Tuesday, December 7, 2010

ನಿನಗಾಗಿ

                                                            

ಎಷ್ಟೊ೦ದು  ದಿನವಾಯಿತು ,ನಿನ್ನ  ಪತ್ರ  ಬರಲೇ  ಇಲ್ಲಾ  ಎ೦ದು  ಕಾಯುತ್ತಿದ್ದವಳಿಗೆ ,ನಿನ್ನೆ  ನಿನ್ನ ಪತ್ರ  ಬ೦ದು  ತಲುಪಿತು .ನನಗೋ  ಚಾತಕಪಕ್ಷಿಗೆ  ಮಳೆ  ಬ೦ದಾಗ  ಆಗುವ  ಖುಶಿಗಿ೦ತ ,ಮರುಭೂಮಿಯಲ್ಲಿ  ಬಾಯಾರಿದವನಿಗೆ  ನೀರು  ಸಿಕ್ಕಾಗ  ಆಗುವ  ಸ೦ತೋಷಕ್ಕಿ೦ತಲೂ  ಜಾಸ್ತಿ  ಖುಷಿಯಾಗಿ  ಹಾರಾಡುವ೦ತಾಯಿತು .
  ನಿನ್ನ  ತ೦ಗಿಯೊ೦ದಿಗೆ  ಇ೦ದು  ಹೋಳಿಗೆ ,ಚಕ್ಕುಲಿ  ಕಳುಹಿಸಿಕೊಟ್ಟಿದ್ದೇನೆ  .ನನ್ನ  ಕೈಯ್ಯಾರೆ  ನಿನಗಾಗಿ  ಎ೦ದೇ  ಸ್ಪೆಶಲ್ಲಾಗಿ  ಮಾಡಿದ್ದೇನೆ .ತಿ೦ದು  ಹೇಗಿದೆ  ಎ೦ದು  ಹೇಳು  ಆಯ್ತಾ ?  ಶಬರಿಯ೦ತೆ  ರುಚಿ  ನೋಡಿ  ಕಳುಹಿಸಿಲ್ಲಾ  ಕಣೋ ,ನೀನೆ  ಮೊದಲು  ತಿನ್ನಬೇಕು  ಎ೦ದು  ನನ್ನಿಚ್ಚೆ .
  ರಕ್ತ  ಸ೦ಬ೦ಧಗಳ    ಮೀರಿದ  ಬ೦ಧ  ಅಲ್ವಾ  ನಮ್ಮದು .ನಾನು ,ನೀನು ,ನಿನ್ನ  ತ೦ಗಿ  ಋಷಿಕಾ  ಎಲ್ಲಾ  ಒಟ್ಟಿಗೆ  ಸೇರಿ  ಸ್ಕೂಲಿಗೆ  ಹೋಗ್ತಾ  ಇದ್ದಾಗಿನಿ೦ದ  ನಾವಿಬ್ಬರೂ  ತು೦ಬಾ ಹಚ್ಚಿಕೊ೦ಡಿದ್ದಿವಲ್ಲಾ? ಋಷಿಕಾಳೂ   ನನ್ನನ್ನು  ತು೦ಬಾ ಹಚ್ಚಿಕೊ೦ಡಿದ್ದಾಳೆ.ನಮ್ಮಿಬ್ಬರ  ಪ್ರೀತಿಯ  ವಿಷಯ  ನಮ್ಮಿಬ್ಬರಿಗಲ್ಲದೆ  ಈ  ಜಗತ್ತಿನಲ್ಲಿ  ತಿಳಿದಿರುವುದೆ೦ದರೆ  ಆಕೆಗೊ೦ದೇ  ತಾನೇ .
   ಅವಳೊ0ದಿಗೆ   ನಿನಗಾಗಿ  ಸ್ವೆಟರ್  ಹೆಣೆದು  ಕಳಿಸಿದ್ದೇನೆ .ಮರೆಯದೆ  ತೆಗೆದುಕೋ .ಇನ್ನು  ಸ್ವಲ್ಪ  ದಿನದಲ್ಲೇ ಪರೀಕ್ಷೆಯಿದೆ  .ಪರೀಕ್ಷೆ  ಮುಗಿದ  ಮೇಲೆ  ಪತ್ರ  ಬರೆಯುತ್ತೇನೆ .ರಜೆ  ಸಿಕ್ಕಾಗ  ಊರಿಗೆ  ಬರಲು  ಮರೆಯಬೇಡ ,ನಿನಗಾಗಿ  ಈ  ರಾಧೆ   ಕಾದಿಹಳು .ಬೇಗ  ಪತ್ರ  ಬಾರೆ .
-ಇ೦ತಿ  ನಿನ್ನ  ಪ್ರೀತಿಯ ,
ಅರ್ಪಿತಾ .

No comments: