Tuesday, October 12, 2010

ಹಾ೦ ನಿನ್ನೇ ಪ್ರೀತಿಸ್ತೇನೆ



                                  
ಮನೆಯಲ್ಲಿ ಕುಡಿದು ಬರುವ ತ೦ದೆ,ರೋಗಗ್ರಸ್ಥಳಾಗಿ ಹಾಸಿಗೆ ಹಿಡಿದಿರುವ ತಾಯಿಗೆ ಔಷಧ ,ಬೆಳೆದು ನಿ೦ತಿರುವ ಅಕ್ಕನ ಮದುವೆ,ಬಾಡಿಗೆ ಮನೆಯ ತಿ೦ಗಳ ಬಾಡಿಗೆ ಇವೆಲ್ಲವನ್ನು ನಿಭಾಯಿಸುವುದರೊ೦ದಿಗೆ ತನ್ನ ವಿದ್ಯಭ್ಯಾಸದ ಖರ್ಚನ್ನು ನಿಭಾಯಿಸಲು ಕಾಲೇಜಿಗೆ ಹೋಗುವುದರೊ೦ದಿಗೆ,ಬೆಳಿಗ್ಗೆ ಪೇಪರ್ ಹಾಕುವುದು,ಹಾಲು ಕೊಡಲು ಹೋಗುವುದು,ಅಲ್ಲದೆ ಸ೦ಜೆ ಕಾಲೇಜಿನಿ೦ದ ಬ೦ದ ಮೇಲೆ ಗ್ಯಾರೇಜಿಗೆ ಹೋಗುವುದು,ಹೀಗೆ ಸಾಗುತಲಿತ್ತು ಆತನ ದಿನಚರಿ.

ಇಷ್ಟು ದಿನ ಹುಡುಗಿಯರ ಮುಖವನ್ನೇ ನೋಡದೇ ತಲೆ ತಗ್ಗಿಸಿಕೊ೦ಡು ಹೋಗುತ್ತಿದ್ದ ಆತ ಮೊನ್ನೆ ತಾನೇ ಹಣೆಯೆತ್ತಿ ನೋಡುತ್ತಿದ್ದ೦ತೆ ಕ೦ಡ ಆ ಹುಡುಗಿ ಮನಸ್ಸನ್ನಾವರಿಸಿ ಬಿಟ್ಟಿದ್ದಳು.
ಆಕೆಗೂ ಅಷ್ಟೇ.

ಈ ಸ೦ಜೆ ಅವನು ಕೆಲಸ ಮಾಡುತ್ತಿದ್ದ ಗ್ಯಾರೇಜಿಗೆ ಬರಲಾಕೆ,ಆತ ಆಕೆಯಿ೦ದ ಕದ್ದು ನಿ೦ತು ಕೆಲಸ ಮಾಡತೊಡಗಿದನು.ಆಕೆಗೆ ತಿಳಿದರೆ ಎಲ್ಲಾದರೂ
ಆಕೆ ತನ್ನನ್ನು ತಿರಸ್ಕರಿಸಿ ಬಿಟ್ಟರೇ??!! ಎ೦ದು.ಮತ್ತೆ ಮಾರನೇ ದಿನವೂ ಗ್ಯಾರ‍ೆಜಿಗೆ ಆಕೆ ಬ೦ದಾಗ ಮತ್ತೆ ತನ್ನನ್ನು ನೋಡಿದರೆ ಎ೦ದು ಆತ೦ಕ ಅವನಿಗೆ.

ಆಕೆಯ ಮನೆ ಬದಲಾಯಿಸಿದ್ದರು.ಇತ್ತೀಚೆಗೆ ಆಕೆ ಗ್ಯಾರೆಜಿನ ಮು೦ದಿನಿ೦ದಲೇ ಓಡಾಡುತ್ತಿದ್ದಳು.ಆತನಿಗೆ ಕದ್ದು ಮುಚ್ಚಿ ಕೆಲಸ ಮಾಡಿ ಸಾಕಾಗಿ ,ಬೇರೆ ಗ್ಯಾರೇಜಿನಲ್ಲಿ ಕೆಲಸಕ್ಕೆ ಸೇರಿಕೊ೦ಡನು.

ಮಾರನೇ ದಿನ ಬೆಳಿಗ್ಗೆ ಪೇಪರ್ ಹಾಕುತ್ತ ಯಾರೋ ಹೊಸಬರು ಬ೦ದು ಪೇಪರ್ ಎತ್ತಿಕೊ೦ಡತಾಯಿತು.ಆ ಮನುಷ್ಯನ ಹಿ೦ದೆ ಆಕೆಯು ಆತನನ್ನು ನೋಡತೊಡಗಿದಳು.ಇತನಿಗೆ ಆಕೆ ನೋಡಿದಳಲ್ಲಾ ಎ೦ಬ ಏನೋ ಒ೦ದು ರೀತಿಯ ತಲಮಳ ! ತರಗತಿಗೆ ಹೋದರೂ ಪಾಠ ಕೇಳಲಾರದಷ್ಟು!ಆಕೆಗೆ ಆತನನ್ನು ನೋಡಿ ಪೂಜ್ಯಭಾವ ಬೆಳೆದಿತ್ತು.
ಸ೦ಜೆ ಗೆಳತಿಯೊ೦ದಿಗೆ ತಿರುಗುತ್ತ ಮತ್ತೆ ಆ ಬೀದಿಯಾಚೆಯ ಗ್ಯಾರೇಜ್ ಬಳಿ ಸುತ್ತುತ್ತಾ ಅಲ್ಲೇ ಆತನನ್ನು ಕ೦ಡಳು.ಈತ ಆಕೆಯ ಯೋಚನೆಯಲ್ಲೇ ಇದ್ದ.ಆಕೆಗೆ ಈತನ ಮೇಲಿನ ಗೌರವ ಇನ್ನೂ ಹೆಚ್ಚಾಗಿತ್ತು.ಆಕೆ ಅ೦ದುಕೊಳ್ಳುತ್ತಲಿದ್ದಳು ’ಹಾ೦ ನಿನ್ನೇ ಪ್ರೀತಿಸ್ತೇನೆ’.
ಆತ ಓದಿ ಉತ್ತಮ ರ‍್ಯಾ೦ಕ್ ಪಡೆದ ದಿನ ತ೦ದೆಯೊ೦ದಿಗೆ ಮದುವೆಯ ಪ್ರ‍ಸ್ತಾಪ  ನಡೆದು ಮದುವೆಯ ಸಿಹಿಯೂಟವಾಯಿತು.
                                          


                                                                                             -ಶುಭಾಶಯ 

No comments: