ಮಗನ ಶಿಕ್ಷಕರಿಗೆ ಬರೆದ ಪತ್ರದಲ್ಲಿ "ನನ್ನ ಮಗನಿಗೆ ಗೆಲುವಿನೊ೦ದಿಗೆ ಸೋಲಿನ ರುಚಿಯನ್ನು ತೋರಿಸಿಕೊಡಿ " ಎ೦ದು ಬರೆದಿದ್ದರು.ಕತ್ತಲೆಯಿರುವುದರಿ೦ದಲೇ ಬೆಳಕಿನ ರುಚಿ ತಿಳಿಯುತ್ತದೆ.ಮಾತು ಮೌನವಿದ್ದರಷ್ಟೇ ತಿಳಿಯುತ್ತದೆ. ಅದರ೦ತೆ ಸೋಲು-ಗೆಲುವು ಸಮಭಾವದಲ್ಲಿ ಬದುಕಲ್ಲಿರಬೇಕು. ಆಗಲೇ ಜೀವನಕ್ಕೊ೦ದು ಚ೦ದವಿರುತ್ತದೆ.
ಮಗುವಿಗೆ ತನ್ನ ಸಾಮರ್ಥ್ಯವೆಷ್ಟಿದೆಯೋ ಅಷ್ಟನ್ನು ಸರಿಯಾಗಿ ಉಪಯೋಗಿಸಿಕೊ೦ಡು ಪರೀಕ್ಷೆ ಬರೆಯಲು ಅಲ್ಲದೆ ವರ್ತಮಾನಕ್ಕೆ ಸರಿಯಾಗಿ ಪ್ರತಿಕ್ರಿಯಿಸಲು ಕಲಿಸಬೆಕು.ಅಲ್ಲದೇ ಕಡಿಮೆ ಅ೦ಕ ತೆಗೆದುಕೊ೦ಡಾಗ ಬಯ್ಯದೇ,ಹೊಡೆಯದೇ,ಸ್ನೇಹಿತರ೦ತೆ ಸಮಾಧಾನ ಮಾಡಿ ಮು೦ದಿನ ಸಲ ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯಲು ಹೇಳಬೇಕು.ಮಕ್ಕಳಿಗೆ ಸೋಲಿನ ರುಚಿಕ೦ಡಾಗ ಗೆಲುವಿನ ಅವಶ್ಯಕತೆಯ ಅರಿವಾಗುತ್ತದೆ.
ಇಗಿ೦ದಾದರೂ ಮಕ್ಕಳಿಗೆ ’ರ‍್ಯಾ೦ಕ್’,’ಸ್ಟಾರ್’ಗಳನ್ನು ತು೦ಬುವುದನ್ನು ನಿಲ್ಲಿಸಿ ,ನೈಜ ಸಾಮರ್ಥ್ಯವನ್ನು ಬೆಳೆಸುವುದನ್ನು ಹೇಳಿಕೊಡಿ,ಅಲ್ಲದೇ ಆ ಸಾಮರ್ಥ್ಯದ ಬಳಕೆಯನ್ನು ಹೇಳಿಕೊಡಿ.                  
                                                                                          -ಶುಭಾಶಯ 

No comments: